ಎಚ್‌ಡಿಎಫ್‌ಸಿ ಬ್ಯಾಂಕ್ ಡಿಜಿಟಲ್ ಚಟುವಟಿಕೆ, ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್‌ಬಿಐ ಬ್ರೇಕ್!

ಕಳೆದ ಎರಡು ವರ್ಷಗಳಲ್ಲಿ ಆನ್‌ಲೈನ್ ಸೇವೆಗಳಲ್ಲಿ ಆಗಾಗ್ಗೆ ಅಡೆತಡೆ ಎದುರಿಸಿದ ನಂತರ ಯೋಜಿತ ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ವಿತರಣೆಯನ್ನೂ ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ
ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್
Updated on

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಆನ್‌ಲೈನ್ ಸೇವೆಗಳಲ್ಲಿ ಆಗಾಗ್ಗೆ ಅಡೆತಡೆ ಎದುರಿಸಿದ ನಂತರ ಯೋಜಿತ ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ವಿತರಣೆಯನ್ನೂ ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ.

ಎಲ್ಲಾ ಡಿಜಿಟಲ್ ಸೇವೆ ಹಾಗೂ ಪ್ರಸ್ತಾವಿತ ಐಟಿ ಅಪ್ಲಿಕೇಷನ್ ಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು. ಹೊಸದಾಗಿ ಕ್ರೆಡಿಟ್ ಕಾರ್ಡ್ ವಿತರಣೆ ನಿಲ್ಲಿಸಬೇಕು. ಲೋಪದೋಷವನ್ನು ಪತ್ತೆ ಹಚ್ಚಿ ಸರಿಪಡಿಸುವ ಕೆಲಸವನ್ನು ಎಚ್‌ಡಿಎಫ್‌ಸಿ ಆಡಳಿತ ಮಂಡಳಿ ಮಾಡಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆರ್‌ಬಿಐ ಗುರುತಿಸಿದಂತೆ ನಿರ್ಣಾಯಕ ಅವಲೋಕನಗಳೊಂದಿಗೆ ತೃಪ್ತಿದಾಯಕ ಅನುಸರಣೆಯ ಮೇಲೆ ನಿರ್ಬಂಧ ತೆರವಿನ ಬಗ್ಗೆ ಪರಿಗಣಿಸಲಾಗುವುದು.

"ಡಿಜಿಟಲ್ 2.0 (ಪ್ರಾರಂಭವಾಗಬೇಕಿರುವ ಯೋಜನೆ)ಮತ್ತು ಇತರ ಪ್ರಸ್ತಾವಿತ ಬ್ಯುಸಿನೆಸ್  ಜನರೇಟಿಂಗ್ ಐಟಿ ಅಪ್ಲಿಕೇಶನ್‌ಗಳು ಮತ್ತು ಹೊಸ ಕ್ರೆಡಿಟ್ ಕಾರ್ಡ್ ವಿತರಣೆ ತಾತ್ಕಾಲಿಕವಾಗಿ ನಿಲ್ಲಿಸಿ" ಎಚ್‌ಡಿಎಫ್‌ಸಿ ಗೆ ನಿಯಂತ್ರಕ ಸಂಸ್ಥೆ ಹೇಳಿದೆ.

ಆದಾಗ್ಯೂ, ಕ್ರೆಡಿಟ್ ಕಾರ್ಡ್‌ಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇರಿದಂತೆ ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳ ಮೇಲೆ ಆರ್‌ಬಿಐ ಆದೇಶದ ಪರಿಣಾಮ ಬೀರುವುದಿಲ್ಲ.

