ವಿಶ್ವಾದ್ಯಂತ ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ  ಆಸ್ತಿ ಮುಟ್ಟುಗೋಲಿಗೆ ದುಬೈ ಕೋರ್ಟ್ ಆದೇಶ 

 ಎನ್‌ಎಂಸಿ ಹೆಲ್ತ್ ಸಂಸ್ಥಾಪಕ ಬಿ.ಆರ್.ಶೆಟ್ಟಿ ಅವರಿಗೆ ಸೇರಿದ್ದ ಜಗತ್ತಿನ ನಾನಾ ಕಡೆಗಳಲಿ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದುಬೈ ನ್ಯಾಯಾಲಯ ಆದೇಶಿಸಿದೆ. ಶೆಟ್ಟಿ  8 ಮಿಲಿಯನ್ ಡಾಲರ್ ಗೆ ಅಧಿಕ ಸಾಲವನ್ನು ಹೊಂದಿದ್ದು ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸುವಂತೆ ಬ್ಯಾಂಕ್ ಕೋರ್ಟ್ ನ ಮೊರೆ ಹೋಗಿತ್ತು. 
ಬಿಆರ್ ಶೆಟ್ಟಿ
ಬಿಆರ್ ಶೆಟ್ಟಿ

ದುಬೈ: ಎನ್‌ಎಂಸಿ ಹೆಲ್ತ್ ಸಂಸ್ಥಾಪಕ ಬಿ.ಆರ್.ಶೆಟ್ಟಿ ಅವರಿಗೆ ಸೇರಿದ್ದ ಜಗತ್ತಿನ ನಾನಾ ಕಡೆಗಳಲಿ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದುಬೈ ನ್ಯಾಯಾಲಯ ಆದೇಶಿಸಿದೆ. ಶೆಟ್ಟಿ  8 ಮಿಲಿಯನ್ ಡಾಲರ್ ಗೆ ಅಧಿಕ ಸಾಲವನ್ನು ಹೊಂದಿದ್ದು ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸುವಂತೆ ಬ್ಯಾಂಕ್ ಕೋರ್ಟ್ ನ ಮೊರೆ ಹೋಗಿತ್ತು. 

ಶೆಟ್ಟಿ, ನ್ಯೂ ಮೆಡಿಕಲ್ ಸೆಂಟರ್ ಟ್ರೇಡಿಂಗ್ ಮತ್ತು ಎನ್‌ಎಂಸಿ ಹೆಲ್ತ್‌ಕೇರ್ ವಿರುದ್ಧ ಡಿಐಎಫ್‌ಸಿ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದ  ಕ್ರೆಡಿಟ್ ಯುರೋಪ್ ಬ್ಯಾಂಕ್‌ಗೆ (ದುಬೈ) ಪರವಾಗಿ ಈ ಆದೇಶ ಜಾರಿಯಾಗಿದೆ.

ಸಾಲದಾತನು ತನ್ನ ಹಕ್ಕಿನಲ್ಲಿ ಹೇಳುವಂತೆ, ಡಿಸೆಂಬರ್ 2013 ರಲ್ಲಿ ಸಾಲ ಒಪ್ಪಂದದ ಮೂಲಕ ಆರಂಭದಲ್ಲಿ ಪಡೆದುಕೊಂಡ ಹಣವನ್ನು ಮರುಪಾವತಿ ಮಾಡಲು ಅವರು "ಜಂಟಿ ಹೊಣೆಗಾರ"ರಾಗಿದ್ದಾರೆ. ಈ ಸಂಬಂಧ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮರು ಮಾತುಕತೆ ನಡೆದಿದೆ. ಕ್ರೆಡಿಟ್ ಯುರೋಪ್ ಬ್ಯಾಂಕ್ ಆಮ್ಸ್ಟರ್‌ಡ್ಯಾಮ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು ಇದು ವ್ಯಾಪಾರ ಮತ್ತು ಸರಕುಗಳ ಹಣಕಾಸು ವ್ಯವಹಾರದಲ್ಲಿ ಹೆಸರಾಗಿದೆ, ಈ ಬ್ಯಾಂಕು ಜಗತ್ತಿನ  ಒಂಬತ್ತು ದೇಶಗಳಲ್ಲಿ ಕಾರ್ಯಾಚರಣೆಯನ್ನು ಹೊಂದಿದೆ.

