ಆರ್ಥಿಕ ಬಿಕ್ಕಟ್ಟು: ಯೆಸ್​ ಬ್ಯಾಂಕ್ ಆಡಳಿತ ಮಂಡಳಿ ಅಮಾನತು, ವಿತ್ ಡ್ರಾ ಮಿತಿ ವಿಧಿಸಿದ ಆರ್​ಬಿಐ

ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್​ ಬ್ಯಾಂಕ್​ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದ್ದು, ವಿತ್ ಡ್ರಾ ಮಿತಿಯನ್ನು 50 ಸಾವಿರ ರೂ.ಗೆ ನಿಗದಿ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರು ಆಘಾತ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್​ ಬ್ಯಾಂಕ್​ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದ್ದು, ವಿತ್ ಡ್ರಾ ಮಿತಿಯನ್ನು 50 ಸಾವಿರ ರೂ.ಗೆ ನಿಗದಿ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರು ಆಘಾತ ನೀಡಿದೆ.

ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ ತಿಂಗಳಿಗೆ ಗರಿಷ್ಠ 50 ಸಾವಿರ ರೂ. ವರೆಗೆ ಮಾತ್ರ ಹಣ ಡ್ರಾ ಮಾಡಲು ಆರ್ ಬಿಐ ಅವಕಾಶ ನೀಡಿದೆ.

ಯಶ್ ಬ್ಯಾಂಕ್ ಗೆ ಹೊಸ ಆಡಳಿತಗಾರನನ್ನು ನೇಮಕ ಮಾಡಿರುವ ಆರ್ ಬಿಐ, ಯೆಸ್ ಬ್ಯಾಂಕ್‌ನ ಎಲ್ಲಾ ಕಾರ್ಯ ಚಟುವಟಿಕೆಗಳ ಪ್ರಾರಂಭ ಅಥವಾ ಮುಂದುವರಿಕೆಗೆ ತಡೆಯಾಜ್ಞೆ ನೀಡಿದೆ. 

ಈ ಸಂಬಂಧ ಇಂದು ಸಂಜೆ ಪ್ರಕಟಣೆ ಬಿಡುಗಡೆ ಮಾಡಿರುವ ಆರ್​ಬಿಐ, ಯೆಸ್​ ಬ್ಯಾಂಕ್​ ಮಂಡಳಿಯನ್ನು ತತ್​ಕ್ಷಣದಿಂದ ಜಾರಿಗೆ ಬರುವಂತೆ ವಶಕ್ಕೆ ಪಡೆಯಲಾಗಿದೆ ಮತ್ತು ಎಸ್​ಬಿಐನ ಮಾಜಿ ಸಿಇಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.

ಪಿಎಂಸಿ ಸಹಕಾರ ಬ್ಯಾಂಕ್​ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಆರು ತಿಂಗಳ ಬಳಿಕ ಅದೇ ಮಾದರಿಯ ಮತ್ತೊಂದು ಬ್ಯಾಂಕ್​ ಹಗರಣ ಪತ್ತೆಯಾಗಿದೆ. ಅತಿ ಕೆಟ್ಟ ಸಾಲದಿಂದಾಗಿ ಯೆಸ್​ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ. ಬ್ಯಾಂಕ್​ನಲ್ಲಿ ಹಣ ಹೂಡಿದ ಗ್ರಾಹಕರು ಸಹ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com