ಎಸ್ ಬಿಐನಿಂದ 2,400 ಕೋಟಿ ರೂ.ಗೆ ಯೆಸ್ ಬ್ಯಾಂಕ್ ನ ಶೇ. 49ರಷ್ಟು ಷೇರು ಖರೀದಿ ಸಾಧ್ಯತೆ: ಆರ್ ಬಿಐ 

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ನ ಪುನಾರಚನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಶುಕ್ರವಾರ ಪ್ರಸ್ತಾವಿತ ಯೋಜನೆಯೊಂದನ್ನು ಪ್ರಕಟಿಸಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ), ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಬಗ್ಗೆ ಉತ್ಸಾಹ ತೋರಿದೆ ಎಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ನ ಪುನಾರಚನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಶುಕ್ರವಾರ ಪ್ರಸ್ತಾವಿತ ಯೋಜನೆಯೊಂದನ್ನು ಪ್ರಕಟಿಸಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ), ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಬಗ್ಗೆ ಉತ್ಸಾಹ ತೋರಿದೆ ಎಂದು ತಿಳಿಸಿದೆ.

ಎಸ್ ಬಿಐ ಯೆಸ್ ಬ್ಯಾಂಕ್ ನ ಶೇ. 49ರಷ್ಟು ಷೇರು ಖರೀದಿಸುವ ಸಾಧ್ಯತೆ ಇದೆ ಎಂದು ಆರ್ ಬಿಐ ತಿಳಿಸಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ, ಯೆಸ್ ಬ್ಯಾಂಕ್ ನಲ್ಲಿ 49ರಷ್ಟು ಪಾಲಿಗಾಗಿ ಎಸ್ ಬಿಐ 2450 ಕೋಟಿ ರೂಪಾಯಿ ತನಕ ಮಾಡಬಹುದು ಎಂದು ಆರ್ ಬಿಐ ಹೇಳಿದೆ. ಅಲ್ಲದೆ ಸಾರ್ವಜನಿಕರಿಂದ, ಬ್ಯಾಂಕ್ ಷೇರುದಾರರಿಂದ, ಠೇವಣಿದಾರರಿಂದ ಮತ್ತು ಸಾಲಗಾರರಿಂದ ಪ್ರಸ್ತಾವಿತ ಯೋಜನೆ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಮಾರ್ಚ್ 9ರ ಸೋಮವಾರದ ತನಕ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ. ಆ ನಂತರ ನಿರ್ಧಾರ ಮಾಡಬಹುದು. ಇದಕ್ಕೂ ಮುನ್ನ ಶುಕ್ರವಾರದಂದು ಮಾತನಾಡಿದ್ದ ರಿಸರ್ವ್ ಬ್ಯಾಂಕ್ ಗೌರ್ನರ್ ಶಕ್ತಿಕಾಂತ್ ದಾಸ್, ಆರ್ಥಿಕ ವಲಯದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದ್ದರು.

ನಿನ್ನೆಯಷ್ಟೆ ಯೆಸ್​ ಬ್ಯಾಂಕ್​ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದ್ದ ಆರ್ ಬಿಐ, ವಿತ್ ಡ್ರಾ ಮಿತಿಯನ್ನು 50 ಸಾವಿರ ರೂ.ಗೆ ನಿಗದಿ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರು ಆಘಾತ ನೀಡಿತ್ತು.

ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ ತಿಂಗಳಿಗೆ ಗರಿಷ್ಠ 50 ಸಾವಿರ ರೂ. ವರೆಗೆ ಮಾತ್ರ ಹಣ ಡ್ರಾ ಮಾಡಲು ಆರ್ ಬಿಐ ಅವಕಾಶ ನೀಡಿದೆ.

ಯಶ್ ಬ್ಯಾಂಕ್ ಗೆ ಹೊಸ ಆಡಳಿತಗಾರನನ್ನು ನೇಮಕ ಮಾಡಿರುವ ಆರ್ ಬಿಐ, ಯೆಸ್ ಬ್ಯಾಂಕ್‌ನ ಎಲ್ಲಾ ಕಾರ್ಯ ಚಟುವಟಿಕೆಗಳ ಪ್ರಾರಂಭ ಅಥವಾ ಮುಂದುವರಿಕೆಗೆ ತಡೆಯಾಜ್ಞೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com