ಇಂದಿನಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಜಾರಿ: ಏನಿದರ ವಿಶೇಷತೆ? ಇಲ್ಲಿದೆ ವಿವರ

ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ 'ಗ್ರಾಹಕ ಸಂರಕ್ಷಣಾ ಕಾಯ್ದೆ -2019'  ಅನ್ನು ಇಂದಿನಿಂದ (ಜುಲೈ 20) ಅಧಿಕೃತವಾಗಿ ಜಾರಿಗೊಳಿಸುತ್ತಿದೆ. ಇದರೊಡನೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ಎಂಬ ವಾದಕ್ಕೆ ಇನ್ನಷ್ಟು ಬಲ ಲಭಿಸಲಿದೆ.
ಇಂದಿನಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಜಾರಿ: ಏನಿದರ ವಿಶೇಷತೆ? ಇಲ್ಲಿದೆ ವಿವರ
Updated on

ನವದೆಹಲಿ:  ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ 'ಗ್ರಾಹಕ ಸಂರಕ್ಷಣಾ ಕಾಯ್ದೆ -2019'  ಅನ್ನು ಇಂದಿನಿಂದ (ಜುಲೈ 20) ಅಧಿಕೃತವಾಗಿ ಜಾರಿಗೊಳಿಸುತ್ತಿದೆ. ಇದರೊಡನೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ಎಂಬ ವಾದಕ್ಕೆ ಇನ್ನಷ್ಟು ಬಲ ಲಭಿಸಲಿದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ, 1986 ಅನ್ನು ಬದಲಿಸಿ  ಗ್ರಾಹಕ ಸಂರಕ್ಷಣಾ ಕಾಯ್ದೆ, 2019ಗೆ ರಾಷ್ಟ್ರಪತಿ ಕೋವಿಂದ್ 2019 ಆಗಸ್ಟ್ 9ರಂದು ಅಂಕಿತ ಹಾಕಿದ್ದರು. ಈ ಕಾಯ್ದೆಯು ಇಂದಿನಿಂದ ದೇಶವ್ಯಾಪಿ ಜಾರಿಗೊಳ್ಳುತ್ತಿದೆ.

ಇ-ಕಾಮರ್ಸ್ ಅನ್ನು ತನ್ನ ವ್ಯಾಪ್ತಿಯಲ್ಲಿ ತರುವುದು ಸೇರಿದಂತೆ ವಿವಿಧ ನಿಬಂಧನೆಗಳನ್ನು ಪರಿಚಯಿಸುವ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ, ಹೊಸ ಅಧಿಕಾರಗಳನ್ನು  ಸ್ಥಾಪಿಸುವ ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಬಲಪಡಿಸುವ ಉದ್ದೇಶ ಹೊಂದಿದೆ. ಅಲ್ಲದೆ ಹೊಸ ಕಾಯಿದೆ, ಉತ್ಪನ್ನ ತಯಾರಕರು, ಎಲೆಕ್ಟ್ರಾನಿಕ್ ಸೇವಾ ಪೂರೈಕೆದಾರರು, ದಾರಿತಪ್ಪಿಸುವ ಜಾಹೀರಾತುದಾರರನ್ನು ನಿಯಂತ್ರಿಸಲಿದೆ.

ಸದಸ್ಯರ ಸಂಖ್ಯೆ, ಗೌರವ ಮತ್ತು ಸಿಬ್ಬಂದಿ ಕೇಡರ್ ಸಂಖ್ಯೆಯಲ್ಲಿ ಗ್ರಾಹಕ ನ್ಯಾಯಾಲಯಗಳಲ್ಲಿ ಬದಲಾವಣೆ ಆಗಲಿದ್ದು ಈ ಕಾಯ್ದೆಯಲ್ಲಿ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ)ಕ್ಕೆ ಅವಕಾಶ ಸಿಕ್ಕಲಿದೆ. , ಇದು ಹೊಸ ಮತ್ತು ಕ್ರಾಂತಿಕಾರಿ ಹೆಜ್ಜೆಯಾಗಿದ್ದು ಗ್ರಾಹಕರ ಹಕ್ಕುಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ.

