ಕೋವಿಡ್ 19 ಹಿನ್ನೆಲೆಯಲ್ಲಿ ಜಾಗತಿಕವಾಗಿ 960 ಉದ್ಯೋಗ ಕಡಿತಕ್ಕೆ ಮುಂದಾದ ಲಿಂಕ್ಡ್ ಇನ್!

ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಜಾಗತಿಕವಾಗಿ ಸುಮಾರು 960 ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವುದಾಗಿ ಎಂದು ವೃತ್ತಿಪರ ನೆಟ್‌ವರ್ಕಿಂಗ್ ಸೈಟ್ ಲಿಂಕ್ಡ್‌ಇನ್ ಮಂಗಳವಾರ ತಿಳಿಸಿದೆ.
ಲಿಂಕ್ಡ್ ಇನ್
ಲಿಂಕ್ಡ್ ಇನ್

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಜಾಗತಿಕವಾಗಿ ಸುಮಾರು 960 ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವುದಾಗಿ ಎಂದು ವೃತ್ತಿಪರ ನೆಟ್‌ವರ್ಕಿಂಗ್ ಸೈಟ್ ಲಿಂಕ್ಡ್‌ಇನ್ ಮಂಗಳವಾರ ತಿಳಿಸಿದೆ.

ಮೈಕ್ರೋಸಾಫ್ಟ್‌ನ ಭಾಗವಾಗಿರುವ ಈ ಕಂಪನಿಯು ಭಾರತದಲ್ಲಿ ಸುಮಾರು 1,200 ಉದ್ಯೋಗಿಗಳನ್ನು ಹೊಂದಿದೆ. ಇದು ಬೆಂಗಳೂರಿನಲ್ಲಿ ಅಭಿವೃದ್ಧಿ ಕೇಂದ್ರವನ್ನೂ ಹೊಂದಿದೆ.

ಸಂಸ್ಧೆಯ ಈ ನಿರ್ಧಾರದಿಂದ ಭಾರತದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗ ಕಡಿತದ ಬಗ್ಗೆ ಲಿಂಕ್ಡ್ ಇನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 

"ನಮ್ಮ ಜಾಗತಿಕ ಮಾರಾಟ ಮತ್ತು ಪ್ರತಿಭಾ ಅನ್ವೇಷನೆಯ ಸಂಸ್ಥೆ(ಜಿಎಸ್ಒ ಮತ್ತು ಜಿಟಿಒ) ಸುಮಾರು 960 ಉದ್ಯೋಗಿಗಳು, ಶೇಕಡಾ 6 ರಷ್ಟು ಕಡಿಮೆ ಮಾಡುವ ಅತ್ಯಂತ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಲಿಂಕ್ಡ್ಇನ್ ಸಿಇಒ ರಿಯಾನ್ ರೋಸ್ಲಾನ್ಸ್ಕಿ ನೌಕರರಿಗೆ ನೀಡಿದ ಟಿಪ್ಪಣಿಯಲ್ಲಿ ಹೇಳಿದರು.

ಲಿಂಕ್ಡ್ಇನ್ ಕನಿಷ್ಟ 10 ವಾರಗಳ ಬೇರ್ಪಡಿಕೆ ವೇತನವನ್ನು ಒದಗಿಸುತ್ತದೆ ಮತ್ತು ಅದರ ಜಾಗತಿಕ ವಲಸೆ ತಂಡವು ಕಂಪನಿ ಪ್ರಾಯೋಜಿತ ವೀಸಾಗಳಲ್ಲಿರುವವರಿಗೆ ವೈಯಕ್ತಿಕ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು.

ಹೊಸದಾಗಿ ರಚಿಸಲಾದ ಉದ್ಯೋಗಗಳಿಗೆ ಕಂಪನಿಯು ನೇಮಕ ಮಾಡುತ್ತದೆ ಮತ್ತು ಈ ಅವಕಾಶಗಳನ್ನು ಅನ್ವೇಷಿಸಲು ಪ್ರಭಾವಿತ ಉದ್ಯೋಗಿಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಕಾರ್ಯನಿರ್ವಾಹಕ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com