ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ.4.48 ಕ್ಕೆ ಏರಿಕೆ

ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ.4.48 ಕ್ಕೆ ಏರಿಕೆಯಾಗಿದೆ. ಸರ್ಕಾರ ನ.12 ರಂದು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಹಣದುಬ್ಬರ
ಹಣದುಬ್ಬರ
Updated on

ನವದೆಹಲಿ: ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ.4.48 ಕ್ಕೆ ಏರಿಕೆಯಾಗಿದೆ. ಸರ್ಕಾರ ನ.12 ರಂದು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರ 2020 ರ ಸೆಪ್ಟೆಂಬರ್ ತಿಂಗಳಲ್ಲಿ ಶೇ.4.35 ಹಾಗೂ ಅಕ್ಟೋಬರ್ ನಲ್ಲಿ ಶೇ.7.61 ರಷ್ಟಿತ್ತು.

ಆಹಾರ ಪದಾರ್ಥಗಳ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ.085 ರಷ್ಟಿದ್ದು, ಪ್ರಸಕ್ತ ತಿಂಗಳಲ್ಲಿ ಶೇ.0.68 ರಷ್ಟಿದೆ. 2021-22 ರ ಅವಧಿಯಲ್ಲಿ ಆರ್ ಬಿಐ  ಸಿಪಿಐ ಹಣದುಬ್ಬರವನ್ನು ಶೇ.5.4 ರಷ್ಟಕ್ಕೆ ಅಂದಾಜಿಸಿತ್ತು. ಎರಡನೇ ತ್ರೈಮಾಸಿಕದಲ್ಲಿ ಶೇ.5.1, ಮೂರನೇ ತ್ರೈಮಾಸಿಕದಲ್ಲಿ ಶೇ.4.5 ರಷ್ಟು ಹಾಗೂ ಕೊನೆಯ ತ್ರೈಮಾಸಿಕದಲ್ಲಿ ಶೇ.5.8 ರಷ್ಟಕ್ಕೆ ಹಣದುಬ್ಬರವನ್ನು ಅಂದಾಜಿಸಿತ್ತು.

ಆರ್ ಬಿಐ ತನ್ನ ದ್ವೈಮಾಸಿಕ ವಿತ್ತ ನೀತಿಯನ್ನು ರೂಪಿಸುವಾಗ ಸಿಪಿಐ ಆಧಾರಿತ ಹಣದುಬ್ಬರವನ್ನು ಪರಿಗಣಿಸುತ್ತದೆ. 2022-23 ರ ಏಪ್ರಿಲ್-ಜೂನ್ ಅವಧಿಯ ಚಿಲ್ಲರೆ ಹಣದುಬ್ಬರ ಶೇ.5.2 ರಷ್ಟಕ್ಕೆ ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com