ಹಾಂಕ್ ಕಾಂಗ್ ಅಗ್ನಿ ಅವಘಡದ ಬಳಿಕ ವಿವೋ ಸರಕುಗಳನ್ನು ಕೊಂಡೊಯ್ಯದಿರಲು ಸ್ಪೈಸ್ ಜೆಟ್, ಗೋಏರ್ ನಿರ್ಧಾರ
ವಾಣಿಜ್ಯ
ಹಾಂಕ್ ಕಾಂಗ್ ಅಗ್ನಿ ಅವಘಡದ ಬಳಿಕ ವಿವೋ ಸರಕುಗಳ ಸಾಗಣೆಗೆ ಸ್ಪೈಸ್ ಜೆಟ್, ಗೋಏರ್ ನಿರ್ಧಾರ
ವಿವೋ ಸಂಸ್ಥೆಯ ಸ್ಮಾರ್ಟ್ ಫೋನ್ ಗಳಿದ್ದ ಸರಕು ಹಾಂಕ್ ಕಾಂಗ್ ನ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಿವೋ ಸರಕುಗಳನ್ನು ಇನ್ನು ಮುಂದೆ ಕೊಂಡೊಯ್ಯದಿರಲು ಸ್ಪೈಸ್ ಜೆಟ್, ಗೋಏರ್ ನಿರ್ಧರಿಸಿದೆ.
ನವದೆಹಲಿ: ವಿವೋ ಸಂಸ್ಥೆಯ ಸ್ಮಾರ್ಟ್ ಫೋನ್ ಗಳಿದ್ದ ಸರಕು ಹಾಂಕ್ ಕಾಂಗ್ ನ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಿವೋ ಸರಕುಗಳನ್ನು ಇನ್ನು ಮುಂದೆ ಕೊಂಡೊಯ್ಯದಿರಲು ಸ್ಪೈಸ್ ಜೆಟ್, ಗೋಏರ್ ನಿರ್ಧರಿಸಿದೆ.
ಇದೇ ವೇಳೆ ವಿವೋ ಕಾರ್ಗೋ ಗಳನ್ನು ಪ್ರಯಾಣಿಕ ವಿಮಾನದಲ್ಲಿ ಸಾಗಣೆ ಮಾಡುವುದರ ವಿಷಯವಾಗಿ ಸಲಹೆ- ಸೂಚನೆಗಳನ್ನು ನೀಡಬೇಕೆ ಬೇಡವೇ ಎಂಬ ಬಗ್ಗೆ ಶೀಘ್ರವೇ ನಾಗರಿಕ ವಿಮಾನಯಾನದ ನಿರ್ದೇಶನಾಲಯ ನಿರ್ಧಾರ ಪ್ರಕಟಿಸಲಿದೆ ಎಂದು ಡಿಜಿಸಿಎಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ವಿವೋ ವಕ್ತಾರರು ಬೆಂಕಿ ಹೊತ್ತಿಕೊಂಡ ಘಟನೆ ಸಂಸ್ಥೆಯ ಗಮನಕ್ಕೆ ಬಂದಿದ್ದು, ಹಾಂಕ್ ಕಾಂಗ್ ನ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಘಟನೆಗೆ ಕಾರಣ ಏನೆಂಬುದನ್ನು ತಿಳಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಹಾಂಗ್ ಕಾಂಗ್ ಏರ್ಲೈನ್ಸ್ ನ ಸರಕು ಸಾಗಣೆ ವಿಭಾಗವೂ ವಿವೋ ಸರಕುಗಳನ್ನು ಹೊತ್ತೊಯ್ಯುವುದಿಲ್ಲ ಎಂದು ಹೇಳಿದೆ.


