ಸೆಲಾರಿಯೋ, ಸ್ವಿಫ್ಟ್ ಹೊರತುಪಡಿಸಿ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ: ವಿವರ ಹೀಗಿದೆ

ದೇಶದ ಕಾರು ತಯಾರಿಕಾ ದೈತ್ಯ ಮಾರುತಿ ಸುಜುಕಿ, ತನ್ನ ಕಾರುಗಳ ಪೈಕಿ ಬಹುತೇಕ ಆವೃತ್ತಿಯ ಬೆಲೆಯನ್ನು ಏರಿಕೆ ಮಾಡಿದೆ. 
ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ
ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ನವದೆಹಲಿ: ದೇಶದ ಕಾರು ತಯಾರಿಕಾ ದೈತ್ಯ ಮಾರುತಿ ಸುಜುಕಿ, ತನ್ನ ಕಾರುಗಳ ಪೈಕಿ ಬಹುತೇಕ ಆವೃತ್ತಿಯ ಬೆಲೆಯನ್ನು ಏರಿಕೆ ಮಾಡಿದೆ. 

ಏ.16 ರಂದು ಈ ಬಗ್ಗೆ ಅಧಿಕೃತ ಘೋಷಣೆ ಪ್ರಕಟಿಸಿರುವ ಮಾರುತಿ ಸುಜುಕಿ ಸಂಸ್ಥೆ, ಪ್ರತಿ ಕಾರುಗಳ ಮೇಲೆ 22,500 ರೂಪಾಯಿಗಳನ್ನು ಏರಿಕೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. 

ಇನ್ ಪುಟ್ ಖರ್ಚುಗಳು ಹೆಚ್ಚಿರುವುದರಿಂದ ಅದನ್ನು ಸರಿದೂಗಿಸುವುದಕ್ಕಾಗಿ ಬೆಲೆ ಏರಿಕೆ ಮಾಡಲಾಗಿದೆ. ಆದರೆ ಸೆಲಾರಿಯೋ, ಸ್ವಿಫ್ಟ್ ಕಾರುಗಳಿಗೆ ಮಾತ್ರ ಬೆಲೆ ಏರಿಕೆ ಅನ್ವಯವಾಗುವುದಿಲ್ಲ ಎಂದು ಮಾರುತಿ ಸುಜುಕಿ ತಿಳಿಸಿದೆ. ದೆಹಲಿ ಶೋ ರೂಮ್ ಬೆಲೆ ಶೇ.1.6 ರಷ್ಟು ಏರಿಕೆಯಾಗಿದೆ. ಏ.17 ರಿಂದ ಬೆಲೆ ಏರಿಕೆ ಜಾರಿಗೆ ಬರಲಿದೆ ಎಂದು ಸಂಸ್ಥೆ ಹೇಳಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಕೋವಿಡ್-19 ಕಾರಣದಿಂದಾಗಿ ವಾಹನ ಮಾರಾಟ ತೀವ್ರ ಕುಸಿದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com