ಭಾರತೀಯ ಡೆವಲಪರ್‌ಗಳಿಗಾಗಿ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಪ್ರಾರಂಭಿಸಿದ ಪೇಟಿಎಂ

ಭಾರತೀಯ ಡೆವಲಪರ್ ಗಳನ್ನು ಪೇಟಿಎಂ ತಾನು ಪ್ರತ್ಯೇಕ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಅನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಇದು ಪೇಟಿಎಂ ಹಾಗೂ ಟೆಕ್ ದೈತ್ಯ ಗೂಗಲ್ ನಡುವಿನ ಜಗಳವನ್ನು ಇನ್ನಷ್ಟು ತೀವ್ರ ಸ್ವರೂಪಕ್ಕಿಳಿಯುವಂತೆ ಮಾಡಿದೆ.
ಭಾರತೀಯ ಡೆವಲಪರ್‌ಗಳಿಗಾಗಿ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಪ್ರಾರಂಭಿಸಿದ ಪೇಟಿಎಂ
Updated on

ನವದೆಹಲಿ: ಭಾರತೀಯ ಡೆವಲಪರ್ ಗಳನ್ನು ಪೇಟಿಎಂ ತಾನು ಪ್ರತ್ಯೇಕ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಅನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಇದು ಪೇಟಿಎಂ ಹಾಗೂ ಟೆಕ್ ದೈತ್ಯ ಗೂಗಲ್ ನಡುವಿನ ಜಗಳವನ್ನು ಇನ್ನಷ್ಟು ತೀವ್ರ ಸ್ವರೂಪಕ್ಕಿಳಿಯುವಂತೆ ಮಾಡಿದೆ.

ಕ್ರೀಡಾ ಬೆಟ್ಟಿಂಗ್ ಚಟುವಟಿಕೆಗಳ ಕುರಿತಾದ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಎಂ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಕೆಲವು ಗಂಟೆಗಳ ಕಾಲ ನಿರ್ಬಂಧಿಸಿದ ಕೆಲವೇ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.

ಪೇಟಿಎಂಮಿನಿ ಅಪ್ಲಿಕೇಶನ್‌ಗಳ ಲಿಸ್ಟ್ ಮತ್ತುಡಿಸ್ಟ್ರಿಬ್ಯೂಷನ್ ಅನ್ನು ಯಾವುದೇ ಶುಲ್ಕವಿಲ್ಲದೆ ತನ್ನ ಅಪ್ಲಿಕೇಶನ್‌ನಲ್ಲಿ ಒದಗಿಸುತ್ತಿದೆ ಮತ್ತು ಪಾವತಿಗಳಿಗಾಗಿ, ಡೆವಲಪರ್‌ಗಳು ತಮ್ಮ ಬಳಕೆದಾರರಿಗೆ Paytm Wallet, Paytm Payments Bank, UPI, Net-bank ಮತ್ತು Cards ಆಯ್ಕೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪೇಟಿಎಂ ಹೇಳಿದೆ.

