ಕಚ್ಚಾತೈಲ ಪ್ರತಿ ಬ್ಯಾರಲ್ 70 ಡಾಲರ್ ಗೆ ಏರಿಕೆ
ಮುಂಬೈ: ಇರಾನ್ ಹಾಗೂ ಅಮೆರಿಕಾ ನಡುವೆ ಉಂಟಾಗಿರುವ ಪ್ರಕ್ಷಬ್ದತೆಯ ಪರಿಣಾಮ ಕರೆನ್ಸಿ ವಿನಿಮಯ ಮಾರುಕಟ್ಟಿಯಲ್ಲಿ ರೂಪಾಯಿ ದುರ್ಬಲ ವಹಿವಾಟು ಆರಂಭಿಸಿದೆ.
ಮಂಗಳವಾರದ ಅಂತ್ಯದಲ್ಲಿ ಡಾಲರ್ ಎದುರು 71.82 ಕ್ಕೆ ವಿನಿಮಯಗೊಂಡಿದ್ದ ರೂಪಾಯಿ ಇಂದು ಮತ್ತೊಮ್ಮೆ 72ರ ಮಟ್ಟಕ್ಕೆ ಏರಿದೆ. ಇದರಿಂದಾಗಿ ಪ್ರಸ್ತುತ ರೂಪಾಯಿ ಮೌಲ್ಯ 20 ಪೈಸೆ ಪತನಗೊಂಡು 72.02ಕ್ಕೆ ಇಳಿದಿದೆ. ಮತ್ತೊಂದೆಡೆ, ತೈಲ ಬೆಲೆಗಳು ಯುಎಸ್-ಇರಾನ್ ಉದ್ವಿಗ್ನತೆ ನಡುವೆ ಗಗನಕ್ಕೇರುತ್ತಿವೆ ಇರಾಕ್ ನಲ್ಲಿನ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಯ ನಂತರ ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 70 ಡಾಲರ್ ಗಳಿಗೆ ಏರಿಕೆ ಕಂಡಿದೆ.
ದೇಶೀಯ ಷೇರು ಮಾರುಕಟ್ಟೆಗಳು ಬುಧವಾರ ಭಾರಿ ನಷ್ಟದೊಂದಿಗೆ ಆರಂಭಗೊಂಡಿವೆ. ಅಂತರರಾಷ್ಟ್ರೀಯ ಪ್ರತಿಕೂಲ ಸನ್ನಿವೇಶಗಳ ಜೊತೆಗೆ, ಜಿಡಿಪಿ ಮೇಲಿನ ಸರ್ಕಾರದ ಅಂದಾಜುಗಳು ಹೂಡಿಕೆದಾರರ ಮನೋಭಾವಕ್ಕೆ ಹೊಡೆತ ನೀಡಿವೆ. ಸೆನ್ಸೆಕ್ಸ್ ಆರಂಭದಲ್ಲಿ 350 ಅಂಕಗಳಷ್ಟು ಕುಸಿತ ಕಂಡಿತು. ನಿಫ್ಟಿ ಪ್ರಮುಖ 12 ಸಾವಿರ ಮಟ್ಟದಿಂದ ಕೆಳಗೆ ಇಳಿಯಿತು. ಬ್ಯಾಂಕಿಂಗ್, ಆಟೋ ಮತ್ತು ಮೆಟಲ್ ಸ್ಟಾಕ್‌ಗಳು ಮುಖ್ಯ ಮಾರಾಟದ ಕೇಂದ್ರವಾಗಿತ್ತು. ಮತ್ತೊಂದೆಡೆ, ರೂಪಾಯಿ ದುರ್ಬಲಗೊಳ್ಳುವುದರೊಂದಿಗೆ ಐಟಿ ಷೇರುಗಳು ಲಾಭ ಗಳಿಸುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