ಜಿಎಸ್‌ಟಿ ತೆರಿಗೆ ದರವನ್ನು ಕಡಿಮೆ ಮಾಡಿದೆ; 4 ವರ್ಷದಲ್ಲಿ 66 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಕೆಯಾಗಿದೆ: ಹಣಕಾಸು ಸಚಿವಾಲಯ

ಸರಕು ಮತ್ತು ಸೇವಾ ತೆರಿಗೆ ಆಡಳಿತವು ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ, ಹಣಕಾಸು ಸಚಿವಾಲಯ ಬುಧವಾರ ಜಿಎಸ್‌ಟಿ 66 ಕೋಟಿಗೂ ಹೆಚ್ಚು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ಮತ್ತು ಕಡಿಮೆ ತೆರಿಗೆ ದರಗಳಅನುಸರಣೆಯನ್ನು ಹೆಚ್ಚಿಸಲು ಸಹಾಯವಾಗಿದೆ ಎಂದು ಹೇಳಿದೆ.
ಜಿಎಸ್‌ಟಿ   ಕೌನ್ಸಿಲ್
ಜಿಎಸ್‌ಟಿ ಕೌನ್ಸಿಲ್
Updated on

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಆಡಳಿತವು ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ, ಹಣಕಾಸು ಸಚಿವಾಲಯ ಬುಧವಾರ ಜಿಎಸ್‌ಟಿ 66 ಕೋಟಿಗೂ ಹೆಚ್ಚು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ಮತ್ತು ಕಡಿಮೆ ತೆರಿಗೆ ದರಗಳಅನುಸರಣೆಯನ್ನು ಹೆಚ್ಚಿಸಲು ಸಹಾಯವಾಗಿದೆ ಎಂದು ಹೇಳಿದೆ.

ಅಬಕಾರಿ ಸುಂಕ, ಸೇವಾ ತೆರಿಗೆ ಮತ್ತು ವ್ಯಾಟ್ ಮತ್ತು 13 ಸೆಸ್‌ಗಳಂತಹ 17 ಸ್ಥಳೀಯ ಸುಂಕಗಳನ್ನು ಹಿಂಪಡೆದು ರಾಷ್ಟ್ರವ್ಯಾಪಿ ಜಿಎಸ್‌ಟಿಯನ್ನು ಜುಲೈ 1, 2017 ರಂದು ಜಾರಿಗೆ ತರಲಾಯಿತು.

ಎಲ್ಲಾ ತೆರಿಗೆ ಪಾವತಿದಾರರಿಗೆ ಜಿಎಸ್‌ಟಿ ಅನುಸರಣೆಯನ್ನು ಸರಳೀಕರಿಸಿದೆ ಮತ್ತು ಕೊರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಜಿಎಸ್‌ಟಿ ಕೌನ್ಸಿಲ್ ಹಲವಾರು ವ್ಯಾಪಾರ ಪ್ರಯೋಜನಕಾರಿ ಸ್ಪಷ್ಟೀಕರಣಗಳನ್ನು ಶಿಫಾರಸು ಮಾಡಿದೆ ಎಂದು ಸಚಿವಾಲಯವು ಟ್ವೀಟ್ ಗಳ ಸರಣಿಯಲ್ಲಿ ಹೇಳಿದೆ. ಜಿಎಸ್‌ಟಿ ಅಡಿಯಲ್ಲಿ ವಾರ್ಷಿಕ 40 ಲಕ್ಷ ರೂ.ಗಳ ವಹಿವಾಟು ಹೊಂದಿರುವ ವ್ಯವಹಾರಗಳನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಹೆಚ್ಚುವರಿಯಾಗಿ, 1.5 ಕೋಟಿ ರೂ.ಗಳ ವಹಿವಾಟು ಹೊಂದಿರುವವರು ಕಾಂಪೋನ್ಸೇಷನ್  ಯೋಜನೆಯನ್ನು ಆರಿಸಿಕೊಳ್ಳಬಹುದು ಮತ್ತು ಕೇವಲ 1 ಶೇಕಡಾ ತೆರಿಗೆಯನ್ನು ಪಾವತಿಸಬಹುದು. ಸೇವೆಗಳಿಗಾಗಿ, ವರ್ಷದಲ್ಲಿ 20 ಲಕ್ಷ ರೂ.ಗಳ ವಹಿವಾಟು ಹೊಂದಿರುವ ಉದ್ಯಮ ವ್ಯವಹಾರಗಳಿಗೆ ಗೆ ಜಿಎಸ್‌ಟಿ ವಿನಾಯಿತಿ ನೀಡಲಾಗುತ್ತದೆ. ಒಂದು ವರ್ಷದಲ್ಲಿ 50 ಲಕ್ಷ ರೂ.ಗಳ ವಹಿವಾಟು ಹೊಂದಿರುವ ಸೇವಾ ಪೂರೈಕೆದಾರರು ಸೇವೆಗಳಿಗೆ ಕಾಂಪೋನ್ಸೇಷನ್  ಯೋಜನೆಯನ್ನು ಆರಿಸಿಕೊಳ್ಳಬಹುದು ಮತ್ತು ಕೇವಲ 6 ಶೇಕಡಾ ತೆರಿಗೆಯನ್ನು ಪಾವತಿಸಬಹುದು.

