2020-21 ನೇ ಸಾಲಿನ ವಿತ್ತೀಯ ಕೊರತೆ ಶೇ.5.1ಕ್ಕೆ ಏರಿಕೆ ಸಾಧ್ಯತೆ

2020-21ನೇ ಆರ್ಥಿಕ ವರ್ಷದ ವಿತ್ತೀಯ ಕೊರತೆ ಈ ಹಿಂದೆ ಇದ್ದ ಅಂದಾಜಿಗಿಂತಲೂ ಹೆಚ್ಚಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯಂ ಹೇಳಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

2020-21ನೇ ಆರ್ಥಿಕ ವರ್ಷದ ವಿತ್ತೀಯ ಕೊರತೆ ಈ ಹಿಂದೆ ಇದ್ದ ಅಂದಾಜಿಗಿಂತಲೂ ಹೆಚ್ಚಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯಂ ಹೇಳಿದ್ದಾರೆ. 

ಬ್ಯುಸಿನೆಸ್ ಸ್ಟ್ಯಾಂಡರ್ಡ್ ನೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ೨೦೨೦-೨೧ ನೇ ಸಾಲಿನ ಬಜೆಟ್ ನಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.೩.೫ ಕ್ಕೆ ಅಂದಾಜಿಸಲಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದು ಜಿಡಿಪಿಯ ಶೇ.೩.೫ ರಷ್ಟಲ್ಲದೆ ಅದಕ್ಕಿಂತಲೂ ಶೇ.೧.೭-೧.೮ ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಬಜೆಟ್ ನ ಯೋಜನೆಗಿಂತಲೂ ೪ ಟ್ರಿಲಿಯನ್ ಡಾಲರ್ ನಷ್ಟು ಹೆಚ್ಚುವರಿ ಸಾಲ ಮಾಡಿದೆ. ವಿತ್ತೀಯ ಕೊರತೆ ಬಜೆಟ್ ವಿಷಯದಲ್ಲಿ ಇನ್ನು ಬದಲಾವಣೆಗಳು ಸಾಧ್ಯವಿದ್ದು, ಕೋವಿಡ್-೧೯ ರ ಅನಿಶ್ಚಿತತೆಗಳನ್ನು ಅವಲಂಬಿಸಲಿದೆ ಎಂದು ಅರವಿಂದ್ ಸುಬ್ರಹ್ಮಣಿಯಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com