ಗ್ರಾಹಕರ ಗಮನಕ್ಕೆ ಆಗಸ್ಟ್ 6-7 ರಂದು ಈ ಸಮಯದಲ್ಲಿ ಎಸ್ ಬಿಐ ಯೋನೋ ಸೇವೆಗಳು ಅಲಭ್ಯ!

ಎಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. 

ಎಸ್ ಬಿಐ ನ ಡಿಜಿಟಲ್ ಸೇವೆಗಳ ಮೆಂಟೆನೆನ್ಸ್ ಆಕ್ಟಿವಿಟಿ (ನಿರ್ವಹಣೆಯ ಕೆಲಸಗಳನ್ನು) ಬ್ಯಾಂಕ್ ಕೈಗೆತ್ತಿಕೊಂಡಿದ್ದು ಗ್ರಾಹಕರಿಗೆ ಎಸ್ ಬಿಐ ನ ಡಿಜಿಟಲ್ ಬ್ಯಾಂಕಿಂಗ್, ಇಂಟರ್ ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್, ಯೋನೋ ಬ್ಯುಸಿನೆಸ್ ಸೇವೆಗಳು ಆ.06-07 ರಂದು ಅಲಭ್ಯವಾಗಲಿದೆ. 

ಈ ಬಗ್ಗೆ ಎಸ್ ಬಿಐ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ತಾತ್ಕಾಲಿಕವಾಗಿ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದೆ. ಆಗಸ್ಟ್ 6 ರಂದು 22.45 ಗಂಟೆಗಳಿಗೆ ಮೇಂಟೆನೆನ್ಸ್ ಆಕ್ಟಿವಿಟಿಯನ್ನು ಪ್ರಾರಂಭಿಸಲಿದ್ದು, ಆಗಸ್ಟ್ 7 ರಂದು 1.15 (150 ನಿಮಿಷಗಳು) ಸೇವೆ ಸ್ಥಗಿತಗೊಳ್ಳಲಿವೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. 

ಜು.16-17 ರಂದೂ ಎಸ್ ಬಿಐ ಬ್ಯಾಂಕ್ ನ ಡಿಜಿಟಲ್ ಸೇವೆಗಳನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಎಸ್ ಬಿಐ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 6,504 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಶೇ.55 ರಷ್ಟು ಏರಿಕೆ ಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com