ಯೆಸ್ ಬ್ಯಾಂಕ್ ಹಗರಣ: ರಾಣಾ ಕಪೂರ್ ಮತ್ತಿತರರ 2,200 ಕೋಟಿ ಆಸ್ತಿ ಲಗತ್ತಿಸಿದ ಇಡಿ
ನವದೆಹಲಿ: ಯೆಸ್ ಬ್ಯಾಂಕ್ ಸಹ-ಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರ ಸುಮಾರು 2,203 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮನಿ ಲಾಂಡರಿಂಗ್ ಪ್ರಕರಣದಡಿ ಲಗತ್ತಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೊರಡಿಸಲಾದ ತಾತ್ಕಾಲಿಕ ಆದೇಶದ ಭಾಗವಾಗಿ ಡಿಎಚ್‌ಎಫ್‌ಎಲ್ ಪ್ರವರ್ತಕ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರ ಆಸ್ತಿಗಳನ್ನು ಸಹ ಲಗತ್ತಿಸಲಾಗಿದೆ ಎಂದು ಅವರು ಹೇಳಿದರು.
ಕಪೂರ್ ಅವರ ಕೆಲವು ವಿದೇಶಿ ಆಸ್ತಿಗಳು ಸಹ ಇಡಿ ಲಗತ್ತಿಸಿರುವ ಆಸ್ತಿಗಳ ಪಟ್ಟಿಯಲ್ಲಿದೆ. ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರು ತಮ್ಮ ಬ್ಯಾಂಕ್ ಮೂಲಕ ದೊಡ್ಡ ಸಾಲಗಳನ್ನು ಸರಿಹೊಂದಿಸುವ ಬದಲು ಕಿಕ್‌ಬ್ಯಾಕ್ ಸ್ವೀಕರಿಸುವ ಮೂಲಕ 4,300 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆಎಂದು ಇಡಿ ಆರೋಪಿಸಿದೆ, ಈ ಮೊತ್ತ ಆ ನಂತರದಲ್ಲಿ ನಿಷ್ಕ್ರಿಯ ಸ್ವತ್ತುಗಳಾಗಿ (ಎನ್‌ಪಿಎ) ಬದಲಾಗಿದೆ.
ಮಾರ್ಚ್ ನಲ್ಲಿ ಕಪೂರ್ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿತ್ತು ಮತ್ತು ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