ಏರ್ ಇಂಡಿಯಾ ಬಂದ್ ವದಂತಿ ಆಧಾರ ರಹಿತ: ಸಿಎಂಡಿ ಅಶ್ವಿನಿ ಲೋಹಾನಿ

ಸುಮಾರು 80 ಸಾವಿರ ಕೋಟಿ ರೂ. ಸಾಲದೊಂದಿಗೆ ಭಾರೀ ನಷ್ಟದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಮುಚ್ಚಲಿದೆ ಎಂಬ ವದಂತಿಗಳು ಆಧಾರ ರಹಿತ ಎಂದು ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಅಶ್ವಿನಿ ಲೋಹಾನಿ ಅವರು ಹೇಳಿದ್ದಾರೆ.
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ನವದೆಹಲಿ: ಸುಮಾರು 80 ಸಾವಿರ ಕೋಟಿ ರೂ. ಸಾಲದೊಂದಿಗೆ ಭಾರೀ ನಷ್ಟದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಮುಚ್ಚಲಿದೆ ಎಂಬ ವದಂತಿಗಳು ಆಧಾರ ರಹಿತ ಎಂದು ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಅಶ್ವಿನಿ ಲೋಹಾನಿ ಅವರು ಹೇಳಿದ್ದಾರೆ.

ಒಂದು ವಾರದ ಹಿಂದಷ್ಟೇ ಏರ್ ಇಂಡಿಯಾ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಲಾಗದು. ಆದರೆ ಸರ್ಕಾರದ ನೆರವು ಇಲ್ಲದೆ ಕಾರ್ಯಾಚರಣೆ ಮುಂದುವರೆಸುವುದು ಕಷ್ಟ ಎಂದು ಅಶ್ವಿನಿ ಲೋಹಾನಿ ಅವರು ಹೇಳಿದ್ದರು. ಇದೀಗ ಏರ್ ಇಂಡಿಯಾ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಎಂಬ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಅವರು, ಕಾರ್ಯಾಚರಣೆ ಮುಂದುವರೆಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

‘ಏರ್‌ ಇಂಡಿಯಾ ತನ್ನ ಹಾರಟ ಮುಂದುವರಿಸಲಿದ್ದು, ಸೇವೆಯ ವಿಸ್ತರಣೆಯೂ ಆಗಲಿದೆ. ಪ್ರಯಾಣಿಕರು, ಕಂಪನಿಗಳು ಅಥವಾ ಏಜೆಂಟ್‌ಗಳು ಆತಂಕ ಪಡುವ ಅಗತ್ಯ ಇಲ್ಲ’ ಎಂದು ಏರ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಿ ಲೋಹಾನಿ ಅವರು ಟ್ವೀಟ್‌ ಮಾಡಿದ್ದಾರೆ.

ಸುಮಾರು 80 ಸಾವಿರ ಕೋಟಿ ರು. ನಷ್ಟದ ಸುಳಿಗೆ ಸಿಲುಕಿರುವ ಏರಿಂಡಿಯಾ ವಿಮಾನ ಮಾರಾಟಕ್ಕೆ ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಹೀಗಾಗಿ ಈ ವಿಮಾನ ಸಂಸ್ಥೆಗೆ ಮತ್ತಷ್ಟು ಧನ ಸಹಾಯ ಮಾಡುವ ನಿರ್ಧಾರಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಮತ್ತೊಂದೆಡೆ, ವಿಮಾನ ಖರೀದಿಗೆ ಯಾವುದೇ ಹೂಡಿಕೆದಾರರು ಮುಂದೆ ಬರುತ್ತಿಲ್ಲ. 2020ರ ಜೂನ್‌ವರೆಗೂ ಇದೇ ಪರಿಸ್ಥಿತಿ ಮುಂದುವರಿದರೆ, ಭಾರತ ಮೂಲದ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ ಜೆಟ್‌ ಏರ್‌ವೇಸ್‌(ಹಣಕಾಸು ಕೊರತೆಯಿಂದ 2019ರ ಏ.17ರಂದು ವಿಮಾನಗಳ ಹಾರಾಟ ರದ್ದು) ಗತಿಯೇ ಏರಿಂಡಿಯಾಗೂ ಬರಲಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com