"ಜಿಎಸ್‌ಟಿ ಗ್ರಾಹಕ ಮತ್ತು ತೆರಿಗೆ ಪಾವತಿದಾರ ಸ್ನೇಹಿಯಾಗಿದೆ ಎಂದು ಈಗ ಎಲ್ಲರೂ ಒಪ್ಪಿಕೊಂಡಿದ್ದಾರೆ. ಜಿಎಸ್‌ಟಿಗೆ ಹಿಂದಿನ ಹೆಚ್ಚಿನ ತೆರಿಗೆ ದರಗಳು ತೆರಿಗೆ ಪಾವತಿಸಲು ಕಠಿಣವಾಗುವಂತೆ ಇದ್ದವು. ಆದರೆ ಜಿಎಸ್‌ಟಿ ಅಡಿಯಲ್ಲಿ ಕಡಿಮೆ ತೆರಿಗೆ ದರ  ಅನುಸರಣೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ. 66 ಕೋಟಿಗಿಂತ ಹೆಚ್ಚಿನ ಜಿಎಸ್‌ಟಿ ರಿಟರ್ನ್ಸ್ ಇಲ್ಲಿಯವರೆಗೆ ಸಲ್ಲಿಸಲಾಗಿದೆ "ಎಂದು ಸಚಿವಾಲಯ ಟ್ವೀಟ್ ಮಾಡಿದೆ.

ಭಾರತದಾದ್ಯಂತದ ಅನೇಕ ಮಾರುಕಟ್ಟೆಗಳಲ್ಲಿ ರಾಜ್ಯ ರಾಜ್ಯಗಳಲ್ಲಿ ವಿಭಿನ್ನ ದರವನ್ನು ವಿಧಿಸುವುದರೊಂದಿಗೆ, ದೊಡ್ಡ ಅಂತರ ಮತ್ತು ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗಿತ್ತು. ಜಿಎಸ್‌ಟಿ ಅಡಿಯಲ್ಲಿ ಅನುಸರಣೆ ಸ್ಥಿರವಾಗಿ ಸುಧಾರಿಸುತ್ತಿದ್ದು, ಸುಮಾರು 1.3 ಕೋಟಿ ತೆರಿಗೆದಾರರನ್ನು ನೋಂದಾಯಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.  '4yearsofGST' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿರುವ ಸಚಿವಾಲಯ, ಜನರು ಪಾವತಿಸಬೇಕಾದ ತೆರಿಗೆಗಳ ದರವನ್ನು  ಜಿಎಸ್‌ಟಿ ಕಡಿಮೆ ಮಾಡಿದೆ ಎಂದು ಹೇಳಿದೆ. "ಆರ್‌ಎನ್‌ಆರ್ ಸಮಿತಿಯು ಶಿಫಾರಸು ಮಾಡಿದಂತೆ ರೆವಿನ್ಯೂ ನ್ಯೂಟ್ರಲ್ ದರ ಶೇಕಡಾ 15.3 ರಷ್ಟಿತ್ತು. ಇದಕ್ಕೆ ಹೋಲಿಸಿದರೆ, ಪ್ರಸ್ತುತ ಜಿಎಸ್‌ಟಿ ದರವು ಆರ್‌ಬಿಐ ಪ್ರಕಾರ ಕೇವಲ 11.6 ಶೇಕಡಾ ಮಾತ್ರವೇ ಆಗಿದೆ."

