ಐಸಿಐಸಿಐ ಬ್ಯಾಂಕ್‌ನೊಂದಿಗಿನ ಹ್ಯುಂಡೈ ಒಡಂಬಡಿಕೆಗೆ; ಕಾರು ಖರೀದಿಗೆ ವಾಹನ ಸಾಲ ಸೌಲಭ್ಯ ಈಗ ಇನ್ನಷ್ಟು ಸುಲಭ

ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ತನ್ನ ಗ್ರಾಹಕರಿಗೆ ಕಾರು ಖರೀದಿಗೆ ಕಸ್ಟಮೈಸ್ ಮಾಡಿದ ಆನ್ ಲೈನ್ ರಿಟೇಲ್ ಹಣಕಾಸು ಪರಿಹಾರಗಳನ್ನು ನೀಡುವ ಸಲುವಾಗಿ ಸೋಮವಾರ ಐಸಿಐಸಿಐ ಬ್ಯಾಂಕಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಐಸಿಐಸಿಐ ಬ್ಯಾಂಕ್‌ನೊಂದಿಗಿನ ಹ್ಯುಂಡೈ ಒಡಂಬಡಿಕೆಗೆ; ಕಾರು ಖರೀದಿಗೆ ವಾಹನ ಸಾಲ ಸೌಲಭ್ಯ ಈಗ ಇನ್ನಷ್ಟು ಸುಲಭ
ಐಸಿಐಸಿಐ ಬ್ಯಾಂಕ್‌ನೊಂದಿಗಿನ ಹ್ಯುಂಡೈ ಒಡಂಬಡಿಕೆಗೆ; ಕಾರು ಖರೀದಿಗೆ ವಾಹನ ಸಾಲ ಸೌಲಭ್ಯ ಈಗ ಇನ್ನಷ್ಟು ಸುಲಭ
Updated on

ಮುಂಬೈ: ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ತನ್ನ ಗ್ರಾಹಕರಿಗೆ ಕಾರು ಖರೀದಿಗೆ ಕಸ್ಟಮೈಸ್ ಮಾಡಿದ ಆನ್ ಲೈನ್ ರಿಟೇಲ್ ಹಣಕಾಸು ಪರಿಹಾರಗಳನ್ನು ನೀಡುವ ಸಲುವಾಗಿ ಸೋಮವಾರ ಐಸಿಐಸಿಐ ಬ್ಯಾಂಕಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಪಾಲುದಾರಿಕೆಯಡಿಯಲ್ಲಿ, ಐಸಿಐಸಿಐ ಬ್ಯಾಂಕ್ ಆನ್ ಲೈನ್ ನಲ್ಲಿ ಎಚ್ಎಂಐಎಲ್ ನ 'ಖರೀದಿಸಲು ಕ್ಲಿಕ್ ಮಾಡಿ'ಯೋಜನೆ ಸಂಯೋಜಿಸಿದ್ದು, ಈ ಮೂಲಕ ಗ್ರಾಹಕರಿಗೆ ತಮ್ಮ ನೆಚ್ಚಿನ ಹ್ಯುಂಡೈ ಕಾರನ್ನು ಖರೀದಿಸಲು ಅಗತ್ಯವಾದ ಹಣದ ಜೊತೆಗೆ ಕಾರು ಖರೀದಿಗೆ ಸಂಯೋಜಿತ ಆನ್ ಲೈನ್ ಪರಿಹಾರ ಒದಗಿಸುತ್ತದೆ. ಇದರೊಂದಿಗೆ, ಕ್ಲಿಕ್ ಟು ಬೈ' ವೆಬ್ ಸೈಟ್ ಮೂಲಕವೇ ಐಸಿಐಸಿಐ ಬ್ಯಾಂಕಿನ ಗ್ರಾಹಕರು ನೇರವಾಗಿ ಕಾರಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಶಾಖೆಗೆ ಭೌತಿಕವಾಗಿ ಭೇಟಿ ನೀಡದೆ ತ್ವರಿತ ಸಾಲ ಮಂಜೂರಾತಿ ಪಡೆಯಬಹುದು.

ಈ ಸೇವೆಗಳ ಜೊತೆಗೆ, ಐಸಿಐಸಿಐ ಬ್ಯಾಂಕ್ ಶೇ. 100ರಷ್ಟು ಆನ್-ರೋಡ್ ಹಣದ ಕೊಡುಗೆಯನ್ನು ಸಹ ನೀಡುತ್ತದೆ. ಇತ್ತೀಚೆಗಷ್ಟೇ ಮಾರುತಿ ಸುಜೂಕಿ ಸಂಸ್ಥೆ ಕರೂರ್ ವೈಶ್ಯ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡು, ಮಾರುತಿ ಸುಜೂಕಿ ಕಾರು ಖರೀದಿಸುವವರಿಗೆ ವೈಶ್ಯ ಬ್ಯಾಂಕ್ ವಾಹನ ಸಾಲದ ಸೌಲಭ್ಯ ಕಲ್ಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com