300 ಕ್ಕೂ ಹೆಚ್ಚು ಅಪ್ಲಿಕೇಶನ್ ಆಧಾರಿತ ಸೇವಾ ಪೂರೈಕೆದಾರರಾದ ಡೆಕಾಥ್ಲಾನ್, ಓಲಾ, ಪಾರ್ಕ್ +, ರಾಪಿಡೊ, ನೆಟ್‌ಮೆಡ್ಸ್, 1 ಎಂಜಿ, ಡೊಮಿನೊಸ್ ಪಿಜ್ಜಾ, ಫ್ರೆಶ್‌ಮೆನು, ನೋಬ್ರೊಕರ್ ಈಗಾಗಲೇ ಪ್ರೋಗ್ರಾಮ್ ಗೆ ಸೇರ್ಪಡೆಗೊಂಡಿದೆ ಎಂದು ಅದು ಹೇಳಿದೆ. "ನಾವು ಇಂದು ಪ್ರತಿಯೊಬ್ಬ ಭಾರತೀಯ ಅಪ್ಲಿಕೇಶನ್ ಡೆವಲಪರ್‌ಗಳಿಗೆ ಅವಕಾಶವನ್ನು ಸೃಷ್ಟಿಸುವ ಹೊಸ ವೇದಿಕೆ ಪ್ರಾರಂಭಿಸಿದ್ದೇವೆ. ಇದನ್ನು ಘೋಷಿಸಲು ನನಗೆ ಹೆಮ್ಮೆ ಇದೆ. ಹೊಸ ನವೀನ ಸೇವೆಗಳನ್ನು ನಿರ್ಮಿಸಲು ನಮ್ಮ ವ್ಯಾಪ್ತಿ ಮತ್ತು ಪಾವತಿಗಳನ್ನು ಸದುಪಯೋಗಪಡಿಸಿಕೊಳ್ಳಲು ಪೇಟಿಎಂ ಮಿನಿ ಆ್ಯಪ್ ಸ್ಟೋರ್ ನಮ್ಮ ಯುವ ಭಾರತೀಯ ಡೆವಲಪರ್‌ಗಳಿಗೆ ಅಧಿಕಾರ ನೀಡುತ್ತದೆ" ಎಂದು ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಹೇಳಿದರು .

ಪೇಟಿಎಂ ಬಳಕೆದಾರರಿಗೆ, ಇದು ಪ್ರತ್ಯೇಕ ಡೌನ್‌ಲೋಡ್‌ಗಳ ಅಗತ್ಯವಿಲ್ಲದ ಕಾರಣ ಇದು ತಡೆರಹಿತ ಅನುಭವವಾಗಿರುತ್ತದೆ ಮತ್ತು ಅವರು ತಮ್ಮ ಆದ್ಯತೆಯ ಪಾವತಿ ಆಯ್ಕೆಯನ್ನು ಬಳಸಬಹುದು ಎಂದು ಅವರು ಹೇಳಿದರು. ಮಿನಿ ಅಪ್ಲಿಕೇಶನ್‌ಗಳು ಕಸ್ಟಮ್-ಬಿಲ್ಟ್ ಮೊಬೈಲ್ ವೆಬ್‌ಸೈಟ್ ಆಗಿದ್ದು, ಅವುಗಳನ್ನು ಡೌನ್‌ಲೋಡ್ ಮಾಡದೆಯೇ ಬಳಕೆದಾರರಿಗೆ ಅಪ್ಲಿಕೇಶನ್‌ನಂತಹ ಅನುಭವವನ್ನು ನೀಡುತ್ತದೆ. ಸೀಮಿತ ಡೇಟಾ ಮತ್ತು ಫೋನ್ ಮೆಮೊರಿ ಹೊಂದಿರುವ ಬಳಕೆದಾರರಿಗೆ ಇದು ಸಹಕಾರಿಯಾಗಿರಲಿದೆ.

ಸೆಪ್ಟೆಂಬರ್ 18 ರಂದು, ಕ್ರೀಡಾ ಬೆಟ್ಟಿಂಗ್ ಚಟುವಟಿಕೆಗಳ ಕುರಿತ ತನ್ನ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಕೆಲವು ಗಂಟೆಗಳ ಕಾಲ ಪೇಟಿಎಂ ಅನ್ನು ನಿರ್ಬಂಧಿಸಿತ್ತು ಅಪ್ಲಿಕೇಶನ್‌ನಲ್ಲಿನ ಕ್ರೀಡೆಗೆ ಸಂಬಂಧಿಸಿದ  ಲಿಂಕ್ ಮಾಡಲಾದ 'ಕ್ಯಾಶ್‌ಬ್ಯಾಕ್' ವೈಶಿಷ್ಟ್ಯವನ್ನು ಫಿನ್‌ಟೆಕ್ ಅಪ್ಲಿಕೇಶನ್ ತೆಗೆದುಹಾಕಿದ ನಂತರ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಲ್ಲಿ ಮರುಸ್ಥಾಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com