ಮಹಾನಿರ್ದೇಶಕ ಸ್ಥಾನಕ್ಕೆ ನೀಮುಚ್ವಾಲಾ ರಾಜೀನಾಮೆ, ಶೇ.2ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದ ವಿಪ್ರೋ

ಭಾರತದ ಪ್ರಮುಖ ಐಟಿ ಉದ್ಯಮ ವಿಪ್ರೋನ ಸಿಇಒ ಮತ್ತು ಎಂಡಿ ಅಬಿದಾಲಿ ಝಡ್ ನೀಮುಚ್ವಾಲಾ ತಮ್ಮ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸಿದ ನಂತರ ಶುಕ್ರವಾರ ಕಂಪನಿಯ  ಸ್ಕ್ರಿಪ್ಟ್ ಶೇಕಡಾ 2ಕ್ಕಿಂತಲೂ ಹೆಚ್ಚಿನ ಅಂಶ ಕುಸಿತ ದಾಖಲಿಸಿದೆ. ಬಿಎಸ್‌ಇಯಲ್ಲಿ ಸಂಸ್ಥೆಯ ಷೇರುಗಳು ಶೇಕಡಾ 2.28 ರಷ್ಟು ಕುಸಿದು 235.30 ರೂ.ಗೆ ತಲುಪಿದೆ.
ಅಬಿದಾಲಿ ಝಡ್ ನೀಮುಚ್ವಾಲಾ
ಅಬಿದಾಲಿ ಝಡ್ ನೀಮುಚ್ವಾಲಾ

ನವದೆಹಲಿ: ಭಾರತದ ಪ್ರಮುಖ ಐಟಿ ಉದ್ಯಮ ವಿಪ್ರೋನ ಸಿಇಒ ಮತ್ತು ಎಂಡಿ ಅಬಿದಾಲಿ ಝಡ್ ನೀಮುಚ್ವಾಲಾ ತಮ್ಮ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸಿದ ನಂತರ ಶುಕ್ರವಾರ ಕಂಪನಿಯ  ಸ್ಕ್ರಿಪ್ಟ್ ಶೇಕಡಾ 2ಕ್ಕಿಂತಲೂ ಹೆಚ್ಚಿನ ಅಂಶ ಕುಸಿತ ದಾಖಲಿಸಿದೆ. ಬಿಎಸ್‌ಇಯಲ್ಲಿ ಸಂಸ್ಥೆಯ ಷೇರುಗಳು ಶೇಕಡಾ 2.28 ರಷ್ಟು ಕುಸಿದು 235.30 ರೂ.ಗೆ ತಲುಪಿದೆ.

ಎನ್‌ಎಸ್‌ಇಯಲ್ಲಿ ಶೇಕಡಾ 2.28 ರಷ್ಟು ಇಳಿದು 235.20 ರೂ.ಗೆ ತಲುಪಿದೆ.

ಕೌಟುಂಬಿಕ ಕಾರಣಗಳೀಂದ ನೀಮುಚ್ವಾಲಾ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ವಿಪ್ರೋ ಇಂದು ಬೆಳಿಗ್ಗೆ ಪ್ರಕಟಿಸಿದೆ. 

ಇನ್ನು ಸುಗಮ ವ್ಯವಹಾರಕ್ಕಾಗಿಉತ್ತರಾಧಿಕಾರಿಯನ್ನು ನೇಮಿಸುವವರೆಗೆ ನೀಮುಚ್ವಾಲಾ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಕಂಪನಿಯು ಬಿಎಸ್ಇ ಫೈಲಿಂಗ್ನಲ್ಲಿ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com