‘ಎಲ್ ಅಂಡ್ ಟಿ‘ಗೆ ಭಾರತದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ ಗುತ್ತಿಗೆ

ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್‍ ರೈಲು ಯೋಜೆಯೆಂದೇ ಹೆಸರಾಗಿರುವ ಹೈ-ಸ್ಪೀಡ್ ರೈಲು (ಎಂಎಎಚ್‌ಎಸ್‌ಆರ್) ಯೋಜನೆಯಡಿ 87.569 ಕಿ.ಮೀ ಮಾರ್ಗ ನಿರ್ಮಿಸಲು ಎಲ್ ಅಂಡ್ ಟಿ ಕನ್‌ಸ್ಟ್ರಕ್ಷನ್‌ ಕಂಪೆನಿಯ ಸಾರಿಗೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್‍ ರೈಲು ಯೋಜನೆ ಎಂದೇ ಹೆಸರಾಗಿರುವ ಹೈ-ಸ್ಪೀಡ್ ರೈಲು (ಎಂಎಎಚ್‌ಎಸ್‌ಆರ್) ಯೋಜನೆಯಡಿ 87.569 ಕಿ.ಮೀ ಮಾರ್ಗ ನಿರ್ಮಿಸಲು ಎಲ್ ಅಂಡ್ ಟಿ ಕನ್‌ಸ್ಟ್ರಕ್ಷನ್‌ ಕಂಪೆನಿಯ ಸಾರಿಗೆ ಮೂಲಸೌಕರ್ಯ ವ್ಯವಹಾರ ವಿಭಾಗಕ್ಕೆ ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್(ಎನ್‌ಎಚ್‌ಎಸ್‌ಆರ್‍ ಸಿಎಲ್) ನಿಂದ ಮತ್ತೊಂದು ಬೃಹತ್ ಗುತ್ತಿಗೆ ದೊರೆತಿದೆ.

ಎಂಎಎಚ್‌ಎಸ್‌ಆರ್ ನ ಸಿ-6 ಪ್ಯಾಕೇಜ್ ಅನ್ನು ನಿರ್ಮಿಸಲು ಈ ಗುತ್ತಿಗೆ ದೊರೆತಿದೆ. ಈಗಾಗಲೇ ಯೋಜನೆಯ ಸಿ-4 ಪ್ಯಾಕೇಜ್‌ಗಾಗಿ ಸಂಸ್ಥೆ ಗುತ್ತಿಗೆ ಪಡೆದಿದೆ. 237.1 ಕಿ.ಮೀ. ಉದ್ದದ ಮಾರ್ಗವನ್ನೊಳಗೊಂಡ ಈ ಯೋಜನೆಯಡಿ ದೇಶದಲ್ಲಿ ಇಲ್ಲಿಯವರೆಗೆ ನೀಡಲಾದ ಅತಿದೊಡ್ಡ ಇಪಿಸಿ ಗುತ್ತಿಗೆ ಇದಾಗಿದೆ.

ಎಂಎಎಚ್‌ಎಸ್‌ಆರ್ ನ ಈ ಪ್ಯಾಕೇಜ್‍ನಡಿ ಮಾರ್ಗದ ಪಕ್ಕದಲ್ಲಿ ನೀರು ಹರಿದು ಹೋಗಲು ಕಾಲುವೆಗಳು, ಒಂದು ನಿಲ್ದಾಣ, ಪ್ರಮುಖ ನದಿ ಸೇತುವೆಗಳು, ನಿರ್ವಹಣೆ ಡಿಪೋಗಳು ಮತ್ತು ಇತರ ಕಾಮಗಾರಿಗಳು ಒಳಗೊಂಡಿವೆ. 

ಈ ಗುತ್ತಿಗೆ ಒಪ್ಪಂದದ ನಿರ್ದಿಷ್ಟ ಪ್ಯಾಕೇಜ್ ಒಟ್ಟು ಉದ್ದದ ಶೇ 17.2 ರಷ್ಟಿದೆ. ಇದು ವಡೋದರಾದ ಹೊರವಲಯದಿಂದ ಗುಜರಾತ್ ರಾಜ್ಯದ ಅಹಮದಾಬಾದ್‌ನ ಹೊರವಲಯದವರೆಗಿದೆ. ಆನಂದ್/ನಾಡಿಯಾಡ್‌ನಲ್ಲಿ ಒಂದು ನಿಲ್ದಾಣವೂ ಈ ಪ್ಯಾಕೇಜ್‍ನಡಿ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com