ಎಜಿಆರ್ ಬಾಕಿ ಪಾವತಿ ವಿಳಂಬ: ಟೆಲಿಕಾಂ ಸಂಸ್ಥೆಗಳಿಗೆ 10 ವರ್ಷ ಕಾಲಾವಕಾಶ ಕೊಟ್ಟ ಸುಪ್ರೀಂ ಕೋರ್ಟ್

ದೂರಸಂಪರ್ಕ ಇಲಾಖೆಗೆ (ಡಿಒಟಿ)  ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯೂ (ಎಜಿಆರ್) ಸಂಬಂಧಿತ ಬಾಕಿ ಪಾವತಿಸಲು ವೊಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್ ಮತ್ತು ಟಾಟಾ ಟೆಲಿ ಸರ್ವಿಸಸ್‌ನಂತಹ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳೊಂದಿಗೆ 10 ವರ್ಷಗಳ ಕಾಲಾವಕಾಶ ನೀಡಿದೆ.
ಎಜಿಆರ್ ಬಾಕಿ ಪಾವತಿ ವಿಳಂಬ: ಟೆಲಿಕಾಂ ಸಂಸ್ಥೆಗಳಿಗೆ 10 ವರ್ಷ ಕಾಲಾವಕಾಶ ಕೊಟ್ಟ ಸುಪ್ರೀಂ ಕೋರ್ಟ್
Updated on

ನವದೆಹಲಿ:  ದೂರಸಂಪರ್ಕ ಇಲಾಖೆಗೆ (ಡಿಒಟಿ)  ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯೂ (ಎಜಿಆರ್) ಸಂಬಂಧಿತ ಬಾಕಿ ಪಾವತಿಸಲು ವೊಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್ ಮತ್ತು ಟಾಟಾ ಟೆಲಿ ಸರ್ವಿಸಸ್‌ನಂತಹ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳೊಂದಿಗೆ 10 ವರ್ಷಗಳ ಕಾಲಾವಕಾಶ ನೀಡಿದೆ.

ಮಾರ್ಚ್ 31, 2021 ರೊಳಗೆ ಟೆಲಿಕಾಂ ಕಂಪನಿಗಳು ಶೇ 10 ರಷ್ಟು ಎಜಿಆರ್ ಸಂಬಂಧಿತ ಬಾಕಿ ಹಣವನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು  ದೂರಸಂಪರ್ಕ ಇಲಾಖೆ ಇಟ್ಟಿದ್ದ ಬೇಡಿಕೆ ಪರಿಗಣಿಸಿ  ಈ ವಿಷಯದಲ್ಲಿ ಉನ್ನತ ನ್ಯಾಯಾಲಯ ನೀಡಿದ ತೀರ್ಪು ಅಂತಿಮವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಬಾಕಿ ಪಾವತಿಸಲು ನಾಲ್ಕು ವಾರಗಳಲ್ಲಿ ಜವಾಬ್ದಾರಿ ಅಥವಾ ವೈಯಕ್ತಿಕ ಖಾತರಿ ನೀಡುವಂತೆ ಸಂಬಂಧಪಟ್ಟ ಟೆಲಿಕಾಂ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)  ಅವರನ್ನು ನ್ಯಾಯಪೀಠ ಕೇಳಿದೆ. ಅಲ್ಲದೆ ಟೆಲಿಕಾಂ ಕಂಪನಿಗಳಿಗೆ ಕೋರ್ಟ್ ಎಚ್ಚರಿಕೆ ಸಹ ರವಾನಿಸಿದ್ದು ಜಿಆರ್ ಸಂಬಂಧಿತ ಬಾಕಿಗಳನ್ನು ಪಾವತಿಸಲು ವಿಫಲವಾದರೆ ದಂಡ, ಬಡ್ಡಿ ಮತ್ತು ನ್ಯಾಯಾಲಯದ  ಆದೇಶ ಉಲ್ಲಂಘನೆಯ ಅಪರಾಧಕ್ಕೆ ಗುರಿಯಾಗಬೇಕಾಗುವುದು ಎಂದಿದೆ.

ದಿವಾಳಿತನ ಪ್ರಕ್ರಿಯೆಯನ್ನು ಎದುರಿಸುತ್ತಿರುವ ಟೆಲಿಕಾಂ ಕಂಪನಿಗಳ ಸ್ಪೆಕ್ಟ್ರಮ್ ಮಾರಾಟದ ಸಮಸ್ಯೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿರ್ಧರಿಸುತ್ತದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ. ಎಜಿಆರ್ ಸಂಬಂಧಿತ ಬಾಕಿಗಳನ್ನು ಸುಮಾರು 1.6 ಲಕ್ಷ ಕೋಟಿ ರೂ.ಗಳಂತೆ ಪಾವತಿಸಲು ಟೈಮ್‌ಲೈನ್ ಸೇರಿದಂತೆ ವಿಷಯಗಳ ಕುರಿತು ನ್ಯಾಯಪೀಠ ತನ್ನ ತೀರ್ಪು ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com