ಹೊಸ ಕಾಯಿದೆಯ ಮೂಲಕ, ತಯಾರಿಸಿದ ಉತ್ಪನ್ನಗಳ ಪರೀಕ್ಷೆಯನ್ನು ಖರೀದಿಸುವ ಮೊದಲು, ಖರೀದಿಸುವ ಸಮಯದಲ್ಲಿ ಅಥವಾ ನಂತರ  ಅನೇಕ ಹಂತಗಳಲ್ಲಿ ಮಾಡಬಹುದು, ಮತ್ತು ಉತ್ಪನ್ನವು ಯಾವುದೇ ಮಟ್ಟದಲ್ಲಿ ದೋಷಪೂರಿತವಾಗಿದೆ ಎಂದು ಕಂಡುಬಂದಲ್ಲಿ, ಉತ್ಪನ್ನದ ಸಂಪೂರ್ಣ ಬ್ಯಾಚ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗುವುದು.  ಗ್ರಾಹಕರ ಹಕ್ಕುಗಳನ್ನು ಉತ್ತೇಜಿಸಲು , ರಕ್ಷಿಸಲು ಮತ್ತು ಜಾರಿಗೊಳಿಸಲು ಉದ್ದೇಶಿಸಿರುವ ಸಿಸಿಪಿಎ, ಅನ್ಯಾಯದ ಹಿನ್ನೆಲೆಯ ವ್ಯಾಪಾರದಿಂಡ  ಉಂಟಾಗುವ ವಿವಾದದಲ್ಲಿ  ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಮಧ್ಯಸ್ಥಿಕೆ ವಹಿಸುತ್ತದೆ. ಮರುಪಡೆಯುವಿಕೆ, ಮರುಪಾವತಿ ಮತ್ತು ಉತ್ಪನ್ನಗಳ ಲಾಭವನ್ನು ಒಳಗೊಂಡಂತೆ ವಿವಿಧ ಕ್ರಿಯೆಯನ್ನು ಸಹ ಇದು ಪ್ರಾರಂಭಿಸಬಹುದು.

ಈ ಕಾಯಿದೆಯು ಸರಳೀಕೃತ ವಿವಾದ ಪರಿಹಾರ ಪ್ರಕ್ರಿಯೆಯನ್ನು ಸಹ ರೂಪಿಸುತ್ತದೆ, ಮತ್ತು ಪ್ರಕರಣಗಳ ಮಧ್ಯಸ್ಥಿಕೆ ಮತ್ತು ಇ-ಫೈಲಿಂಗ್‌ಗೆ ಅವಕಾಶವಿದೆ. ಗ್ರಾಹಕನು ತಾನು ವಾಸಿಸುವ ಪ್ರದೇಶದ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಹತ್ತಿರದ ಆಯೋಗದಲ್ಲಿ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ. ಅಲ್ಲದೆ ಇದೇ ಮೊದಲ ಬಾರಿಗೆ, ಉತ್ಪನ್ನ ಹೊಣೆಗಾರಿಕೆಯನ್ನು ನಿರ್ವಹಿಸುವ ವಿಶೇಷ ಕಾನೂನು ಜಾರಿಗೊಳ್ಳಲಿದ್ದು ದೋಷಯುಕ್ತ ಉತ್ಪನ್ನ ಅಥವಾ ಸೇವೆಗಳಲ್ಲಿನ ಕೊರತೆಯಿಂದ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಸರಿದೂಗಿಸಲು ಉತ್ಪಾದಕ ಅಥವಾ ಉತ್ಪನ್ನ ಸೇವಾ ಪೂರೈಕೆದಾರ ಅಥವಾ ಉತ್ಪನ್ನ ಮಾರಾಟಗಾರ ಈಗ ಜವಾಬ್ದಾರನಾಗಿರುತ್ತಾನೆ.

ಪ್ರಸ್ತುತ, ಗ್ರಾಹಕನಿಗೆ ನ್ಯಾಯಾಲಯ  ಪ್ರವೇಶದ ಒಂದೇ ಒಂದು ಅಂಶವಿದೆ, ಅದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಸಿಸಿಪಿಎಮೂಲಕ ಹೆಚ್ಚುವರಿ ಸ್ವಿಫ್ಟ್ ಕಾರ್ಯನಿರ್ವಾಹಕ ಪರಿಹಾರಗಳನ್ನು ಕಾಯಿದೆಯಲ್ಲಿ ಪ್ರಸ್ತಾಪಿಸಲಾಗಿದೆ. ಜನರ ದಾರಿತಪ್ಪಿಸುವ  ಜಾಹೀರಾತುಗಳು ಮತ್ತು ಉತ್ಪನ್ನಗಳ ಕಲಬೆರಕೆಗಳನ್ನು ಪರೀಕ್ಷೆ  ಹಾಗೂ ತಡೆಗಾಗಿ ಶಿಕ್ಷೆಯ ನಿಬಂಧನೆಗಳೂ ಕಾಯ್ದೆಯಲ್ಲಿದೆ. ತಯಾರಕರು ಮತ್ತು ಸೇವಾ ಪೂರೈಕೆದಾರರನ್ನು ದೋಷಯುಕ್ತ ಉತ್ಪನ್ನಗಳು ಅಥವಾ ಸೇವೆಗಳ ಕೊರತೆಗೆ ಹೊಣೆಗಾರರನ್ನಾಗಿಸಲು ಇದರಿಂದ ಸಾಧ್ಯವಾಗಲಿದೆ. ಗ್ರಾಹಕರ ಹಿತಾಸಕ್ತಿ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಇ-ಕಾಮರ್ಸ್ ಮತ್ತು ನೇರ ಮಾರಾಟದ ಬಗ್ಗೆ ನಿಯಮಗಳನ್ನು ಈ ಯಾಯ್ದೆಯು ಇನ್ನಷ್ಟು ಸಶಕ್ತಗೊಳಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com