ಜನವರಿ ಅಂತ್ಯದವರೆಗಿನ ಬಜೆಟ್ ಅಂದಾಜು: ಶೇ.128.5 ರಷ್ಟಕ್ಕೆ ತಲುಪಿದ ವಿತ್ತೀಯ ಕೊರತೆ

ಜನವರಿ ಅಂತ್ಯದವರೆಗಿನ ಬಜೆಟ್ ಅಂದಾಜಿನಲ್ಲಿ ವಿತ್ತೀಯ ಕೊರತೆ ಶೇ.128.5 ರಷ್ಟಕ್ಕೆ ತಲುಪಿದೆ ಎಂದು ಸಿಜಿಎಯ ಮೂಲಕ ತಿಳಿದುಬಂದಿದೆ.
ಜನವರಿ ಅಂತ್ಯದವರೆಗಿನ ಬಜೆಟ್ ಅಂದಾಜು: ಶೇ.128.5 ರಷ್ಟಕ್ಕೆ ತಲುಪಿದ ವಿತ್ತೀಯ ಕೊರತೆ
ಜನವರಿ ಅಂತ್ಯದವರೆಗಿನ ಬಜೆಟ್ ಅಂದಾಜು: ಶೇ.128.5 ರಷ್ಟಕ್ಕೆ ತಲುಪಿದ ವಿತ್ತೀಯ ಕೊರತೆ

ನವದೆಹಲಿ: ಜನವರಿ ಅಂತ್ಯದವರೆಗಿನ ಬಜೆಟ್ ಅಂದಾಜಿನಲ್ಲಿ ವಿತ್ತೀಯ ಕೊರತೆ ಶೇ.128.5 ರಷ್ಟಕ್ಕೆ ತಲುಪಿದೆ ಎಂದು ಸಿಜಿಎಯ ಮೂಲಕ ತಿಳಿದುಬಂದಿದೆ.

2018-19 ರ ಸಾಲಿನ ಇದೇ ಅವಧಿಯಲ್ಲಿ ಪರಿಷ್ಕೃತ ಬಜೆಟ್ ಅಂದಾಜಿನ ವಿತ್ತೀಯ ಕೊರತೆ ಶೇ.121.5 ರಷ್ಟಿತ್ತು. ಸರ್ಕಾರದ ಖರ್ಚು ಹಾಗೂ ಆದಾಯಕ್ಕೆ ಇರುವ ಅಂತರವನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ. ಈ ಮೊತ್ತ 9,85,472 ಕೋಟಿ ರೂಪಾಯಿಗಳಷ್ಟಿದೆ. 

ಮಾರ್ಚ್ 31 ರ ಆರ್ಥಿಕ ವರ್ಷದ ಅಂತ್ಯಕ್ಕೆ ಸರ್ಕಾರ ವಿತ್ತೀಯ ಕೊರತೆಯನ್ನು 7,66,846 ಕೋಟಿಗೆ ನಿಲ್ಲಿಸುವ ಗುರಿ ಹೊಂದಿತ್ತು. ಈ ವರ್ಷದ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್, ಆದಾಯ ಕೊರತೆ ಹಿನ್ನೆಲೆಯಲ್ಲಿ ವಿತ್ತೀಯ ಕೊರತೆಯ ಟಾರ್ಗೆಟ್ ನ್ನು ಜಿಡಿಪಿಯ ಶೇ.3.3 ರಿಂದ ಶೇ.3.8 ಕ್ಕೆ ಏರಿಕೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com