ಬಿಎಸ್-6 ಎಫೆಕ್ಟ್: ಏಪ್ರಿಲ್ 1ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಏಪ್ರಿಲ್ 1ರಿಂದ ಬಿಎಸ್-6 ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಲು ತಾನು ಸಿದ್ಧವಿರುವುದಾಗಿ ಹೇಳಿಕೊಂಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಇಂದನ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಲಿದೆ ಎಂದು ಶುಕ್ರವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಏಪ್ರಿಲ್ 1ರಿಂದ ಬಿಎಸ್-6 ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಲು ತಾನು ಸಿದ್ಧವಿರುವುದಾಗಿ ಹೇಳಿಕೊಂಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಇಂದನ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಲಿದೆ ಎಂದು ಶುಕ್ರವಾರ ತಿಳಿಸಿದೆ.

ಸಾರ್ವಜನಿಕ ವಲಯದ ತೈಲ ಕಂಪನಿಗಳು ಬಿಎಸ್-6 ಗುಣಮಟ್ಟದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುವುದಕ್ಕಾಗಿ ಸಂಸ್ಕರಣಾಗಾಗಳನ್ನು ನವೀಕರಿಸಲು ಸುಮಾರು 80 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದು, ಈ ನವೀಕರಣ ವೆಚ್ಚವನ್ನು ಗ್ರಾಹಕರ ಮೇಲೆ ವಿಧಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿವೆ.

ಭಾರತದ ಅತಿ ದೊಡ್ಡ ಇಂಧನ ಪೂರೈಕೆದಾರ ಐಒಸಿ ಸಹ "ಸಲ್ಫರ್ ಅಂಶ ಕಡಿಮೆ ಇರುವ ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗಾಗಿ 17,000 ಕೋಟಿ ವೆಚ್ಚದಲ್ಲಿ ಸಂಸ್ಕರಣಾ ಘಟಕಗಳನ್ನು ನವೀಕರಣ ಮಾಡಿದೆ" ಎಂದು ಐಓಸಿ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

ಏಪ್ರಿಲ್ 1ರಿಂದ ಬಿಎಸ್-6 ಗುಣಮಟ್ಟದ ಪೆಟ್ರೋಲ್, ಡಿಸೇಲ್ ಮಾರುಕಟ್ಟೆಗೆ ಬರಲಿದೆ ಎಂದು ಐಒಸಿ ಹೇಳಿದೆ.

ಘಟಕಗಳನ್ನು ನವೀಕರಣ ಮಾಡಿರುವ ಕಾರಣದಿಂದಾಗಿ ವೆಚ್ಚವೂ ಅಧಿಕವಾಗಲಿದ್ದು, ಇದರ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com