ಕೋಲ್ ಇಂಡಿಯಾದ 17 ಗಣಿಗಾರಿಕೆ ಯೋಜನೆಗಳಿಗೆ ಹಸಿರು ನಿಶಾನೆ ಸಿಕ್ಕಿದೆ: ಪ್ರಹ್ಲಾದ್ ಜೋಶಿ

ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ (ಸಿಐಎಲ್) 17 ಗಣಿಗಾರಿಕೆ ಯೋಜನೆಗಳಿಗೆ ಹಸಿರು ನಿಶಾನೆ ಪಡೆದಿದೆ, ಇದು ವಿಶ್ವದ ಅತಿದೊಡ್ಡ ಕಲ್ಲಿದ್ದಲು ಗಣಿಗಾರರಿಗೆ ಒಂದು ಬಿಲಿಯನ್ ಟನ್ ಉತ್ಪಾದನಾ ಗುರಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 
ಕೋಲ್ ಇಂಡಿಯಾ
ಕೋಲ್ ಇಂಡಿಯಾ
Updated on

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ (ಸಿಐಎಲ್) 17 ಗಣಿಗಾರಿಕೆ ಯೋಜನೆಗಳಿಗೆ ಹಸಿರು ನಿಶಾನೆ ಪಡೆದಿದೆ, ಇದು ವಿಶ್ವದ ಅತಿದೊಡ್ಡ ಕಲ್ಲಿದ್ದಲು ಗಣಿಗಾರರಿಗೆ ಒಂದು ಬಿಲಿಯನ್ ಟನ್ ಉತ್ಪಾದನಾ ಗುರಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ  24x7 'ಎಲ್ಲರಿಗೂ ಶಕ್ತಿ' ಎಂಬ ದೃಷ್ಟಿಕೋನವನ್ನು ನನಸಾಗಿಸಲು,ಎಂಒಎಫ್‌ಸಿಸಿ ಜೊತೆ ಸಮನ್ವಯದಲ್ಲಿ ಕಲ್ಲಿದ್ದಲು ಇಲಾಖೆ 17 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ  ಪರಿಸರ ಅನುಮತಿ ಮತ್ತು 3 ವಾಷರಿಯರ್ಸ್ ಗಳನ್ನು ಪಡೆದಿದೆ ಎ ಎಂಬುದಾಗಿ ಜೋಷಿ ಟ್ವೀಟ್ ಮೂಲಕ ಹೇಳಿದ್ದಾರೆ.

"ಈ ಅನುಮತಿಗಳು ಮುಂದಿನ ಐದು ವರ್ಷಗಳಲ್ಲಿ ಕೋಲ್ಇಂಡಿಯಾ ಹೆಚ್ಕ್ಯುಯಾಗಿದ್ದು ಬರುವ ಋತುಗಳಲ್ಲಿ ಕಲ್ಲಿದ್ದಲು ಸಂಗ್ರಹಕ್ಕೆ 150 ಮಿಲಿಯನ್ ಟನ್ ಕಲ್ಲಿದ್ದಲನ್ನು ಸೇರಿಸುತ್ತವೆ ಮತ್ತು ಅದ ಶುದ್ದೀಕರಣ ಸಾಮರ್ಥ್ಯವನ್ನು 25 ಎಂಟಿಪಿಎಗೆ ಹೆಚ್ಚಿಸುತ್ತದೆ ಹಣಕಾಸು ವರ್ಷ 23-24ರ ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ಸಾಧಿಸಲು ಕಂಪನಿಗೆ ಸಾಧ್ಯವಾಗುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಕಂಪನಿಯು ಮುಂದಿನ ಹಣಕಾಸು ವರ್ಷದಲ್ಲಿ 750 ದಶಲಕ್ಷ ಟನ್ ಕಲ್ಲಿದ್ದಲನ್ನು ಉತ್ಪಾದಿಸಲಿದೆ ಎಂದು ಕಲ್ಲಿದ್ದಲು ಸಚಿವಾಲಯ ಈ ಹಿಂದೆ ತಿಳಿಸಿತ್ತು. ಹಣಕಾಸು ವರ್ಷ  2024 ರ ವೇಳೆಗೆ ಸಿಐಎಲ್ ಒಂದು ಶತಕೋಟಿ ಟನ್ ಕಲ್ಲಿದ್ದಲನ್ನು ಉತ್ಪಾದಿಸುತ್ತದೆ ಎಂದು ಇಲಾಖೆ  ಹೇಳಿದೆ ಪಿಎಸ್‌ಯುಗೆ ಪ್ರಸ್ತುತ ದೇಶದ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 82 ರಷ್ಟು ಎಂದರೆ 660 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ನೀಡಲಾಗಿದೆ.

2018-19ರ ವಾರ್ಷಿಕ ವರದಿಯಲ್ಲಿ, ಕಂಪನಿಯು ತನ್ನ 54 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳು ಒಪ್ಪಂದದ ವಿಷಯಗಳು ಮತ್ತು ಇತರರಲ್ಲಿ ಹಸಿರು ಅನುಮತಿಗಳ ವಿಳಂಬದಂತಹ ವಿವಿಧ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿತ್ತು."20 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ ಒಟ್ಟು 120 ಕಲ್ಲಿದ್ದಲು ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. ಈ ಪೈಕಿ 66 ಯೋಜನೆಗಳು ನಿಗದಿಯಂತೆ ಕಾರ್ಯ ನಡೆಸುತ್ತಿದ್ದರೆ ಇನ್ನುಳಿದ  54 ಯೋಜನೆಗಳು ವಿಳಂಬವಾಗಿವೆ" ಎಂದು ಕೋಲ್ ಇಂಡಿಯಾ ತಿಳಿಸಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ವಿಳಂಬವಾಗಲು ಪ್ರಮುಖ ಕಾರಣವೆಂದರೆ ಪರಿಸರ ಅನುಮತಿ ಇಲ್ಲದಿರುವುದುಅರಣ್ಯ ತೆರವು, ಭೂಮಿ ಮತ್ತು ಪುನರ್ವಸತಿಗೆ ಸಂಬಂಧಿಸಿದ ವಿಷಯಗಳು, ಒಪ್ಪಂದದ ವಿಷಯಗಳು ಮತ್ತು ಸ್ಥಳಾಂತರಿಸುವ ಸೌಲಭ್ಯ ವಿಳಂಬವೆಂದು ಅದು ವಿವರಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com