ಭಾರತ್ ಪೆಟ್ರೋಲಿಯಂ ಮಾರಾಟಕ್ಕೆ ಬಿಡ್‌ಗಳನ್ನು ಆಹ್ವಾನಿಸಿದ ಕೇಂದ್ರ ಸರ್ಕಾರ!

ಭಾರತದ ಎರಡನೇ ಅತಿದೊಡ್ಡ ತೈಲ ಶುದ್ಧೀಕರಣ ಮತ್ತು ಮಾರಾಟ ಕಂಪನಿ  ಭಾರತ್  ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್ ) ನಲ್ಲಿನ ಶೇ. 52. 98 ರಷ್ಟು ಸಂಪೂರ್ಣ ಷೇರನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಇಂದು ಬಿಡ್ ಗಳನ್ನು ಆಹ್ವಾನಿಸಿದೆ
ಬಿಪಿಸಿಎಲ್
ಬಿಪಿಸಿಎಲ್

ನವದೆಹಲಿ: ಭಾರತದ ಎರಡನೇ ಅತಿದೊಡ್ಡ ತೈಲ ಶುದ್ಧೀಕರಣ ಮತ್ತು ಮಾರಾಟ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್ ) ನಲ್ಲಿನ ಶೇ. 52. 98 ರಷ್ಟು ಸಂಪೂರ್ಣ ಷೇರನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಇಂದು ಬಿಡ್ ಗಳನ್ನು ಆಹ್ವಾನಿಸಿದೆ.

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಬಿಪಿಸಿಎಲ್‌ನ  ಮಾರಾಟಕ್ಕೆ  ಮೇ 2 ರೊಳಗೆ ಬಿಡ್ ಗಳನ್ನು ಆಹ್ವಾನಿಸಿದೆ.

ಬಿಪಿಸಿಎಲ್ ನ 114. 91 ಕೋಟಿ ಇಕ್ವಿಟಿ ಷೇರು ನಲ್ಲಿ ಸರ್ಕಾರ ಹೊಂದಿರುವ ಶೇ. 52. 98 ರಷ್ಟು ಸಂಪೂರ್ಣ ಷೇರನ್ನು ಮಾರಾಟ ಮಾಡಲು  ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. 

ಬಿಪಿಸಿಎಲ್ ಖಾಸಗೀಕರಣ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಪಾಲ್ಗೊಳ್ಳುವಂತಿಲ್ಲ. 10 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ನಿವ್ವಳ ಮೌಲ್ಯ ಹೊಂದಿರುವ ಯಾವುದೇ ಖಾಸಗಿ ಕಂಪನಿಗಳು ಬಿಡ್  ಸಲ್ಲಿಸಲು ಅರ್ಹವಾಗಿರುತ್ತವೆ. ನಾಲ್ಕು ಸಂಸ್ಥೆಗಳಿಗಿಂತ ಹೆಚ್ಚಿನ ಒಕ್ಕೂಟವನ್ನು ಸಹ ಬಿಡ್ ನಲ್ಲಿ ಪಾಲ್ಗೊಳ್ಳಲು ಅವಕಾಶ  ಇರುವುದಿಲ್ಲ ಎಂದು ಹೇಳಿದೆ. 

ಬಿಪಿಸಿಎಲ್ ಖರೀದಿದಾರರಿಗೆ ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯದ ಶೇಕಡಾ 14 ಮತ್ತು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಪಾಲನ್ನು ನೀಡಲಾಗುತ್ತದೆ. 87, 388 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿರುವ ಬಿಪಿಸಿಎಲ್ ನಲ್ಲಿ ಪ್ರಸ್ತುತ ಸರ್ಕಾರ ಹೊಂದಿರುವ ಷೇರಿನ ಮೌಲ್ಯ 46 ಸಾವಿರ ಕೋಟಿಯಷ್ಟಾಗಿದೆ. 

ಮುಂಬೈ, ಕೊಚ್ಚಿ, ಬಿನ್ನಾ ( ಮಧ್ಯಪ್ರದೇಶ ) ಹಾಗೂ ಅಸ್ಸಾಂನ ನುಮಲಿಘಡದಲ್ಲಿ ಬಿಪಿಸಿಎಲ್  ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ 38.3 ಮಿಲಿಯನ್ ಟನ್ ನಷ್ಟು ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿವೆ. ಭಾರತದ ಒಟ್ಟಾರೇ ಸಂಸ್ಕರಣಾ ಸಾಮರ್ಥ್ಯ 249.4 ಮಿಲಿಯನ್ ಟನ್ ನಷ್ಟಾಗಿದ್ದು, ಇದರಲ್ಲಿ ಶೇ. 15 ರಷ್ಟು ಬಿಪಿಸಿಎಲ್ ನದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com