ಟಿಕ್‌ಟಾಕ್ ನಿಷೇಧದ ಬಳಿಕ ಬೇಸರದಲ್ಲಿದ್ದವರಿಗೆ ಯೂಟ್ಯೂಬ್ ನಿಂದ 'ಶಾರ್ಟ್ಸ್' ಬಿಡುಗಡೆ

ದೇಶದಲ್ಲಿ ಚೀನಾ ಮೂಲದ ಟಿಕ್‌ಟಾಕ್ ವಿಡಿಯೋ ಆ್ಯಪ್ ನಿಷೇಧಗೊಂಡ ಬಳಿಕ ಬೇಸರದಲ್ಲಿದ್ದವರಿಗಾಗಿ ಗೂಗಲ್ ಸಮೂಹದ ಯೂಟ್ಯೂಬ್ 'ಶಾರ್ಟ್' ಎಂಬ ಕಿರು ಅವಧಿಯ ವಿಡಿಯೋ ರಚನೆ ಪ್ಲಾಟ್‌ಫಾರ್ಮ್ ಗೆ ಚಾಲನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಚೀನಾ ಮೂಲದ ಟಿಕ್‌ಟಾಕ್ ವಿಡಿಯೋ ಆ್ಯಪ್ ನಿಷೇಧಗೊಂಡ ಬಳಿಕ ಬೇಸರದಲ್ಲಿದ್ದವರಿಗಾಗಿ ಗೂಗಲ್ ಸಮೂಹದ ಯೂಟ್ಯೂಬ್ 'ಶಾರ್ಟ್' ಎಂಬ ಕಿರು ಅವಧಿಯ ವಿಡಿಯೋ ರಚನೆ ಪ್ಲಾಟ್‌ಫಾರ್ಮ್ ಗೆ ಚಾಲನೆ ನೀಡಿದೆ.

ದೇಶದಲ್ಲಿ ಮೊದಲಿಗೆ ಯೂಟ್ಯೂಬ್ ಈ ಅಪ್ಲಿಕೇಶನ್ ಒದಗಿಸುತ್ತಿದ್ದು, ಟಿಕ್‌ಟಾಕ್ ನಿಷೇಧದ ಬಳಿಕ ವಿವಿಧೆಡೆ ಹಂಚಿಹೋಗಿದ್ದ ಬಳಕೆದಾರನ್ನು ಸೆಳೆಯಲು ಯತ್ನಿಸುತ್ತಿದೆ.

ಆರಂಭಿಕ ಹಂತದಲ್ಲಿರುವ ಯೂಟ್ಯೂಬ್ ಶಾರ್ಟ್ಸ್‌ ಅನ್ನು ಮೊದಲಿಗೆ ಆಯ್ದ ಬಳಕೆದಾರರಿಗೆ ನೀಡುತ್ತಿದ್ದು, ಅವರಲ್ಲಿ ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಉಳಿದ ಬಳಕೆದಾರರಿಗೆ ಲಭ್ಯವಾಗಲಿದೆ.

15 ಸೆಕೆಂಡ್‌ಗಳ ವಿಡಿಯೋ ರಚಿಸುವ ಯೂಟ್ಯೂಬ್ ಅಪ್ಲಿಕೇಶನ್ ಇದಾಗಿದ್ದು, ಟಿಕ್‌ಟಾಕ್ ಮಾದರಿಯಲ್ಲಿಯೇ ಮನರಂಜನೆ, ಶೈಕ್ಷಣಿಕ ವಿಡಿಯೋ ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com