ಮಾರ್ಚ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.16.7 ರಷ್ಟು ಕುಸಿತ 

ಮಾರ್ಚ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.16.7 ರಷ್ಟು ಕುಸಿತ ಕಂಡಿದೆ. 
ಮಾರ್ಚ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.16.7 ರಷ್ಟು ಕುಸಿತ
ಮಾರ್ಚ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.16.7 ರಷ್ಟು ಕುಸಿತ

ನವದೆಹಲಿ: ಮಾರ್ಚ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.16.7 ರಷ್ಟು ಕುಸಿತ ಕಂಡಿದೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ಗಣಿ, ಉತ್ಪಾದನಾ ಕ್ಷೇತ್ರ, ವಿದ್ಯುತ್ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಉತ್ಪಾದನೆ ಕಡಿಮೆಯಾಗಿದ್ದರಿಂದ ಕೈಗಾರಿಕಾ ಉತ್ಪಾದನೆ ಕಡಿಮೆಯಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಹೇಳಿವೆ. 

2019 ರ ಮಾರ್ಚ್ ನಲ್ಲಿ ಕೈಗಾರಿಕಾ ಉತ್ಪನ್ನ ಸೂಚ್ಯಂಕ (ಐಐಪಿ) ಶೇ.2.7 ರಷ್ಟು ಬೆಳವಣಿಗೆಯಾಗಿತ್ತು. ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ( ಎನ್ಎಸ್೦) ಡಾಟಾ ಪ್ರಕಾರ ಉತ್ಪಾದನಾ ಕ್ಷೇತ್ರ ಶೇ.20.6 ರಷ್ಟು ಕುಸಿದಿದೆ. 

ವಿದ್ಯುತ್ ಉತ್ಪಾದನೆ ಸಹ ಶೇ.6.8 ರಷ್ಟು ಕುಸಿದಿದ್ದು, 2019 ರ ಮಾರ್ಚ್ ತಿಂಗಳಲ್ಲಿ ಶೇ. 2.2 ರಷ್ಟು ಬೆಳವಣಿಗೆ ಇತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com