ಕಾರ್ ಖರೀದಿಗೆ ಸಾಲ ನೀಡಲು ಮಾರುತಿ ಸುಜೂಕಿ ಜೊತೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ
ವಾಣಿಜ್ಯ
ಕಾರ್ ಖರೀದಿಗೆ ಸಾಲ ನೀಡಲು ಮಾರುತಿ ಸುಜೂಕಿ ಜೊತೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ
ಹೊಸದಾಗಿ ಕಾರು ಖರೀದಿಸುವವರಿಗೆ ವಾಹನ ಸಾಲ ನೀಡಲು ಭಾರತೀಯ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಜೊತೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.
ಹೊಸದಾಗಿ ಕಾರು ಖರೀದಿಸುವವರಿಗೆ ವಾಹನ ಸಾಲ ನೀಡಲು ಭಾರತೀಯ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಜೊತೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.
ಈಗಿರುವ ಗ್ರಾಹಕರಷ್ಟೇ ಅಲ್ಲದೇ ಹೊಸ ಗ್ರಾಹಕರಿಗೂ ಸಹ ವಾಹನ ಖರೀದಿಗೆ ಕರೂರ್ ವೈಶ್ಯ ಬ್ಯಾಂಕ್ ಸಾಲ ನೀಡಲಿದೆ. ಆಕರ್ಷಕ ಬಡ್ಡಿ ದರ, ಆರು ತಿಂಗಳ ಹಾಲಿಡೆ ಅವಧಿಯೊಂದಿಗೆ ಶೇ.100 ರಷ್ಟು ಆನ್ ರೋಡ್ ಫೈನಾನ್ಸ್ ನ್ನು ಕರೂರ್ ವೈಶ್ಯ ಬ್ಯಾಂಕ್ ಗ್ರಾಹಕರಿಗೆ ನೀಡಲು ಮುಂದಾಗಿದೆ. ಮಾರುತಿ ಸುಜೂಕಿ ಸಂಸ್ಥೆಯ ಓಮ್ನಿ ಹಾಗೂ ಮಾರುತಿ ಇಕೋ ಕಾರುಗಳಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ. ವೇತನ ಹಾಗೂ ಸ್ವಯಂ ಉದ್ಯೋಗಿಗಳಿಗೆ ಸಾಲ ಲಭ್ಯವಿದೆ.
ತಾತ್ವಿಕವಾಗಿ 15 ನಿಮಿಷಗಳಲ್ಲಿ ಲೋನ್ ಲಭ್ಯವಾಗಲಿದ್ದು, ಚಾಲ್ತಿಯಲ್ಲಿರುವ ಗ್ರಾಹಕರಿಗೆ ಅದೇ ದಿನದಂದು ಸಾಲ ನೀಡಲಾಗುತ್ತದೆ.
ಸಾಲ ನೀಡುವ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