ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಹೂಡಿಕೆ ಬಗ್ಗೆ ವಿವರ ಕೊಡಿ: ಸ್ವಿಡ್ಜರ್ಲೆಂಡ್ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದ ಹಣಕಾಸು ಸಚಿವಾಲಯ

2019ರಿಂದ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ಗ್ರಾಹಕರು ಹೂಡಿಕೆ ಮಾಡಿರುವ ಹಣ ಕಡಿಮೆಯಾಗಿದ್ದರೂ ಕೂಡ 2020ರಲ್ಲಿ ವ್ಯಕ್ತಿಗಳು ಮತ್ತು ಘಟಕಗಳು ಹೂಡಿಕೆ ಮಾಡಿರುವ ಹಣದಲ್ಲಿ ಬದಲಾವಣೆಗಳಿಗೆ ಸಂಭವನೀಯ ಕಾರಣಗಳ ಮತ್ತು ವಿವರಗಳನ್ನು ಸ್ವಿಸ್ ಬ್ಯಾಂಕ್ ಅಧಿಕಾರಿಗಳಿಂದ ಕೇಂದ್ರ ಹಣಕಾಸು ಸಚಿವಾಲಯ ಕೇಳಿದೆ.
ಸ್ವಿಸ್ ಬ್ಯಾಂಕೊಂದರ ಚಿಹ್ನೆ
ಸ್ವಿಸ್ ಬ್ಯಾಂಕೊಂದರ ಚಿಹ್ನೆ
Updated on

ನವದೆಹಲಿ: 2019ರಿಂದ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ಗ್ರಾಹಕರು ಹೂಡಿಕೆ ಮಾಡಿರುವ ಹಣ ಕಡಿಮೆಯಾಗಿದ್ದರೂ ಕೂಡ 2020ರಲ್ಲಿ ವ್ಯಕ್ತಿಗಳು ಮತ್ತು ಘಟಕಗಳು ಹೂಡಿಕೆ ಮಾಡಿರುವ ಹಣದಲ್ಲಿ ಬದಲಾವಣೆಗಳಿಗೆ ಸಂಭವನೀಯ ಕಾರಣಗಳ ಮತ್ತು ವಿವರಗಳನ್ನು ಸ್ವಿಸ್ ಬ್ಯಾಂಕ್ ಅಧಿಕಾರಿಗಳಿಂದ ಕೇಂದ್ರ ಹಣಕಾಸು ಸಚಿವಾಲಯ ಕೇಳಿದೆ.

ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದ್ದರೂ ಕೂಡ ಎಷ್ಟು ಸಂಖ್ಯೆಯಲ್ಲಿ ಜನರು ಹೂಡಿಕೆ ಮಾಡಿದ್ದಾರೆ, ಎಷ್ಟು ಮಾಡಿದ್ದಾರೆ ಎಂಬ ಮಾಹಿತಿಯಿಲ್ಲ ಎಂದು ಸಚಿವಾಲಯ ಹೇಳಿದೆ.

ಭಾರತ ಮೂಲದ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳನ್ನೂ ಒಳಗೊಂಡಂತೆ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೂಡಿಕೆ ಮಾಡಿದ ಹಣವು 2020ರಲ್ಲಿ 13 ವರ್ಷಗಳ ಗರಿಷ್ಠ 2.55 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (20,700 ಕೋಟಿ ರೂ.) ಜಿಗಿದಿದೆ. ಆದರೆ ಗ್ರಾಹಕರ ಠೇವಣಿಗಳು ಕುಸಿಯುತ್ತಿವೆ ಎಂದು ಕಳೆದ ಜೂನ್ 17ರಂದು ಸ್ವಿಡ್ಜರ್ಲೆಂಡ್ ನ ಕೇಂದ್ರೀಯ ಬ್ಯಾಂಕ್ ಹೇಳಿದೆ.

ಸ್ವಿಟ್ಜರ್ಲೆಂಡ್ ನಲ್ಲಿ ಭಾರತೀಯರು ಹೊಂದಿರುವ ಹೆಚ್ಚು ಚರ್ಚಾಸ್ಪದವಾಗಿರುವ ಕಪ್ಪು ಹಣದ ಪ್ರಮಾಣವನ್ನು ಇದು ಸೂಚಿಸುವುದಿಲ್ಲ. ಇದಲ್ಲದೆ, ಈ ಅಂಕಿಅಂಶಗಳು ಸ್ವಿಸ್ ಬ್ಯಾಂಕುಗಳಲ್ಲಿ ಮೂರನೇ ರಾಷ್ಟ್ರದ ಸಂಸ್ಥೆಗಳ ಹೆಸರಿನಲ್ಲಿ ಭಾರತೀಯರು, ಎನ್‌ಆರ್‌ಐಗಳು ಅಥವಾ ಇತರರು ಹೊಂದಿರಬಹುದಾದ ಹಣವನ್ನು ಒಳಗೊಂಡಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಗ್ರಾಹಕರ ಠೇವಣಿ ವಾಸ್ತವವಾಗಿ 2019 ರ ಅಂತ್ಯದಿಂದ ಕುಸಿದಿದೆ. ವಿಶ್ವಾಸಾರ್ಹ ಸಂಸ್ಥೆಗಳ ಮೂಲಕ ಹೊಂದಿರುವ ಹಣವು 2019 ರ ಅಂತ್ಯದಿಂದ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಗ್ರಾಹಕರಿಂದ ಬರಬೇಕಾದ ಇತರ ಮೊತ್ತಗಳಲ್ಲಿ ಅತಿದೊಡ್ಡ ಹೆಚ್ಚಳವಾಗಿದೆ. ಇವುಗಳು ಬಾಂಡ್, ಸೆಕ್ಯುರಿಟೀಸ್ ಮತ್ತು ಇತರ ಹಣಕಾಸು ಸಾಧನಗಳ ರೂಪದಲ್ಲಿವೆ ಎಂದು ಸಚಿವಾಲಯ ಹೇಳಿದೆ.

ಭಾರತೀಯ ಕಂಪೆನಿಗಳು ಹೆಚ್ಚುತ್ತಿರುವ ವ್ಯಾಪಾರ ವಹಿವಾಟುಗಳು, ಭಾರತದಲ್ಲಿ ನೆಲೆಗೊಂಡಿರುವ ಸ್ವಿಸ್ ಬ್ಯಾಂಕ್ ಶಾಖೆಗಳ ವ್ಯವಹಾರದಿಂದಾಗಿ ಠೇವಣಿಗಳ ಹೆಚ್ಚಳ ಮತ್ತು ಸ್ವಿಸ್ ಮತ್ತು ಭಾರತೀಯ ಬ್ಯಾಂಕುಗಳ ನಡುವಿನ ಅಂತರ-ಬ್ಯಾಂಕ್ ವಹಿವಾಟಿನ ಹೆಚ್ಚಳ ಸೇರಿದಂತೆ ಠೇವಣಿಗಳ ಹೆಚ್ಚಳಕ್ಕೆ ಕಾರಣವಾಗಬಹುದಾದ ಕಾರಣಗಳನ್ನೂ ಸಚಿವಾಲಯ ಪಟ್ಟಿಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com