ಎಸ್‌ಬಿಐ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳಲ್ಲಿ ಭಾರೀ ಕಡಿತ

ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ರಿಟೈಲ್ ಟರ್ಮ್ ಡೆಪಾಸಿಟ್ ಮೇಲಿನ ಬಡ್ಡಿದರಗಳನ್ನು 40 ಬೇಸಿಸ್ ಪಾಯಿಂಟ್‌ಗಳವರೆಗೆ (ಬಿಪಿಎಸ್) ಕಡಿಮೆ ಮಾಡಿದೆ. ಮೇ ತಿಂಗಳಲ್ಲಿ ಬ್ಯಾಂಕ್ ಈ ರೀತಿ ಬಡ್ಡಿದರ ಇಳಿಕೆ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ರಿಟೈಲ್ ಟರ್ಮ್ ಡೆಪಾಸಿಟ್ ಮೇಲಿನ ಬಡ್ಡಿದರಗಳನ್ನು 40 ಬೇಸಿಸ್ ಪಾಯಿಂಟ್‌ಗಳವರೆಗೆ (ಬಿಪಿಎಸ್) ಕಡಿಮೆ ಮಾಡಿದೆ. ಮೇ ತಿಂಗಳಲ್ಲಿ ಬ್ಯಾಂಕ್ ಈ ರೀತಿ ಬಡ್ಡಿದರ ಇಳಿಕೆ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ಇದಕ್ಕೆ ಮುನ್ನ ಮೇ 12 ರಂದು ತನ್ನ ಠೇವಣಿ ದರವನ್ನು ಕಡಿಮೆ ಮಾಡಿ ಎಸ್‌ಬಿಐ ಆದೇಶಿಸಿತ್ತು.ಹೊಸ ಬಡ್ಡಿದರಗಳು ಬುಧವಾರದಿಂದ ಜಾರಿಗೆ ಬರುತ್ತವೆ, ಇದು ಹೊಸ ಠೇವಣಿ ಮತ್ತು ಮೆಚ್ಯೂರ್ಡ್  ಠೇವಣಿಗಳ ನವೀಕರಣಗಳಿಗೆ ಅನ್ವಯವಾಗಲಿದೆ.

ಏಳು ದಿನಗಳಿಂದ 45 ದಿನಗಳಲ್ಲಿ ಮುಕ್ತಾಯಗೊಳ್ಳುವ ಠೇವಣಿಗಳಿಗಾಗಿ, ಬ್ಯಾಂಕು ಶೇಕಡಾ 2.90 ರಷ್ಟು ಬಡ್ಡಿದರವನ್ನು ನೀಡುತ್ತಿದೆ. 180 ದಿನಗಳಿಂದ 210 ದಿನಗಳ ಠೇವಣಿಗಳಿಗಾಗಿ ಪರಿಷ್ಕೃತ ದರವು 4.80 ಶೇ. ಬದಲಾಗಿ  ಶೇ 4.40 ಆಗಿದೆ. ಒಂದು ವರ್ಷದಿಂದ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳು ಈಗ ಶೇ 5.50 ರ ಬದಲು  5.10 ಶೇಕಡ ಬಡ್ಡಿದರವನ್ನು ಪಡೆಯುತ್ತವೆ. ಐದು ವರ್ಷದಿಂದ  10 ವರ್ಷಗಳವರೆಗೆ ಠೇವಣಿಗಳ ಮೇಲಿನ ಬಡ್ಡಿದರವು ಶೇಕಡಾ  5.70 ಬದಲಿಗೆ  ಶೇಕಡಾ 5.40 ಕ್ಕೆಇಳಿಸಲಾಗಿದೆ.

ಇನ್ನು ಹಿರಿಯ ನಾಗರಿಕರಿಗೆ ಸಹ ಎಲ್ಲಾ ಅವಧಿಯ ಠೇವಣಿಗಳ ಮೇಲೆ 40 ಬೇಸಿಸ್ ಪಾಯಿಂಟ್‌ಗಳವರೆಗೆ ಬಡ್ಡಿದರ ಕಡಿತ ಮಾಡಲಾಗಿದೆ.

ಬ್ಯಾಂಕು ಬೃಹತ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು (2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ) 50 ಬೇಸಿಸ್ ಪಾಯಿಂಟ್ ವರೆಗೆ ಕಡಿತ ಮಾಡಿದೆ ಎಂದು ಪ್ರಕಟಣೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com