ಮಧ್ಯಮ ವರ್ಗದವರ ಕೈಯಲ್ಲೀಗ ಖರ್ಚಿಗೆ ಸಾಕಷ್ಟು ಕಾಸಿದೆ: ನಿರ್ಮಲಾ ಸೀತಾರಾಮನ್

"ಹಣಕಾಸು ಮಸೂದೆಯಲ್ಲಿ ಹೊಸ ಪ್ರಸ್ತಾವಿತ ಆದಾಯ ತೆರಿಗೆ ನಿಯಮಗಳ  ಜಾರಿ ನಂತರ ಮಧ್ಯಮ ವರ್ಗದವರು ಖರ್ಚು ಮಾಡಲು ಹೆಚ್ಚಿನ ಹಣವನ್ನು ಹೊಂದಿದ್ದಾರೆ." ಎಂದು ಸೀತಾರಾಮನ್ ಹೇಳಿದರು,

Published: 07th February 2020 07:25 PM  |   Last Updated: 07th February 2020 07:25 PM   |  A+A-


ನಿರ್ಮಲಾ ಸೀತಾರಾಮನ್

Posted By : Raghavendra Adiga
Source : The New Indian Express

"ಹಣಕಾಸು ಮಸೂದೆಯಲ್ಲಿ ಹೊಸ ಪ್ರಸ್ತಾವಿತ ಆದಾಯ ತೆರಿಗೆ ನಿಯಮಗಳ  ಜಾರಿ ನಂತರ ಮಧ್ಯಮ ವರ್ಗದವರು ಖರ್ಚು ಮಾಡಲು ಹೆಚ್ಚಿನ ಹಣವನ್ನು ಹೊಂದಿದ್ದಾರೆ." ಎಂದು ಸೀತಾರಾಮನ್ ಹೇಳಿದರು,

ಫೆಬ್ರವರಿ 1ರಂದು ಮಂಡನೆಯಾದ ಬಜೆಟ್  ಪ್ರಸ್ತಾಪಗಳ ಕುರಿತು ಚರ್ಚಿಸಲು ಸಂವಾದಾತ್ಮಕ ಸಭೆ ನಡೆಸಿದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮುಂಬೈನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.

ಮಧ್ಯಮ ವರ್ಗದ ಹೆಚ್ಚಿನ ಜನಸಮುದಾಯ ಲಾಭಾಂಶದ ಮೇಲೆ ಕಡಿಮೆ ದರದಲ್ಲಿ ತೆರಿಗೆ ಪಾವತಿಸುತ್ತದೆ.. 

ಸೀತಾರಾಮನ್ ವಿವಿಧ ವರ್ಗದ ಪಾಲುದಾರರೊಂದಿಗೆ ಇಂತಹ ಮೂರು ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದ್ದು ಅವುಗಳಲ್ಲಿ ಇಂದು ಮೊದಲನೆಯದು. ಕೈಗಾರಿಕೆ, ಅರ್ಥಶಾಸ್ತ್ರಜ್ಞರು, ವ್ಯಾಪಾರ ಸಂಸ್ಥೆಗಳು ಮತ್ತು ರೈತರೊಂದಿಗೆ ಸಂವಾದ ಇರಲಿದ್ದು ಮುಂದಿನ ಎರಡು ಸಂವಾದಗಳು ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

"ನಾವು ಕಾನೂನುಗಳನ್ನು ನ್ಯಾಯಸಮ್ಮತವಾಗಿ ಜಾರಿಗೊಳಿಸಲು ಬಯಸುತ್ತೇವೆ. ನಾವು ಕಂಪನಿಗಳ ಕಾಯ್ದೆಯಿಂದ ಪ್ರಾರಂಭಿಸಿ ಈಗ ಆದಾಯ ತೆರಿಗೆ ಕಾಯ್ದೆಯತ್ತ ಬಂದಿದ್ದೇವೆ" ಎಂದ ಸಚಿವೆ ಸಿವಿಲ್ ಅಪರಾಧಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸದಂತೆ ಸರ್ಕಾರ ತೀರ್ಮಾನಿಸಲು ಯೋಜಿಸಿದೆ ಎಂದರು.ತೆರಿಗೆ ಆಡಳಿತವನ್ನು ಸರಳಗೊಳಿಸುವುದು ನರೇಂದ್ರ ಮೋದಿಯವರ ಸರ್ಕಾರದ ಉದ್ದೇಶ ಎಂದು ಹಣಕಾಸು ಸಚಿವರು ಹೇಳಿದರು.

ಕಳೆದ ವಾರ ಕೇಂದ್ರ ಬಜೆಟ್‌ನಲ್ಲಿ ಮಾಡಿದ ಎಲ್‌ಐಸಿ ಷೇರು ಮಾರಾಟ ಪ್ರಕಟಣೆಗೆ ಸಂಬಂಧಿಸಿದಂತೆ ಮಾತನಾಡಿದ ಸೀತಾರಾಮನ್, "ಉದ್ದೇಶಿತ ಐಪಿಒ ಚಿಲ್ಲರೆ ಹೂಡಿಕೆದಾರರನ್ನು ಸೆಳೆಯುತ್ತದೆ.ಹಾಗೆಯೇ ಸಮಸ್ಯೆಗಳತ್ತ ಹೆಚ್ಚು ಪಾರದರ್ಶಕವಾಗಿರಲಿದೆದೆ" ಎಂದು ಹೇಳಿದರು. ಈ ಐಪಿಒ ತೆರೆದರೆ ಅದು ಭಾರತದ ಅತಿದೊಡ್ಡ ಐಪಿಒ ಆಗಬಹುದು ಎನ್ನುವ ಊಹಾಪೋಹಗಳು ಮಾರುಕಟ್ಟೆ ವಲಯದಲ್ಲಿ ಕೇಳಿಬಂದಿದೆ.
 

Stay up to date on all the latest ವಾಣಿಜ್ಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp