ಫ್ಲಿಪ್ ಕಾರ್ಟ್ ಮೇಲೆ 10,600 ಕೋಟಿ ರೂಪಾಯಿ ಎಫ್ಇಎಂಎ ನೊಟೀಸ್ ಜಾರಿಗೊಳಿಸಿದ ಇಡಿ 

ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಗೆ ಜಾರಿ ನಿರ್ದೇಶನಾಲಯ 10,600 ಕೋಟಿ ರೂಪಾಯಿ ಮೊತ್ತಕ್ಕೆ ಸಂಬಂಧಿಸಿದ ವಹಿವಾಟಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಿದೆ. 
ಫ್ಲಿಪ್ ಕಾರ್ಟ್
ಫ್ಲಿಪ್ ಕಾರ್ಟ್
Updated on

ನವದೆಹಲಿ: ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಗೆ ಜಾರಿ ನಿರ್ದೇಶನಾಲಯ 10,600 ಕೋಟಿ ರೂಪಾಯಿ ಮೊತ್ತಕ್ಕೆ ಸಂಬಂಧಿಸಿದ ವಹಿವಾಟಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಿದೆ. 

ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಎಫ್ಇಎಂಎ) ಅಡಿ ನೊಟೀಸ್ ಜಾರಿಗೊಳಿಸಲಾಗಿದ್ದು, ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರೊಮೋಟರ್ಸ್ ಗಳಿಗೂ ಸಹ ನೊಟೀಸ್ ಜಾರಿಗೊಳಿಸಲಾಗಿದೆ. 

ಕಳೆದ ತಿಂಗಳಲ್ಲಿ ಫ್ಲಿಪ್ ಕಾರ್ಟ್ ಹಾಗೂ ಅದರ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಸೇರಿದಂತೆ 10 ಮಂದಿಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. 

ಎಫ್ ಡಿಐ ನ ನಿಯಮ ಹಾಗೂ ಮಲ್ಟಿ ಬ್ರಾಂಡ್ ರೀಟೆಲ್ ಗಳನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲಂಘಿಸಿದ್ದರ ಸಂಬಂಧ ತನಿಖೆ ಪೂರ್ಣಗೊಳಿಸಿದ ನಂತರ ನೊಟೀಸ್ ಜಾರಿಗೊಳಿಸಲಾಗಿದೆ. 

ವಾಲ್ ಮಾರ್ಟ್ ಒಡೆತನದ ಸಂಸ್ಥೆ ಹಾಗೂ ಅದರ ಅಧಿಕಾರಿಗಳು ಈಗ ಸಂಸ್ಥೆಯ ವಿಶೇಷ ನಿರ್ದೇಶಕ ಶ್ರೇಣಿಯ ಅಧಿಕಾರಿಯಿಂದ ವಿಚಾರಣೆ ಎದುರಿಸಬೇಕಾಗುತ್ತದೆ. ಆರೋಪ ಸಾಬೀತಾದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಪಡೆಯಲಾಗಿದ್ದ ಹಣದ ಮೂರು ಪಟ್ಟು ಹಣವನ್ನು ದಂಡ ಪಾವತಿ ಮಾಡಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com