ಶೆಟ್ಟಿ "ಈಗ ಯುಎಇ ವ್ಯಾಪ್ತಿಯಿಂದ ಭಾರತಕ್ಕೆ ಪಲಾಯನ ಮಾಡಿದ್ದು ಅವರ ಅಬುಧಾಬಿ ಮತ್ತು ದುಬೈನಲ್ಲಿನ ಆಸ್ತಿಗಳು, ಜೊತೆಗೆ ಎನ್ಎಂಸಿ ಹೆಲ್ತ್, ಫಿನಾಬ್ಲರ್, ಬಿಆರ್ಎಸ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಮತ್ತು ಇತರ ಕಂಪನಿಗಳ ಷೇರುಗಳು ಮುಟ್ಟುಗೋಲಾಗುವ ಆಸ್ತಿಗಳ ವ್ಯಾಪ್ತಿಯಲ್ಲಿದೆ ಎನ್ನಲಾಗಿದೆ,"ಸಾಮಾನ್ಯ ಜೀವನ ವೆಚ್ಚಗಳು ಮತ್ತು ಕಾನೂನು ಸಲಹೆ ಮತ್ತು ಪ್ರಾತಿನಿಧ್ಯಕ್ಕಾಗಿ ಸಮಂಜಸವಾದ ಮೊತ್ತ" ದ ಮೇಲೆ ಪ್ರತಿ ವಾರ $ 7,000 ವರೆಗೆ ಖರ್ಚು ಮಾಡಲು ನ್ಯಾಯಾಲಯ ಅನುಮತಿಸಿದೆ, 

ಇನ್ನು ದಾವೆ ಸಂಬಂಧ ಈಗಿನ ಪರಿಸ್ಥಿತಿಯಲ್ಲಿ ಯಾವ ಪ್ರತಿಕ್ರಿಯೆ ನೀಡಲು ಕ್ರೆಡಿಟ್ ಯುರೋಪ್ ಬ್ಯಾಂಕ್ ನಿರಾಕರಿಸಿದೆ, ಅಲ್ಲದೆ ಶೆಟ್ಟಿ ಮತ್ತು ಎನ್‌ಎಂಸಿ ಹೆಲ್ತ್‌ಕೇರ್‌ನ ಪ್ರತಿನಿಧಿಗಳು ಸಹ ಈ ಕುರಿತು ಯಾವ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಶೆಟ್ಟಿ  1975 ರಲ್ಲಿಎನ್‌ಎಂಸಿ ಹೆಲ್ತ್‌ಕೇರ್ ಅನ್ನು ಸ್ಥಾಪಿಸಿದ್ದರು. ಒಂದೇ ಆಸ್ಪತ್ರೆಯಿಂದ ಯುಎಇಯ ಅತಿದೊಡ್ಡ ಖಾಸಗಿ ಸ್ವಾಮ್ಯದ ಹೆಲ್ತ್‌ಕೇರ್ ಆಪರೇಟರ್ ಆಗಿ ಬೆಳೆದ ಶೆಟ್ಟಿ  ಅವರ ಈ ಹೆಲ್ತ್‌ಕೇರ್ ಸಂಸ್ಥೆಯಲ್ಲಿ  2,000 ವೈದ್ಯರು ಮತ್ತು 20,000 ಇತರ ಸಿಬ್ಬಂದಿಗಳಿದ್ದಾರೆ. ಕಂಪನಿಯು ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿಮಾಡಲ್ಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com