'ದೇಶದ ಆರ್ಥಿಕತೆ ಚಿಗುರುತ್ತಿದೆ, ಕುಸಿಯುತ್ತಿಲ್ಲ': ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 

ದೇಶದ ಆರ್ಥಿಕತೆ ಕುಸಿಯುತ್ತಿಲ್ಲ, ಬದಲಾಗಿ 5 ಟ್ರಿಲಿಯನ್ ಡಾಲರ್ ನತ್ತ ಸಾಗುತ್ತಿದ್ದು ಆರ್ಥಿಕವಾಗಿ ಚಿಗುರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್ಥಿಕವಾಗಿ ಚಿಗುರುತ್ತಿದೆ ಎಂಬುದಕ್ಕೆ ಸಚಿವೆ ಗ್ರೀನ್ ಶೂಟ್(Green shoot) ಎಂಬ ಪದ ಬಳಸಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್
ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ದೇಶದ ಆರ್ಥಿಕತೆ ಕುಸಿಯುತ್ತಿಲ್ಲ, ಬದಲಾಗಿ 5 ಟ್ರಿಲಿಯನ್ ಡಾಲರ್ ನತ್ತ ಸಾಗುತ್ತಿದ್ದು ಆರ್ಥಿಕವಾಗಿ ಚಿಗುರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್ಥಿಕವಾಗಿ ಚಿಗುರುತ್ತಿದೆ ಎಂಬುದಕ್ಕೆ ಸಚಿವೆ ಗ್ರೀನ್ ಶೂಟ್(Green shoot) ಎಂಬ ಪದ ಬಳಸಿದ್ದಾರೆ.


ಮುಂದಿನ ನಾಲ್ಕು ವರ್ಷಗಳಲ್ಲಿ ಅಂದರೆ 2024ಕ್ಕೆ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಬೇಕೆಂದು ಕೇಂದ್ರ ಎನ್ ಡಿಎ ಸರ್ಕಾರ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇನ್ನು ನಾಲ್ಕೈದು ವರ್ಷಗಳಲ್ಲಿ ಖಂಡಿತವಾಗಿಯೂ ನಮ್ಮ ಗುರಿ ತಲುಪುತ್ತೇವೆ ಎಂದು ಎನ್ ಡಿಎ ನಾಯಕರು ಹೇಳುತ್ತಲೇ ಬಂದಿದ್ದಾರೆ.


ಆದರೆ ಇನ್ನೊಂದೆಡೆ ಇದನ್ನು ಟೀಕಿಸುವ ವಿಪಕ್ಷ ನಾಯಕರು, ದೇಶದ ಆರ್ಥಿಕ ಸ್ಥಿತಿ ಕುಸಿದಿದೆ, ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ, ಉತ್ಪಾದನೆ ಕುಂಠಿತವಾಗಿದೆ, ಇಷ್ಟೆಲ್ಲ ಸಮಸ್ಯೆಗಳ ನಡುವೆ 5 ಟ್ರಿಲಿಯನ್ ಡಾಲರ್ ಮುಟ್ಟುವುದು ಹೇಗೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆಲ್ಲಾ ಇಂದು ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 


ದೇಶದಲ್ಲಿ ಆರ್ಥಿಕ ಪುನಶ್ಚೇತನ ಹೇಗೆ ಕಂಡಿದೆ ಎಂಬುದನ್ನು ಹೇಳಿದ ಸಚಿವೆ, ವಿದೇಶಿ ನೇರ ಹೂಡಿಕೆ ಹೆಚ್ಚಿಸುವುದು, ಕಾರ್ಖಾನೆಗಳ ಉತ್ಪಾದನೆಯಲ್ಲಿ ಏರಿಕೆ, ಕಳೆದ ಮೂರು ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಜಿಎಸ್ಟಿ ಸಂಗ್ರಹವಾಗಿರುವುದು ನೋಡಿದರೆ ಆರ್ಥಿಕವಾಗಿ ಪ್ರಗತಿ ಹೊಂದುತ್ತಿದ್ದೇವೆ ಎಂದು ಸೂಚಿಸುತ್ತದೆಯಲ್ಲವೇ ಎಂದರು.


ದೇಶದ ಆರ್ಥಿಕ ಸ್ಥಿತಿ ಸಮಸ್ಯೆಯಲ್ಲಿಲ್ಲ, ಹಂತಹಂತವಾಗಿ ಸುಧಾರಿಸುತ್ತಿದೆ ಎಂಬುದಕ್ಕೆ ಸಚಿವೆ ನೀಡಿದ ಪ್ರಮುಖ ಅಂಶಗಳು ಹೀಗಿವೆ: 
1.ವಿದೇಶೀ ವಿನಿಮಯ ಮೀಸಲು ಸಾರ್ವಕಾಲಿಕವಾಗಿ ಹೆಚ್ಚಳವಾಗಿರುವುದು ಮತ್ತು ಷೇರು ಮಾರುಕಟ್ಟೆ ವಹಿವಾಟು ಸೂಚ್ಯಂಕ ಏರುಗತಿಯಲ್ಲಿರುವುದು.
2. ಖಾಸಗಿ ಹೂಡಿಕೆ, ರಫ್ತು, ಖಾಸಗಿ ಮತ್ತು ಸಾರ್ವಜನಿಕ ಬಳಕೆಯಲ್ಲಿ ಹೆಚ್ಚಳವಾಗುವಂತೆ ನೋಡಿಕೊಳ್ಳುವತ್ತ ಸರ್ಕಾರ ಗಮನ ಕೇಂದ್ರೀಕರಿಸಿದೆ.
3. ಸಾರ್ವಜನಿಕ ಹೂಡಿಕೆ ವಿಚಾರ ಬಂದಾಗ ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಮೂಲಸೌಕರ್ಯ ಯೋಜನೆ ಘೋಷಣೆ ಮಾಡಿದೆ. ಈ ಮೂಲಕ ದೇಶಾದ್ಯಂತ ಮುಂದಿನ ನಾಲ್ಕು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 1.03 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.
4. ಜನರಲ್ಲಿ ಬಳಕೆ ಹೆಚ್ಚಿಸಲು 2019-20ರಲ್ಲಿ ರಬಿ ಮತ್ತು ಖಾರ್ಫಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದು.

ಸ್ಪರ್ಧಾತ್ಮಕ ನುರಿತ ವೈದ್ಯರುಗಳು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಯುಪಿಎ ಸರ್ಕಾರ ಅವಧಿಯಲ್ಲಿ ಹಣಕಾಸು ಕೊರತೆ ಹೆಚ್ಚಾಗಿತ್ತು ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮಾತಿಗೆ ನಿರ್ಮಲಾ ಸೀತಾರಾಮನ್ ಟಾಂಗ್ ಕೊಟ್ಟರು.ನಿನ್ನೆ ಹೇಳಿಕೆ ನೀಡಿದ್ದ ಚಿದಂಬರಂ ಅಸಮರ್ಥ ವೈದ್ಯರು ನಿಭಾಯಿಸುತ್ತಿರುವುದರಿಂದ ದೇಶದ ಆರ್ಥಿಕತೆ ಕುಸಿತದಲ್ಲಿದೆ ಎಂದು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com