ಯೆಸ್ ಬ್ಯಾಂಕ್ ಬಿಕ್ಕಟ್ಟು: ಅನಿಲ್ ಅಂಬಾನಿಗೆ ಇಡಿ ಸಮನ್ಸ್ 

ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಮತ್ತು ಇತರರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ  ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯವರಿಗೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅನಿಲ್ ಅಂಬಾನಿ
ಅನಿಲ್ ಅಂಬಾನಿ

ನವದೆಹಲಿ: ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಮತ್ತು ಇತರರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ  ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯವರಿಗೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಬಿಕ್ಕಟ್ಟು ಎದುರಿಸುತ್ತಿರುವ ಬ್ಯಾಂಕಿನಿಂದ ಸಾಲ ಪಡೆದ ನಂತರಸಾಲ ಮರುಪಾವತಿಸದೆ ಹೋದ ದೊಡ್ಡ ಉದ್ಯಮ ಸಮೂಹಗಳಲ್ಲಿ ಅನಿಲ್ ಅಂಬಾನಿಯವರ ಸಂಥೆಗಳೂ ಸೇರಿರುವ ಕಾರಣ ಅಂಬಾನಿಯನ್ನು ಸೋಮವಾರ ಮುಂಬೈನ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಕೇಳಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಆದರೆ ಆರೋಗ್ಯ ಹದಗೆಟ್ಟಿರುವ ಕಾರಣ ಅಂಬಾನಿ ತನಿಖಾ ಏಜೆನ್ಸಿಯಿಂದ ವಿನಾಯಿತಿ ಕೋರಿದ್ದಾರೆ ಮತ್ತು ಅವರಿಗೆ ಹೊಸ ದಿನಾಂಕವನ್ನು ನೀಡಬಹುದು ಎಂದು ತಿಳಿದುಬಂದಿದೆ.

ಅಂಬಾನಿಯ ಸಮೂಹ ಕಂಪನಿಗಳು ಯೆಸ್ ಬ್ಯಾಂಕಿನಿಂದ ಸುಮಾರು 12,800 ಕೋಟಿ ರೂ.ಗಳ ಸಾಲವನ್ನು ತೆಗೆದುಕೊಂಡಿವೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com