2022 ರಲ್ಲಿ ಭಾರತದ ಜಿಡಿಪಿ ಮುನ್ನೋಟವನ್ನು ಶೇ.8.4 ಕ್ಕೆ ಇಳಿಸಿದ ಫಿಚ್! 

2022 ನೇ ಸಾಲಿನಲ್ಲಿ ಭಾರತದ ಜಿಡಿಪಿಯ ಮುನ್ನೋಟವನ್ನು ಫಿಚ್ ರೇಟಿಂಗ್ಸ್ ಸಂಸ್ಥೆ ಶೇ.8.4 ಕ್ಕೆ ಇಳಿಕೆ ಮಾಡಿದೆ. 
ಫಿಚ್ ರೇಟಿಂಗ್ಸ್
ಫಿಚ್ ರೇಟಿಂಗ್ಸ್

ನವದೆಹಲಿ: 2022 ನೇ ಸಾಲಿನಲ್ಲಿ ಭಾರತದ ಜಿಡಿಪಿಯ ಮುನ್ನೋಟವನ್ನು ಫಿಚ್ ರೇಟಿಂಗ್ಸ್ ಸಂಸ್ಥೆ ಶೇ.8.4 ಕ್ಕೆ ಇಳಿಕೆ ಮಾಡಿದೆ. 

ಆದರೆ ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಪ್ರಕ್ಷೇಪಣವನ್ನು ಶೇ.10.3ಕ್ಕೆ ಅಂದಾಜಿಸಿದೆ. 

ಅಕ್ಟೋಬರ್ ತಿಂಗಳಲ್ಲಿ ಫಿಚ್ ಸಂಸ್ಥೆ ಜಿಡಿಪಿ ಬೆಳವಣಿಗೆಯನ್ನು 2021-22 ನೇ ಸಾಲಿನಲ್ಲಿ (ಏಪ್ರಿಲ್ 2021 ರಿಂದ ಮಾರ್ಚ್ 2022) ವರೆಗೆ ಶೇ.8.7 ಹಾಗೂ 2023 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ.10 ರ ಬೆಳವಣಿಗೆಯನ್ನು ಅಂದಾಜಿಸಿತ್ತು.
 
" ಮಾರ್ಚ್ 2022 ಕ್ಕೆ ಅಂತ್ಯಗೊಳ್ಳುವ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಶೇ.8.4 ಕ್ಕೆ ಇಳಿಕೆ ಮಾಡಲಾಗಿದೆ.  2023 ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಮುನ್ನೋಟ ಶೇ.10.3 ಕ್ಕೆ ಏರಿಕೆಯಾಗಬೇಕಿದೆ" ಎಂದು ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಫಿಚ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com