ಮಾಸಿಕ 160 ರೂ. ಗೆ ಎಲ್ಲಾ ಉಚಿತ ಚಾನೆಲ್‌ಗಳನ್ನು ಪಡೆಯಿರಿ: ಟ್ರಾಯ್

 ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಯತ್ನದ ನಿಟ್ಟಿನಲ್ಲಿ ಕೇಬಲ್ ಮತ್ತು ಪ್ರಸಾರ ಸೇವೆಗಳಿಗಾಗಿ ಹೊಸ ನಿಯಂತ್ರಕ ಚೌಕಟ್ಟಿನಲ್ಲಿ ತಿದ್ದುಪಡಿಗಳನ್ನುಟ್ರಾಯ್ ಬುಧವಾರ ಘೋಷಿಸಿದೆ.  ಇದರ ಅಡಿಯಲ್ಲಿ ಕೇಬಲ್ ಟಿವಿ ಬಳಕೆದಾರರು ಕಡಿಮೆ ಚಂದಾದಾರಿಕೆ ಬೆಲೆಯಲ್ಲಿ ಹೆಚ್ಚಿನ ಚಾನಲ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಯತ್ನದ ನಿಟ್ಟಿನಲ್ಲಿ ಕೇಬಲ್ ಮತ್ತು ಪ್ರಸಾರ ಸೇವೆಗಳಿಗಾಗಿ ಹೊಸ ನಿಯಂತ್ರಕ ಚೌಕಟ್ಟಿನಲ್ಲಿ ತಿದ್ದುಪಡಿಗಳನ್ನುಟ್ರಾಯ್ ಬುಧವಾರ ಘೋಷಿಸಿದೆ.  ಇದರ ಅಡಿಯಲ್ಲಿ ಕೇಬಲ್ ಟಿವಿ ಬಳಕೆದಾರರು ಕಡಿಮೆ ಚಂದಾದಾರಿಕೆ ಬೆಲೆಯಲ್ಲಿ ಹೆಚ್ಚಿನ ಚಾನಲ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ.

ವಿಶೇಷವೆಂದರೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಉಚಿತ ಚಾನಲ್‌ಗಳಿಗೆ ಗ್ರಾಹಕರು 160 ರು. ಪಾವತಿಸಬೇಕೆಂದು ನಿರ್ದೇಶನ ನೀಡಿದೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಟಿವಿ ಸಂಪರ್ಕಗಳು ಕಾರ್ಯನಿರ್ವಹಿಸುತ್ತಿರುವ ಒಂದಕ್ಕಿಂತ ಹೆಚ್ಚು ಟಿವಿಗಳಿರುವ ಮನೆಗಳ ಸಂದರ್ಭದಲ್ಲಿ ಎರಡನೇ ಟಿವಿ ಸಂಪರ್ಕಕ್ಕಾಗಿ ಘೋಷಿತ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕ (ನೆಟ್‌ವರ್ಕ್ ಕೆಪಾಸಿಟಿ ಫೀ-ಎನ್‌ಸಿಎಫ್) ಗರಿಷ್ಠ 40 ಪ್ರತಿಶತವನ್ನು ವಿಧಿಸಲಾಗುವುದು ಎಂದು ಟ್ರಾಯ್ ಹೇಳಿಕೆಯಲ್ಲಿ ತಿಳಿಸಿದೆ

ವಿವಿಧ ನಿಬಂಧನೆಗಳನ್ನು ಪರಿಶೀಲಿಸಿದ ನಂತರ, ಟ್ರಾಯ್ 00 ಚಾನೆಲ್‌ಗಳಿಗೆ ಗರಿಷ್ಠ ಎನ್‌ಸಿಎಫ್ ಶುಲ್ಕವನ್ನು 130 ರೂಗಳಿಗೆ (ತೆರಿಗೆ ಹೊರತುಪಡಿಸಿ) ಕಡಿಮೆ ಮಾಡಿದೆ.ಇದಲ್ಲದೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಡ್ಡಾಯವೆಂದು ಘೋಷಿಸಿದ ಚಾನೆಲ್‌ಗಳನ್ನು ಎನ್‌ಸಿಎಫ್‌ನಲ್ಲಿನ ಚಾನೆಲ್‌ಗಳ ಸಂಖ್ಯೆಯಲ್ಲಿ ಸೇರಿಸಲಾಗಿಲ್ಲ ಎಂದು ಟ್ರಾಯ್ ಹೇಳಿದೆ.

ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ದೀರ್ಘಾವಧಿಯ ಚಂದಾದಾರರಿಗೆ ರಿಯಾಯಿತಿಯನ್ನು ನೀಡಲು ವಿತರಣಾ ಪ್ಲಾಟ್‌ಫಾರ್ಮ್ ಆಪರೇಟರ್‌ಗಳಿಗೆ (ಡಿಪಿಒ) ಪ್ರಾಧಿಕಾರವು ಅನುಮತಿ ನೀಡಿದೆ.

ಚಾನಲ್ ಬಂಚ್  ಭಾಗವಾಗಿರುವ ಪೇ ಚಾನೆಲ್‌ಗಳ ಎ-ಲಾ-ಕಾರ್ಟೆ ದರಗಳ ಮೊತ್ತವು ಯಾವುದೇ ಸಂದರ್ಭದಲ್ಲಿ ಅಂತಹ ಪೇ ಚಾನೆಲ್‌ಗಳು ಒಂದು ಭಾಗವಾಗಿರುವ ಚಾನಲ್ ಬಂಚ್  ದರಕ್ಕಿಂತ ಒಂದೂವರೆ ಪಟ್ಟು ಮೀರಬಾರದು ಎಂದು ಟ್ರಾಯ್ ಹೇಳಿದೆ. ಅಲ್ಲದೆ ಚಾನಲ್ ಬಂಚ್ ಭಾಗವಾಗಿರುವ ಪ್ರತಿ ಪೇ ಚಾನೆಲ್‌ನ (ಎಂಆರ್‌ಪಿ) ಎ-ಲಾ-ಕಾರ್ಟೆ ದರಗಳು ಯಾವುದೇ ಸಂದರ್ಭದಲ್ಲಿ ಅಂತಹ ಪೇ ಚಾನೆಲ್‌ನ ಸರಾಸರಿ ದರಕ್ಕಿಂತ ಮೂರು ಪಟ್ಟು ಮೀರಬಾರದು ಎಂಆರ್‌ಪಿ 12 ಅಥವಾ ಅದಕ್ಕಿಂತ ಕಡಿಮೆ ಇರುವ ಚಾನೆಲ್‌ಗಳಿಗೆ ಮಾತ್ರ ಪ್ರಸಾರಕರು ನೀಡುವ ಚಾನಲ್ ಬಂಚ್ ಭಾಗವಾಗಲು ಅನುಮತಿ ನೀಡಲಾಗುವುದು ಎಂದು ಟ್ರಾಯ್ ನಿರ್ಧರಿಸಿದೆ.ಡಿಪಿಒಗಳಿಂದ ಭಾರಿ ಪ್ರಮಾಣದ ಕ್ಯಾರೇಜ್ ಶುಲ್ಕವನ್ನು ವಿಧಿಸುವ ಬಗ್ಗೆ ಪ್ರಸಾರಕರ ಕಾಳಜಿಯನ್ನು ಸಹ ಪರಿಗಣಿಸಲಾಗಿದೆ ಎಂದು ನಿಯಂತ್ರಕ ಸಂಸ್ಥೆ ಹೇಳಿದೆ.ದೇಶದಲ್ಲಿ ಚಾನೆಲ್ ಸಾಗಿಸಲು ಒಂದು ತಿಂಗಳಲ್ಲಿ ಬ್ರಾಡ್‌ಕಾಸ್ಟರ್ ಡಿಪಿಒಗೆ ಪಾವತಿಸಬೇಕಾದ ಕ್ಯಾರೇಜ್ ಶುಲ್ಕದ ಮೇಲೆ ತಿಂಗಳಿಗೆ 4 ಲಕ್ಷ ರೂ.ಗಳ ಕ್ಯಾಪ್ ನಿಗದಿಪಡಿಸಲಾಗಿದೆ ಎಂದು ಟ್ರಾಯ್ ಹೇಳಿದೆ.

ಹೊಸ ನಿಯಮಗಳು ಪ್ರಸಾರ ಮತ್ತು ಕೇಬಲ್ ಟಿವಿ ಸೇವೆಗಳಿಗಾಗಿ ಟ್ರಾಯ್ತನ್ನ 2017 ರ ಸುಂಕದ ಆದೇಶಕ್ಕೆ ಮಾಡಿದ ಬದಲಾವಣೆಗಳ ಒಂದು ಭಾಗವಾಗಿದೆ. ಮಾರ್ಚ್ 1 ರಿಂದ ಅವು ಜಾರಿಗೆ ಬರಲಿವೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com