ಕೊರೋನಾ ಬಿಕ್ಕಟ್ಟು, ಜಾಗತಿಕ ವಾಯು ಸಾರಿಗೆ ಸಹಜ ಸ್ಥಿತಿಗೆ ಮರಳಲು 4 ವರ್ಷ ಬೇಕು: ಐಎಟಿಎ

ಜಾಗತಿಕ ವಿಮಾನಯಾನ ಸಂಸ್ಥೆಗಳು ಕೊರೊನಾಸೋಂಕಿನ ಬಿಕ್ಕಟ್ಟಿನ ನಂತರ ಮರಳಿ ಸಹಜ ಸ್ಥಿತಿಗೆ ಮರಳಲು ಕನಿಷ್ಠ ಇನ್ನೂ 4 ವರ್ಷಗಳ ಸಮಯ ತೆಗೆದುಕೊಳ್ಳಲಿದೆ ಎಂದು ಐಎಟಿಎ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಾಗತಿಕ ವಿಮಾನಯಾನ ಸಂಸ್ಥೆಗಳು ಕೊರೊನಾಸೋಂಕಿನ ಬಿಕ್ಕಟ್ಟಿನ ನಂತರ ಮರಳಿ ಸಹಜ ಸ್ಥಿತಿಗೆ ಮರಳಲು ಕನಿಷ್ಠ ಇನ್ನೂ 4 ವರ್ಷಗಳ ಸಮಯ ತೆಗೆದುಕೊಳ್ಳಲಿದೆ ಎಂದು ಐಎಟಿಎ ಹೇಳಿದೆ. 

ಕೊರೊನಾಸೋಂಕಿನ ಸಾಂಕ್ರಾಮಿಕ ರೋಗವು ವಾಯುಯಾನದ ಮೇಲೆ ಪರಿಣಾಮ ಬೀರುವ ಬಗ್ಗೆ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಅಮೆರಿಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಯುಯಾನದ ದುರ್ಬಲ ದೃಷ್ಟಿಕೋನವನ್ನು ಉಲ್ಲೇಖಿಸಿದೆ.

ಈ ವರ್ಷದ ದ್ವಿತೀಯಾರ್ಧವು ನಾವು ನಿರೀಕ್ಷಿಸಿದ್ದಕ್ಕಿಂತ ನಿಧಾನಗತಿಯ ಚೇತರಿಕೆ ಕಾಣಲಿದೆ ಎಂದು ಹೇಳಲಾಗಿದೆ. 

ಅಮೆರಿಕ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ವಾಯುಯಾನದಲ್ಲಿ 40 ಪ್ರತಿಶತವನ್ನು ಪ್ರತಿನಿಧಿಸುವುದರಿಂದ ಚೇತರಿಕೆಯ ನಿರೀಕ್ಷೆಗಳು ದುರ್ಬಲಗೊಂಡಿವೆ ಎಂದೂ ಐಎಟಿಎ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com