ಎಜಿಆರ್ ಬಾಕಿ:  ಹೆಚ್ಚುವರಿ 8,004 ಕೋಟಿ ರು. ಪಾವತಿಸಿದ ಭಾರ್ತಿ ಏರ್‌ಟೆಲ್

ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ಟೆಲಿಕಾಂ ಇಲಾಖೆಗೆ  (ಡಿಒಟಿ) ಸರಿಹೊಂದಿಸಿದ ಒಟ್ಟು ಆದಾಯದ ಬಾಕಿ ಮೊತ್ತವಾಗಿ  ಹೆಚ್ಚುವರಿ 8,004 ಕೋಟಿ ರೂ.ಗಳನ್ನು ಪಾವತಿಸಿದ್ದಾಗಿ ಶನಿಆರ ಹೇಳಿಕೆ ನೀಡಿದೆ.ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರವಾಗಿ 2020 ರ ಫೆಬ್ರವರಿ 17 ರಂದು ಕಂಪನಿಯು ಪಾವತಿಸಿದ 10,000 ಕೋಟಿ ರೂ.ಗಳ ಜೊತೆಗೆ 8,004 ಕೋಟಿ ಹೆಚ್ಚುವರಿ ಪಾವತಿ ಇದೆ ಎಂದು ಕಂ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ಟೆಲಿಕಾಂ ಇಲಾಖೆಗೆ  (ಡಿಒಟಿ) ಸರಿಹೊಂದಿಸಿದ ಒಟ್ಟು ಆದಾಯದ ಬಾಕಿ ಮೊತ್ತವಾಗಿ  ಹೆಚ್ಚುವರಿ 8,004 ಕೋಟಿ ರೂ.ಗಳನ್ನು ಪಾವತಿಸಿದ್ದಾಗಿ ಶನಿಆರ ಹೇಳಿಕೆ ನೀಡಿದೆ.ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರವಾಗಿ 2020 ರ ಫೆಬ್ರವರಿ 17 ರಂದು ಕಂಪನಿಯು ಪಾವತಿಸಿದ 10,000 ಕೋಟಿ ರೂ.ಗಳ ಜೊತೆಗೆ 8,004 ಕೋಟಿ ಹೆಚ್ಚುವರಿ ಪಾವತಿ ಇದೆ ಎಂದು ಕಂಪನಿ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಿದೆ.

ಡಿಸೆಂಬರ್ 31, 2019 ರವರೆಗೆ ಸ್ವಯಂ-ಮೌಲ್ಯಮಾಪನ ಆಧಾರದ ಮೇಲೆ ಹೊಣೆಗಾರಿಕೆಗಳನ್ನು ಲೆಕ್ಕಹಾಕಲಾಗಿದೆ ಪಾವತಿಯು 2020 ರ ಫೆಬ್ರವರಿ 29 ರವರೆಗಿನ ಬಡ್ಡಿಯನ್ನು ಒಳಗೊಂಡಿದೆ.ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ತೀರ್ಪಿನ ಅನುಸಾರವಾಗಿ ಕಂಪನಿಯು 2006-07ರ ಆರ್ಥಿಕ ವರ್ಷದಿಂದ  2019 ರ ಡಿಸೆಂಬರ್ 31 ರವರೆಗೆ ಸ್ವಯಂ ಮೌಲ್ಯಮಾಪನವನ್ನು ನಡೆಸಿದೆ ಮತ್ತು ಅದರ ಮೇಲಿನಬಡ್ಡಿಯನ್ನು  ಫೆಬ್ರವರಿ 29, 2020 ರವರೆಗೆ  ಪಾವತಿಸಿದೆ ಎಂದು ಭಾರ್ತಿ ಏರ್‌ಟೆಲ್ ಹೇಳಿದೆ.

ಈ ಪಾವತಿಒಯಲ್ಲಿ  ಭಾರ್ತಿ ಏರ್‌ಟೆಲ್, ಭಾರ್ತಿ ಹೆಕ್ಸಾಕಾಮ್ ಮತ್ತು ಟೆಲಿನರ್ ಇಂಡಿಯಾದ ಮೇಲಿನ ಹೊಣೆಗಾರಿಕೆಗಳು ಸೇರಿವೆ.

ಡಿಒಟಿ ಅಂದಾಜಿನ ಪ್ರಕಾರ, ಏರ್‌ಟೆಲ್ ಸುಮಾರು 35,586 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.ಇದರಲ್ಲಿ ಪರವಾನಗಿ ಶುಲ್ಕ, ಸ್ಪೆಕ್ಟ್ರಮ್ ಬಳಕೆಯ ಶುಲ್ಕಗಳು 2019 ರ ಜುಲೈ ವರೆಗೆ ಪಾವತಿಸದ ಮೊತ್ತದ ಬಡ್ಡಿ, ದಂಡ ಮತ್ತು ದಂಡದ ಬಡ್ಡಿ ಕೂಡ ಸೇರಿದೆ. 

"ಈ ಪಾವತಿಯ ಆಧಾರದ ಮೇಲೆ ನಾವು ಈಗ ಎಜಿಆರ್ ತೀರ್ಪು ಮತ್ತು 2019 ರ ಅಕ್ಟೋಬರ್ 24 ರ ಮಾನ್ಯ ಸುಪ್ರೀಂ ಕೋರ್ಟ್ ಆದೇಶದ ನಿರ್ದೇಶನಗಳನ್ನು ಪಾಲಿಸಿದ್ದೇವೆ" ಎಂದು ಕಂಪನಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com