ವಾಟ್ಸ್ ಆಪ್ ಪೇ: ಡಿಜಿಟಲ್ ಪೇಮೆಂಟ್ ಆಪ್ ವಿಭಾಗಕ್ಕೂ ಕಾಲಿಟ್ಟ ವಾಟ್ಸ್ ಆಪ್!

ಮೆಸೆಂಜರ್ ಆಪ್ ವಾಟ್ಸ್ ಆಪ್ ಈಗ ಡಿಜಿಟಲ್ ಪೇಮೆಂಟ್ ಮೋಡ್ ಗೂ ಕಾಲಿಟ್ಟಿದ್ದು, ಆಂಡ್ರಾಯ್ಡ್, ಐಒಎಸ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ಗ್ರಾಹಕರು ವಾಟ್ಸ್ ಆಪ್ ಪೇ ನ್ನು ಬಳಕೆ ಮಾಡಬಹುದಾಗಿದೆ.
ವಾಟ್ಸ್ ಆಪ್ ಪೇ; ಡಿಜಿಟಲ್ ಪೇಮೆಂಟ್ ಆಪ್ ವಿಭಾಗಕ್ಕೂ ಕಾಲಿಟ್ಟ ವಾಟ್ಸ್ ಆಪ್!
ವಾಟ್ಸ್ ಆಪ್ ಪೇ; ಡಿಜಿಟಲ್ ಪೇಮೆಂಟ್ ಆಪ್ ವಿಭಾಗಕ್ಕೂ ಕಾಲಿಟ್ಟ ವಾಟ್ಸ್ ಆಪ್!

ನವದೆಹಲಿ: ಮೆಸೆಂಜರ್ ಆಪ್ ವಾಟ್ಸ್ ಆಪ್ ಈಗ ಡಿಜಿಟಲ್ ಪೇಮೆಂಟ್ ಮೋಡ್ ಗೂ ಕಾಲಿಟ್ಟಿದ್ದು, ಆಂಡ್ರಾಯ್ಡ್, ಐಒಎಸ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ಗ್ರಾಹಕರು ವಾಟ್ಸ್ ಆಪ್ ಪೇ ನ್ನು ಬಳಕೆ ಮಾಡಬಹುದಾಗಿದೆ.

ನವೆಂಬರ್ 6 ರಂದು ವಾಟ್ಸ್ ಆಪ್ ಪೇಮೆಂಟ್ ಆಪ್ ನ್ನು ಭಾರತದಲ್ಲಿ ಪರಿಚಯಿಸುವುದಾಗಿ ಘೋಷಿಸಿತ್ತು. ಮೆಸೇಜ್ ಕಳಿಸಿದಷ್ಟೆಯೇ ಸರಾಗವಾಗಿ ಹಣವನ್ನೂ ವರ್ಗಾವಣೆ ಮಾಡುವ ಸೌಲಭ್ಯವನ್ನು ವಾಟ್ಸ್ ಆಪ್ ಪೇ ಒದಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಕುಟುಂಬ ಸದಸ್ಯರಿಗೆ ಸುರಕ್ಷಿತವಾಗಿ ಹಣ ತಲುಪಿಸಬಹುದು ಅಥವಾ ಸರಕುಗಳ ವೆಚ್ಚವನ್ನು ಕಳಿಸಬಹುದು. ಇದಕ್ಕಾಗಿ ಬ್ಯಾಂಕ್ ನ ಖಾತೆಯನ್ನು ಜೋಡಣೆ ಮಾಡಬೇಕಾಗುತ್ತದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com