ಜಿಎಸ್‌ಟಿ ಅತ್ಯಂತ ಸಂಕೀರ್ಣವಾದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಗಮನಾರ್ಹವಾಗಿ ಸರಳವಾಗಿಸಿದೆ. ಇದಕ್ಕೆ ಮುನ್ನ ಪ್ರತಿ ರಾಜ್ಯದಲ್ಲಿ ವ್ಯವಹಾರ ಮಾಡಲು ಬಯಸುವ ಕಂಪನಿಯು 495 ವಿವಿಧ ಸಲ್ಲಿಕೆಗಳನ್ನು ಮಾಡಬೇಕಾಗಿತ್ತು. ಜಿಎಸ್‌ಟಿ ಅಡಿಯಲ್ಲಿ ಆ ಸಂಖ್ಯೆ ಕೇವಲ 12 ಕ್ಕೆ ಇಳಿದಿದೆ ಎಂದು ಅದು ಹೇಳಿದೆ.

ಜಿಎಸ್‌ಟಿ ಸಂಕೀರ್ಣ ಪರೋಕ್ಷ ತೆರಿಗೆ ರಚನೆಯನ್ನು ಸರಳ, ಪಾರದರ್ಶಕ ಮತ್ತು ತಂತ್ರಜ್ಞಾನ-ಚಾಲಿತ ತೆರಿಗೆ ಆಡಳಿತದೊಂದಿಗೆ ಬದಲಾಯಿಸಿದೆ ಮತ್ತು ಹೀಗಾಗಿ ಭಾರತವನ್ನು ಒಂದೇ ಸಾಮಾನ್ಯ ಮಾರುಕಟ್ಟೆಯಲ್ಲಿ ಸಂಯೋಜಿಸಿದೆ. ಸಾಮಾನ್ಯ ಜನರಿಗೆ ಮತ್ತು ವ್ಯಾಪಾರಕ್ಕೆ ಜಿಎಸ್‌ಟಿ ಅನುಸರಣೆ ಸುಲಭವಾಗುವಂತೆ ಕಾರ್ಯವಿಧಾನಗಳ ನಿರಂತರ ಸರಳೀಕರಣ ಮತ್ತು ದರ ರಚನೆಗಳ ತರ್ಕಬದ್ಧಗೊಳಿಸುವಿಕೆಯಿಂದ, ನಾವು ಮಾನವೀಯ ಸ್ಪರ್ಶದಿಂದ ದೇಶದ ಆರ್ಥಿಕ ಏಕೀಕರಣವನ್ನು ಸಾಧಿಸಲು ಸಾಧ್ಯವಾಯಿತು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಜಿಎಸ್‌ಟಿ  ಅಡಿಯಲ್ಲಿ, ಅಗತ್ಯ ವಸ್ತುಗಳ ಮೇಲೆ ಶೇಕಡಾ 5 ರಷ್ಟು ಕಡಿಮೆ ದರವನ್ನು ವಿಧಿಸುವ ಅಥವಾ ನಾಲ್ಕು ಹಂತಗಳ ದರದ ರಚನೆ ಇದ್ದು ಐಷಾರಾಮಿ ಕಾರುಗಳ ಮೇಲೆ ಶೇಕಡಾ 28 ರಷ್ಟು ಹೆಚ್ಚುವರಿ ದರವನ್ನು ವಿಧಿಸಲಾಗುತ್ತದೆ. ತೆರಿಗೆಯ ಇತರ ಹಂತಗಳೆಂದರೆ ಶೇಕಡಾ 12 ಮತ್ತು 18 ಆಗಿದೆ. ಜಿಎಸ್‌ಟಿಗೆ ಮುನ್ನ ಒಟ್ಟು ವ್ಯಾಟ್, ಅಬಕಾರಿ, ಸಿಎಸ್ಟಿ ಮತ್ತು ಅವುಗಳ ಕ್ಯಾಸ್ಕೇಡಿಂಗ್ ಪರಿಣಾಮವು ಗ್ರಾಹಕರಿಗೆ ಪಾವತಿಸಬೇಕಾದ ತೆರಿಗೆ ಶೇಕಡಾ 31ರಷ್ಟಿತ್ತು. ಜಿಎಸ್‌ಟಿ ಇದಕ್ಕೆ ಮುಕ್ತಿ ಹಾಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಟ್ಟುಗೂಡಿಸುವ ಜಿಎಸ್‌ಟಿ ಕೌನ್ಸಿಲ್ 44 ಬಾರಿ ಸಭೆ ಸೇರಿ ತೆರಿಗೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿಷದಪಡಿಸುತ್ತದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com