
ನವದೆಹಲಿ: ಮಹಾಮಾರಿ ಕೊರೋನಾ ಭೀಕರತೆ ಸೃಷ್ಟಿಸುತ್ತಿದ್ದು ದೇಶದಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸುರಕ್ಷೆಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ.
ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಕಂಪನಿಯ ನೌಕರನ ಕುುಟಂಬಕ್ಕೆ ಮುಂದಿನ 60 ವರ್ಷದ ತನಕ ವೇತನ ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಟಾಟಾ ಸ್ಟೀಲ್ ಸುತ್ತೋಲೆ ಹೊರಡಿಸಿದೆ.
ಕಂಪನಿಯ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದೆ. ಕೊರೋನಾದಿಂದ ನೌಕರ ಮೃತಪಟ್ಟರೆ ಈ ನೌಕರನ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ವೇತನವನ್ನು ನೀಡಲಿದೆ.
ವೇತನದ ಜೊತೆಗೆ ಮೆಡಿಕಲ್ ಸೌಲಭ್ಯಗಳು, ಹೌಸಿಂಗ್ ಫೆಸಿಲಿಟಿ ಮತ್ತು ನೌಕರರ ಮಕ್ಕಳ ಗ್ರ್ಯಾಜುವೇಶನ್ ತನಕದ ವೆಚ್ಚವನ್ನೂ ಕಂಪನಿ ಭರಿಸಲಿದೆ.
Advertisement