"ಬ್ಯಾಂಕ್ ತನ್ನ ಡಿಜಿಟಲ್ ಬ್ಯಾಂಕಿಂಗ್ ಚಾನೆಲ್‌ಗಳಲ್ಲಿನ ಇತ್ತೀಚಿನ ಅಡ್ಡಿಯನ್ನು ವಾರಿಸಲು ಜಾಗೃತ, ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಪ್ರಸ್ತುತ ಮೇಲ್ವಿಚಾರಣಾ ಕ್ರಮಗಳು ಅದರ ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್‌ಗಳು, ಡಿಜಿಟಲ್ ಬ್ಯಾಂಕಿಂಗ್ ಚಾನೆಲ್‌ಗಳು ಮತ್ತು ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತನ್ನ ಗ್ರಾಹಕರಿಗೆ ಭರವಸೆ ನೀಡುತ್ತದೆ. ಈ ಕ್ರಮಗಳು ಅದರ ಒಟ್ಟಾರೆ ವ್ಯವಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಬ್ಯಾಂಕ್ ನಂಬುತ್ತದೆ, ”ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಆದೇಶವು ಭಾರತೀಯ ಬ್ಯಾಂಕುಗಳಲ್ಲಿ ಸಿಸ್ಟಮ್ ಮಟ್ಟದ ವೈಫಲ್ಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತದೆ ಮತ್ತು ಇದನ್ನು ಆರ್ಬಿಐ ಒಂದು ಅಸಾಮಾನ್ಯ ನಿಲುವನ್ನಾಗಿ ನೋಡುತ್ತದೆ. ಪ್ರಾಥಮಿಕ ಡೇಟಾ ಸೆಂಟರ್ ನಲ್ಲಿನ ವಿದ್ಯುತ್ ವೈಫಲ್ಯದಿಂದಾಗಿ ನವೆಂಬರ್ 21 ರಂದು ಎಚ್‌ಡಿಎಫ್‌ಸಿ  ಡಿಜಿಟಲ್ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಿತ್ತು.  ಎರಡು ವರ್ಷಗಳ ಅವಧಿಯಲ್ಲಿ ದೇಶದ ಅತಿದೊಡ್ಡ ಬ್ಯಾಂಕಿನಲ್ಲಿನವೆಂಬರ್ 2020 ರ ದತ್ತಾಂಶಗಳಂತೆ 8 ಲಕ್ಷ ಕೋಟಿ ರೂ. ಬಂಡವಾಳವಿದೆ.

2018 ರಲ್ಲಿ ಬ್ಯಾಂಕ್ ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಇದೇ ರೀತಿಯ ತೊಂದರೆ ಎದುರುಸಿದ್ದು ಅದು ಬ್ಯಾಂಕಿಗೆ ಸಾಕಷ್ಟು ಹಿನ್ನಡೆಯನ್ನುಂಟುಮಾಡಿತ್ತು. 2019 ರ ಡಿಸೆಂಬರ್‌ನಲ್ಲಿ ಗ್ರಾಹಕರು ತಮ್ಮ ಇಎಂಐಗಳನ್ನು ಪಾವತಿಸಲು ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಸಹ ಆಗದೆ ಪರದಾಡಿದ್ದರು,  ಇದು ಆರ್‌ಬಿಐಗೆ ಈ ಕುರಿತಂತೆ ತನಿಖೆಯನ್ನು ಪ್ರಾರಂಭಿಸಲು ಪ್ರೇರೇಪಿಸಿತು. 

ಎಚ್‌ಡಿಎಫ್‌ಸಿ ಬ್ಯಾಂಕ್ 2020 ರ ಸೆಪ್ಟೆಂಬರ್ 30 ರವರೆಗೆ 1.5 ಕೋಟಿ ಕೆಡಿಟ್ ಕಾರ್ಡ್ ಗ್ರಾಹಕರನ್ನು ಹೊಂದುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿದ ಬ್ಯಾಂಕುಗಳಲ್ಲಿ ಒಂದೆನಿಸಿದೆ. ಅಲ್ಲದೆ ಸುಮಾರು 3.38 ಕೋಟಿ ಡೆಬಿಟ್ ಕಾರ್ಡ್‌ಗಳನ್ನು ಸಹ ಬ್ಯಾಂಕ್ ವಿತರಣೆ ಮಾಡಿದೆ. ಇದು 2,848 ನಗರಗಳಲ್ಲಿ 15,292 ಎಟಿಎಂಗಳ ವಿಶಾಲ ಜಾಲವನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com