ಮುಕ್ತವಾಗಿರಿ, ತಾಳ್ಮೆಯಿಂದಿರಿ, ಭರವಸೆಯಿಡಿ: 2020ರ ಪದವೀಧರರಿಗೆ ಸುಂದರ್ ಪಿಚೈ ಕಿವಿ ಮಾತು

ಮುಕ್ತವಾಗಿರಿ, ಭರವಸೆ ಮತ್ತು ತಾಳ್ಮೆಯಿಂದಿರಿ ಎಂದು 2020ನೇ ಸಾಲಿನ ಪದವೀಧರರಿಗೆ ಸಲಹೆ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು, "ನಿಮಗೆ ಎಲ್ಲವನ್ನೂ ಬದಲಾಯಿಸುವ ಅವಕಾಶ" ಇದೆ ಎಂಬ ವಿಶ್ವಾಸ ತುಂಬಿದ್ದಾರೆ.
ಸುಂದರ್ ಪಿಚೈ
ಸುಂದರ್ ಪಿಚೈ
Updated on

ನವದೆಹಲಿ: ಮುಕ್ತವಾಗಿರಿ, ಭರವಸೆ ಮತ್ತು ತಾಳ್ಮೆಯಿಂದಿರಿ ಎಂದು 2020ನೇ ಸಾಲಿನ ಪದವೀಧರರಿಗೆ ಸಲಹೆ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು, "ನಿಮಗೆ ಎಲ್ಲವನ್ನೂ ಬದಲಾಯಿಸುವ ಅವಕಾಶ" ಇದೆ ಎಂಬ ವಿಶ್ವಾಸ ತುಂಬಿದ್ದಾರೆ.

ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ಗೂಗಲ್‌ನ ವೀಡಿಯೊ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಆಯೋಜಿಸಿದ್ದ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಿಚೈ, "ಮುಕ್ತರಾಗಿರಿ, ತಾಳ್ಮೆಯಿಂದಿರಿ, ಭರವಸೆಯಿಡಿ. ಇದನ್ನು ಮಾಡಲು ನಿಮ್ಮಿಂದ ಸಾಧ್ಯವಾದರೆ, ಇತಿಹಾಸವು 2020 ರ ತರಗತಿಯನ್ನು ನೆನಪಿಸಿಕೊಳ್ಳುತ್ತದೆ. ನೀವು ಕಳೆದುಕೊಂಡದ್ದಕ್ಕಾಗಿ ಅಲ್ಲ, ಆದರೆ ನೀವು ಏನು ಬದಲಾಯಿಸಿದ್ದೀರಿ ಎಂಬುದಕ್ಕೆ. ಎಲ್ಲವನ್ನೂ ಬದಲಾಯಿಸಲು ನಿಮಗೆ ಅವಕಾಶವಿದೆ. ನಾನು ಆಶಾವಾದಿಯಾಗಿದ್ದೇನೆ ಎಂದರು.

ಇದು ಪದವಿ ಸಮಾರಂಭ ಎಂದು ನಾನು ಭಾವಿಸುವುದಿಲ್ಲ. ನೀವು ಗಳಿಸಿದ ಎಲ್ಲ ಜ್ಞಾನವನ್ನು ನೀವು ಆಚರಿಸಬೇಕಾದ ಸಮಯ ಇದು ಸುಂದರ್ ಪಿಚೈ ಹೇಳಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಚೆಲ್ ಒಬಾಮ, ಕೊರಿಯಾದ ಪಾಪ್ ಗ್ರೂಪ್ ಬಿಟಿಎಸ್, ಗಾಯಕರು ಬೆಯಾನ್ಸ್ ಮತ್ತು ಲೇಡಿ ಗಾಗಾ, ಮಾಜಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಎಂ ಗೇಟ್ಸ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಕೊಂಡೋಲೀಜಾ ರೈಸ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com