ಪ್ರಸಕ್ತ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.11; ಕೋವಿಡ್ ಏರಿಕೆಯಿಂದ ಆರ್ಥಿಕ ಸುಧಾರಣೆಗೆ ಅಪಾಯ: ಎಡಿಬಿ

ಬಲಿಷ್ಠ ಲಸಿಕೆ ಅಭಿಯಾನದ ನಡುವೆ ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.11 ರ ಬೆಳವಣಿಗೆ ಕಾಣಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಮುನ್ನೋಟದಲ್ಲಿ ಪ್ರಕಟಿಸಿದೆ. 
ಪ್ರಸಕ್ತ ಸಾಲಿನಲ್ಲಿ  ಶೇ.11ರ ಬೆಳವಣಿಗೆ ಕಾಣಲಿದೆ ದೇಶದ ಜಿಡಿಪಿ: ಎಡಿಬಿ
ಪ್ರಸಕ್ತ ಸಾಲಿನಲ್ಲಿ  ಶೇ.11ರ ಬೆಳವಣಿಗೆ ಕಾಣಲಿದೆ ದೇಶದ ಜಿಡಿಪಿ: ಎಡಿಬಿ

ನವದೆಹಲಿ: ಬಲಿಷ್ಠ ಲಸಿಕೆ ಅಭಿಯಾನದ ನಡುವೆ ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.11 ರ ಬೆಳವಣಿಗೆ ಕಾಣಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಮುನ್ನೋಟದಲ್ಲಿ ಪ್ರಕಟಿಸಿದೆ. 

ಇದೇ ವೇಳೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆಯೂ ಎಚ್ಚರಿಸಿರುವ ಎಡಿಬಿ, ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾದಲ್ಲಿ ಆರ್ಥಿಕ ಚೇತರಿಕೆಗೆ ಅದು ಅಪಾಯಕಾರಿಯಾಗಿರಲಿದೆ ಎಂದೂ ಹೇಳಿದೆ. 

ಏ.28 ರಂದು ಏಷ್ಯನ್ ಡೆವಲಪ್ಮೆಂಟ್  ಬ್ಯಾಂಕ್ ನ ಏಷ್ಯನ್ ಡೆವಲಪ್ಮೆಂಟ್ ಔಟ್ ಲುಕ್ (ಎಡಿಒ)-2021 ಬಿಡುಗಡೆಯಾಗಿದೆ. 

2022 ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರದ ಮುನ್ನೋಟವನ್ನೂ ಪ್ರಕಟಿಸಲಾಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.7 ರ ಬೆಳವಣಿಗೆ ಕಾಣಲಿದೆ, ದಕ್ಷಿಣ ಏಷ್ಯಾದ ಜಿಡಿಪಿ ಶೇ.9.5 ಕ್ಕೆ ಮತ್ತೆ ಪುಟಿಯಲಿದೆ. 2020 ರಲ್ಲಿ ಇದು  ಶೇ.6 ರಷ್ಟು ಇತ್ತು ಎಂದು ಹೇಳಿದೆ. 

ಕೋವಿಡ್-19 ಲಸಿಕೆಗಳ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಆರೋಗ್ಯ ಚೇತರಿಕೆಯ ಪರಿಣಾಮವಾಗಿ ಅಭಿವೃದ್ಧಿಶೀಲ ಏಷ್ಯಾದಲ್ಲಿ ಆರ್ಥಿಕ ಬೆಳವಣಿಗೆ ಶೇ.7.3 ರಷ್ಟಕ್ಕೆ ಪುಟಿದೇಳಲಿದೆ ಎಂದೂ ಎಡಿಬಿ ಹೇಳಿದೆ. ಇನ್ನು ಚೀನಾ ಬಗ್ಗೆಯೂ ವರದಿಯಲ್ಲಿ ಬೆಳಕು ಚೆಲ್ಲಲಾಗಿದ್ದು, ಬಲಿಷ್ಠ  ರಫ್ತು ಹಾಗೂ ಮನೆಗಳಲ್ಲಿನ ಖರ್ಚು ಪ್ರಮಾಣದಲ್ಲಿ ಗಣನೀಯವಾದ ಚೇತರಿಕೆಯಿಂದ ಚೀನಾದ ಆರ್ಥಿಕತೆ ಈ ವರ್ಷ ಸುಧಾರಣೆಯಾಗಲಿದೆ. 

2021 ರಲ್ಲಿ ಚೀನಾದ ಜಿಡಿಪಿ ಶೇ.8.1ರ ಬೆಳವಣಿಗೆ ಕಾಣಲಿದ್ದು, 2022 ರಲ್ಲಿ ಶೇ. 5.5 ರಷ್ಟು ಬೆಳವಣಿಗೆ ದಾಖಲಿಸಲಿದೆ, 2021ರಲ್ಲಿ  ಪೂರ್ವ ಏಷ್ಯಾದ ಜಿಡಿಪಿ ಶೇ.7.4 ರ ಬೆಳವಣಿಗೆ ದಾಖಲಿಸಲಿದ್ದು, 2022 ರ ವೇಳೆಗೆ ಶೇ.5.1 ರಷ್ಟಿರಲಿದೆ ಎಂದು ವರದಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com