ಪ್ರಧಾನಿ ಮೋದಿ ಪ್ರಭಾವ: ದಾಖಲೆ ನಿರ್ಮಿಸಿದ ಖಾದಿ ಉತ್ಪನ್ನಗಳ ವಹಿವಾಟು!

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ 2019-20 ನೇ ಸಾಲಿನ ವಹಿವಾಟಿನ ಅಂಕಿ-ಅಂಶ ಬಹಿರಂಗಪಡಿಸಿದ್ದು, ಈ ಸಾಲಿನಲ್ಲಿ 90 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿದೆ. 
ಪ್ರಧಾನಿ ಮೋದಿ ಕರೆ ಪ್ರಭಾವ: ದಾಖಲೆ ನಿರ್ಮಿಸಿದ ಖಾದಿ ಉತ್ಪನ್ನಗಳ ವಹಿವಾಟು!
ಪ್ರಧಾನಿ ಮೋದಿ ಕರೆ ಪ್ರಭಾವ: ದಾಖಲೆ ನಿರ್ಮಿಸಿದ ಖಾದಿ ಉತ್ಪನ್ನಗಳ ವಹಿವಾಟು!

ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ 2019-20 ನೇ ಸಾಲಿನ ವಹಿವಾಟಿನ ಅಂಕಿ-ಅಂಶ ಬಹಿರಂಗಪಡಿಸಿದ್ದು, ಈ ಸಾಲಿನಲ್ಲಿ 90 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿದೆ. 

ಈ ಪ್ರಮಾಣದ ವಹಿವಾತನ್ನು ಯಾವುದೇ ಎಫ್ಎಂಸಿಜಿ ಸಂಸ್ಥೆಯೂ ಸರಿಗಟ್ಟಿಲ್ಲ, ಇದು ಕೆವಿಐಸಿಯ ಸಾರ್ವಕಾಲಿಕ ಯಶೋಗಾಥೆಯಾಗಿದೆ ಎಂದು ಕೆವಿಐಸಿ ಹೇಳಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಖಾದಿ ಬ್ರಾಂಡ್ ಗೆ ಬೇಡಿಕೆ ಹೆಚ್ಚಿದೆ. ಕಳೆದ ಐದು ವರ್ಷಗಳಲ್ಲಿ ಖಾದಿ ಮಾರಾಟ 3 ಪಟ್ಟು ಹೆಚ್ಚಾಗಿದ್ದು, ಅತ್ಯಂತ ಪರಿಸರಸ್ನೇಹಿ ಉತ್ಪನ್ನವಾಗಿದೆ ಎಂದು ಕೆವಿಐಸಿ ತಿಳಿಸಿದೆ. ಮೋದಿ ಅವಧಿಯಲ್ಲಿ ಗ್ರಾಮೋದ್ಯೋಗ ಕೈಗಾರಿಕೆ (VI) ಸೆಕ್ಟರ್ ಸಹ ಅದ್ಭುತ ಬೆಳವಣಿಗೆ ಕಂಡಿದ್ದು ಕಳೆದ 5 ವರ್ಷಗಳಲ್ಲಿ ಉತ್ಪಾದನೆ ಮತ್ತು ಮಾರಾಟ ಶೇ.100 ರಷ್ಟು ಏರಿಕೆ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com