ವಾಣಿಜ್ಯ
ವರನಟ ರಾಜ್ಕುಮಾರ್ ನೆನಪಲ್ಲಿ ಬಂಗಾರದ ನಾಣ್ಯ ಬಿಡುಗಡೆ ಮಾಡಿದ ಖಾಸಗಿ ಸಂಸ್ಥೆ
ಕನ್ನಡದ ವರನಟ ಡಾ. ರಾಜ್ಕುಮಾರ್ ಅವರ ಸ್ಮರಣಾರ್ಥ ನಾನಾ ಸಂಸ್ಥೆಗಳು, ಜನರು ನಾನಾ ಬಗೆಯಲ್ಲಿ ಗೌರವ ಸಲ್ಲಿಸುವುದು ನೋಡಿದ್ದೇವೆ. ಅದೇ ರೀತಿ ಇಲ್ಲಿ ಒಂದು ಖಾಸಗಿ ಸಂಸ್ಥೆ ವರನಟನ ನೆನಪಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಿಡುಗಡೆ ಮಾಡಿದೆ.

ಕಲೆಕ್ಟಿಬಲ್ ಮಿಂಟ್ ಹೆಸರಿನ ಸಂಸ್ಥೆ ನಟ ಡಾ. ರಾಜ್ಕುಮಾರ್ ಚಿತ್ರವಿರುವ ಚಿನ್ನದ ನಾಣ್ಯವನ್ನು ಹೊರತಂದಿದೆ, ರಾಜ್ ಕುಟುಂಬದ ಅನುಮತಿ ಪಡೆದು ಸಂಸ್ಥೆ ಅಣ್ಣಾವ್ರ ಚಿತ್ರವಿರುವ 22 ಕ್ಯಾರೆಟ್ ಚಿನ್ನದ ನಾಣ್ಯ ಮತ್ತು ಬೆಳ್ಳಿಯ ನಾಣ್ಯವನ್ನು ಬಿಡುಗಡೆ ಮಾಡಿದೆ.
ನಾಣ್ಯಗಳು 10-25 ಗ್ರಾಂ ತೂಕವಿದ್ದು ಕನ್ನಡ ಹಾಗೂ ಆಂಗ್ಲ ಬಾಷೆಗಳಲ್ಲಿ ಅಕ್ಷರ ಮುದ್ರಿತವಾಗಿದೆ.
ಈ ನಾಣ್ಯಗಳ ಚಿತ್ರಗಳೀಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ರಾಜ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.