ಹಣಕಾಸು ಸಚಿವರ ಘೋಷಣೆಗಳಿಂದ ಎಂಎಸ್‍ಎಂಇಗಳಿಗೆ ಹೊಸ ಜೀವ: ಅಸೋಚಾಮ್‍

ದೇಶವ್ಯಾಪಿ ಲಾಕ್ ಡೌನ್ ನಿಂದ ತೀವ್ರ ಬಾಧಿತವಾಗಿರುವ ಸಣ್ಣ,ಅತಿಸಣ್ಣ ಮತ್ತು ಮಧ್ಯಮ(ಎಂಎಸ್ಎಂಇ) ಉದ್ಯಮಗಳು, ಕಿರು ಹಣಕಾಸು ಸಂಸ್ಥೆಗಳು, ವಸತಿ ಆರ್ಥಿಕ ನೆರವು ಸಂಸ್ಥೆಗಳು, ರಿಯಲ್ ಎಸ್ಟೇಟ್ ಮತ್ತು ಅತ್ಯವಸರ ಪರಿಹಾರ ದೊರೆತಂತಾಗಿದೆ ಎಂದು ಅಸೋಚಾಮ್ ಮಹಾಕಾರ್ಯದರ್ಶಿ ದೀಪಕ್ ಸೂದ್ ಹೇಳಿದ್ದಾರೆ.
ಅಸೋಚಾಮ್
ಅಸೋಚಾಮ್

ಚಂಡೀಗಢ: ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರಮೋದಿ ಘೋಷಿಸಿದ 20 ಲಕ್ಷ ರೂ ಪ್ಯಾಕೇಜ್ ನ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರಕಟಿಸಿದ ಕ್ರಮಗಳಿಂದ ದೇಶವ್ಯಾಪಿ ಲಾಕ್ ಡೌನ್ ನಿಂದ ತೀವ್ರ ಬಾಧಿತವಾಗಿರುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ(ಎಂಎಸ್ಎಂಇ) ಉದ್ಯಮಗಳು, ಕಿರು ಹಣಕಾಸು ಸಂಸ್ಥೆಗಳು, ವಸತಿ ಆರ್ಥಿಕ ನೆರವು ಸಂಸ್ಥೆಗಳು, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ವಲಯಗಳಿಗೆ ಅತ್ಯಗತ್ಯ ಮತ್ತು ಅತ್ಯವಸರ ಪರಿಹಾರ ದೊರೆತಂತಾಗಿದೆ ಎಂದು ಅಸೋಚಾಮ್ ಮಹಾಕಾರ್ಯದರ್ಶಿ ದೀಪಕ್ ಸೂದ್ ಹೇಳಿದ್ದಾರೆ.

ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿರೂ ಸಾಲ ಸೌಲಭ್ಯ ಒದಗಿಸಿರುವುದು ದೇಶದ ಜಿಡಿಪಿಗೆ ಶೇ 30ರಷ್ಟು ಕೊಡುಗೆ ನೀಡುತ್ತಿರುವ ಮತ್ತು 11 ಕೋಟಿ ಉದ್ಯೋಗ ಸೃಷ್ಟಿಸುತ್ತಿರುವ ಎಂಎಸ್ಎಂಇ ವಲಯದ ಪುನಶ್ಚೇತನಕ್ಕೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. 

ಸರ್ಕಾರದ ಖಾತರಿಯೊಂದಿಗೆ ಎಂಎಸ್ಎಂಇಗಳಿಗೆ ಮೂರು ಲಕ್ಷ ಕೋಟಿ ರೂ. ಸಾಲ ಒದಗಿಸಿರುವುದು ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರಿ, 10 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಚಟುವಟಿಕೆಗಳಿಗೆ ಕಾರಣವಾಗಲಿದೆ. ಅಲ್ಲದೆ, ಉದ್ಯೋಗಗಳನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಲಿದೆ ಎಂದು ಸೂದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com