333 ಕೋಟಿ ರೂ.ನಿವ್ವಳ ಲಾಭಗಳಿಸಿದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ

ಸರ್ಕಾರಿ ಸ್ವಾಮ್ಯದ ಯೂನಿಯನ್  ಬ್ಯಾಂಕ್ ಆಫ್ ಇಂಡಿಯಾ, ಪ್ರಸಕ್ತ ಹಣಕಾಸು ವರ್ಷದ ಜೂನ್ ಅಂತ್ಯಕ್ಕೆ ಕೊನೆಗೊಂಡ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದ ತನ್ನ ಹಣಕಾಸು ಸಾಧನೆ ಪ್ರಕಟಿಸಿದೆ.
333 ಕೋಟಿ ರೂ.ನಿವ್ವಳ ಲಾಭಗಳಿಸಿದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ
333 ಕೋಟಿ ರೂ.ನಿವ್ವಳ ಲಾಭಗಳಿಸಿದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಯೂನಿಯನ್  ಬ್ಯಾಂಕ್ ಆಫ್ ಇಂಡಿಯಾ, ಪ್ರಸಕ್ತ ಹಣಕಾಸು ವರ್ಷದ ಜೂನ್ ಅಂತ್ಯಕ್ಕೆ ಕೊನೆಗೊಂಡ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದ ತನ್ನ ಹಣಕಾಸು ಸಾಧನೆ ಪ್ರಕಟಿಸಿದೆ.

ಈ ಅವಧಿಯಲ್ಲಿ ಬ್ಯಾಂಕ್ 333 ಕೋಟಿ ರೂಪಾಯಿಗಳಷ್ಟು ನಿವ್ವಳ ಲಾಭ ಗಳಿಸಿದೆ. 2019ರ ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್ ನ ನಿವ್ವಳ ಲಾಭವು 224.43 ಕೋಟಿ ರೂಪಾಯಿಗಳಷ್ಟಿತ್ತು.

ಬ್ಯಾಂಕ್ ನ ಒಟ್ಟಾರೆ ವಾರ್ಷಿಕ ವಹಿವಾಟು 15,42,668 ಕೋಟಿ ರೂಪಾಯಿಗಳಿಗೆ ತಲುಪಿದ್ದು, ವಾರ್ಷಿಕ ಶೇ 5ರಷ್ಟು ಹೆಚ್ಚಳ ಸಾಧಿಸಿದೆ. ಬ್ಯಾಂಕ್ ನ ಒಟ್ಟಾರೆ ಸಾಲ 6,50,127 ಕೋಟಿ ರೂಪಾಯಿಗಳಷ್ಟಿದ್ದು ಶೇ 2ರಷ್ಟು ಏರಿಕೆ ಕಂಡಿದೆ. ಕಾರ್ಪೊರೇಟ್ ಮತ್ತು ಇತರ ವಲಯಗಳಿಗೆ ಗರಿಷ್ಠ ಮೊತ್ತದ ಸಾಲ (ಶೇ 46.18) ವಿತರಿಸಲಾಗಿದ್ದು, ಕೃಷಿ (ಶೇ 15.7), ರಿಟೇಲ್ (ಶೇ 20) ಮತ್ತು ಎಂಎಸ್ ಎಂಇ ವಲಯಕ್ಕೆ ಶೇ 18.2ರಷ್ಟು ಸಾಲ ವಿತರಣೆಯಾಗಿದೆ. ಮುದ್ರಾ ಯೋಜನೆಯಡಿ 14,880 ಕೋಟಿ ರೂಪಾಯಿಗಳ ಸಾಲ ವಿತರಿಸಲಾಗಿದೆ.

ನಿವ್ವಳ ಬಡ್ಡಿ ವರಮಾನವು 6,403 ಕೋಟಿ ರೂಪಾಯಿಗಳಷ್ಟಿದ್ದು, ವರ್ಷದ ಹಿಂದಿನ ಇದೇ ಅವಧಿಯಲ್ಲಿ 5,468 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ವಾರ್ಷಿಕ ಶೇ 17.1ರಷ್ಟು ಹೆಚ್ಚಳ ಕಂಡಿದೆ. 

ಕಾರ್ಯನಿರ್ವಹಣಾ ಲಾಭವು ವರ್ಷದ ಹಿಂದಿನ 3,918 ಕೋಟಿ ರೂಪಾಯಿಗಳಿಂದ 4,034 ಕೋಟಿ ರೂಪಾಯಿಗಳಿಗೆ ಹೆಚ್ಚಳಗೊಂಡು ವಾರ್ಷಿಕ ಶೇ 3ರಷ್ಟು ಏರಿಕೆ ಕಂಡಿದೆ. ಒಟ್ಟು ಠೇವಣಿಗಳ ಮೊತ್ತವು 8,92,542 ಕೋಟಿ ರೂಪಾಯಿಗಳಿಗೆ ತಲುಪಿ, ಶೇ 7.3ರಷ್ಟು ಹೆಚ್ಚಳ ಸಾಧಿಸಿದೆ.

ಬ್ಯಾಂಕ್ ನ ಒಟ್ಟಾರೆ ವಸೂಲಾಗದ ಸಾಲದ ಪ್ರಮಾಣವು (ಜಿಎನ್ ಪಿಎ) ಶೇ 15.59 ರಿಂದ ಶೇ 14.95ರಷ್ಟಕ್ಕೆ ಸುಧಾರಣೆಯಾಗಿದೆ. ನಿವ್ವಳ ವಸೂಲಾಗದ ಸಾಲದ (ಎನ್ಎನ್ ಪಿಎ) ಪ್ರಮಾಣವು ಶೇ 6.47 ರಿಂದ ಶೇ 4.97ರಷ್ಟಕ್ಕೆ ಸುಧಾರಣೆ ಕಂಡಿದೆ.

ರಾಷ್ಟ್ರೀಕೃತ ಬ್ಯಾಂಕ್ ಗಳಾಗಿದ್ದ ಕಾರ್ಪೊರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಂಡಿವೆ. ಈ ವಿಲೀನ ಪ್ರಕ್ರಿಯೆಯು ಈ ವರ್ಷದ ಏಪ್ರಿಲ್ ನಿಂದ ಜಾರಿಗೆ ಬಂದಿದೆ. ವಿಲೀನ ನಂತರದ ಬ್ಯಾಂಕ್ ನ ಒಟ್ಟಾರೆ ಶಾಖೆಗಳ ಸಂಖ್ಯೆ 9,500ಕ್ಕೂ ಹೆಚ್ಚಾಗಿದೆ. ಎಟಿಎಂಗಳ ಸಂಖ್ಯೆ 13,300 ದಾಟಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com