2019-20ರ ಆರ್ಥಿಕ ವರ್ಷಕ್ಕೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.5 ಕ್ಕೆ ಇಳಿಸಿದ ಇಪಿಎಫ್ಒ

ಪ್ರಸಕ್ತ ಆರ್ಥಿಕ ವರ್ಷದಲ್ಲಿ  ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು  ಏಳು ವರ್ಷಗಳಲ್ಲಿ ಕಡಿಮೆ ಎನ್ನಲಾದ ಶೇ. 8. 5 ರಷ್ಟು ಪಾವತಿಸಲು ಇಪಿಎಫ್ ಒ ನಿರ್ಧರಿಸಿದೆ. 2018-19ರಲ್ಲಿ ಶೇ. 8. 65 ರಷ್ಟು ಬಡ್ಡಿದರವನ್ನು ಸುಮಾರು ಆರು ಕೋಟಿ ಗ್ರಾಹಕರಿಗೆ ಇಪಿಎಫ್ ಒ  ಪಾವತಿಸಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳಲ್ಲಿ ಕಡಿಮೆ ಎನ್ನಲಾದ ಶೇ. 8.5 ರಷ್ಟು ಪಾವತಿಸಲು ಇಪಿಎಫ್ಒ ನಿರ್ಧರಿಸಿದೆ. 2018-19ರಲ್ಲಿ ಶೇ. 8.65 ರಷ್ಟು ಬಡ್ಡಿದರವನ್ನು ಸುಮಾರು ಆರು ಕೋಟಿ ಗ್ರಾಹಕರಿಗೆ ಇಪಿಎಫ್ಒ  ಪಾವತಿಸಿತ್ತು. 

ಇಪಿಎಫ್ಒ - ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 2019-20 ಆರ್ಥಿಕ ವರ್ಷದಲ್ಲಿ ಭವಿಷ್ಯ ನಿಧಿ ಪಾವತಿದಾರರಿಗೆ ಶೇ. 8.5 ರಷ್ಟು ಬಡ್ಡಿದರವನ್ನು ನೀಡಲು ಸಿಬಿಟಿ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಭೆಯ ಬಳಿಕ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದರು.

ಈ ವರ್ಷದಲ್ಲಿ ಭವಿಷ್ಯನಿಧಿ ಗ್ರಾಹಕರಿಗೆ ಶೇ. 8.5 ರಷ್ಟು ಬಡ್ಡಿದರವನ್ನು ನೀಡಲು 700 ಕೋಟಿಯನ್ನು ಇಪಿಎಫ್ಒ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ಈ ವರ್ಷ ಶೇ. 8.55 ರಷ್ಟು ಬಡ್ಡಿದರವನ್ನು ಒದಗಿಸಿದರೆ ಸುಮಾರು 300 ಕೋಟಿಯನ್ನು ಹೆಚ್ಚುವರಿಯಾಗಿ ಇಪಿಎಫ್ ಒ ನೀಡಬೇಕಾಗುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಪ್ರಮಾಣದಲ್ಲಿ ಬಡ್ಡಿದರ ನೀಡಿದರೆ ಇಪಿಎಫ್ ಒ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಏಳು ವರ್ಷಗಳ ಹಿಂದೆ ಅಂದರೆ 2012-13 ರ ಆರ್ಥಿಕ ವರ್ಷದಲ್ಲಿ ಶೇ. 8.5 ರಷ್ಟು ಬಡ್ಡಿದರವನ್ನು ಕಡಿಮೆಗೊಳಿಸಲಾಗಿತ್ತು. 2016-17ರಲ್ಲಿ ಶೇ. 8.65 ರಷ್ಟು ಹಾಗೂ 2017-18ರಲ್ಲಿ ಶೇ. 8.55 ರಷ್ಟು ಬಡ್ಡಿದರವನ್ನು ಇಪಿಎಫ್ಒ ಪಾವತಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com