ಪಿಯೂಷ್ ಗೋಯಲ್
ಪಿಯೂಷ್ ಗೋಯಲ್

25 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುವ ಸಾಮರ್ಥ್ಯ ಭಾರತಕ್ಕಿದೆ: ಪಿಯೂಷ್ ಗೋಯಲ್

ಭಾರತದ ವ್ಯಾಪಾರಿಗಳು, ವಾಣಿಜ್ಯೋದ್ಯಮಗಳಿಗಳು, ನುರಿತ ಮಾನವಶಕ್ತಿ ಮತ್ತು ನವೋದ್ಯಮಗಳ ಸಾಮರ್ಥ್ಯದೊಂದಿಗೆ ಮುಂದಿನ 25 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ.
Published on

ಕೋಲ್ಕತಾ: ಭಾರತದ ವ್ಯಾಪಾರಿಗಳು, ವಾಣಿಜ್ಯೋದ್ಯಮಗಳಿಗಳು, ನುರಿತ ಮಾನವಶಕ್ತಿ ಮತ್ತು ನವೋದ್ಯಮಗಳ ಸಾಮರ್ಥ್ಯದೊಂದಿಗೆ ಮುಂದಿನ 25 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ(ಐಸಿಸಿ)ದ ವಾರ್ಷಿಕ ಸಭೆ ವೇಳೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2047ರಲ್ಲಿ ನಾವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ದೇಶದ ವಿಶ್ವದ ನಂಬರ್‍ ಒನ್‍ ಆರ್ಥಿಕ ರಾಷ್ಟ್ರವವಾಗಿರುವುದನ್ನು ಎಲ್ಲರೂ ನೋಡಬೇಕಿದೆ ಎಂದಿದ್ದಾರೆ.

2025 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಕೈಗಾರಿಕೆ ಮತ್ತು ಸರ್ಕಾರ ಸಹಭಾಗಿತ್ವವನ್ನು ಹೊಂದಿರಬೇಕು. ಭಾರತವನ್ನು ಪ್ರಪಂಚ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿ ನೋಡುವ ಸಮಯ ಇದಾಗಿದೆ. ಈ ಅವಕಾಶವನ್ನು ನಾವು ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

‘ಆತ್ಮನಿರ್ಭರ್‍ ಭಾರತ್’ ನಮ್ಮ ಮಂತ್ರ, ನಮ್ಮ ಸ್ಫೂರ್ತಿ, ನಮ್ಮ ಗುರಿಯಾಗಿದೆ. ಇದನ್ನು ಸಕಾರಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಬೇಕು. ಆಧುನಿಕ ಉಪಕರಣಗಳನ್ನು ಆಮದು ಮಾಡಿಕೊಳ್ಳಬೇಕು. ಇವು ಕೆಲಸವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಉತ್ತಮ ಗುಣಮಟ್ಟದ, ಉತ್ತಮ ಉತ್ಪಾದಕತೆಯ ಮಾನದಂಡಗಳನ್ನು ಮತ್ತು ಭಾರತದಲ್ಲಿ ಸ್ಪರ್ಧಾತ್ಮಕ ಉತ್ಪಾದನೆ ಹೆಚ್ಚಿಸಲು ಸಹ ನೆರವಾಗುತ್ತವೆ ಎಂದು ಗೋಯಲ್‍ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com