ಉತ್ತಮ ಲಸಿಕೆ ಪ್ರಮಾಣ ಭಾರತದ ಆರ್ಥಿಕತೆಗೆ ಸಹಕಾರಿ: ಐಎಂಎಫ್

ಭಾರತ ಲಸಿಕೆ ವಿಷಯವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದು ಇದು ದೇಶದ ಆರ್ಥಿಕತೆ ಉತಮಗೊಳ್ಳುವುದಕ್ಕೂ ಸಹಕಾರಿಯಾಗಿದೆ ಎಂದು ಐಎಂಎಫ್ ನ ಉನ್ನತ ಅಧಿಕಾರಿ ಗೀತಾ ಗೋಪಿನಾಥ್ ಹೇಳಿದ್ದಾರೆ. 
ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್
ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್
Updated on

ನವದೆಹಲಿ: ಭಾರತ ಲಸಿಕೆ ವಿಷಯವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದು ಇದು ದೇಶದ ಆರ್ಥಿಕತೆ ಉತಮಗೊಳ್ಳುವುದಕ್ಕೂ ಸಹಕಾರಿಯಾಗಿದೆ ಎಂದು ಐಎಂಎಫ್ ನ ಉನ್ನತ ಅಧಿಕಾರಿ ಗೀತಾ ಗೋಪಿನಾಥ್ ಹೇಳಿದ್ದಾರೆ. 

2021 ನೇ ವರ್ಷದಲ್ಲಿ ಆರ್ಥಿಕ ಮುನ್ನೋಟವನ್ನು ಐಎಂಎಫ್ ಬಿಡುಗಡೆ ಮಾಡಿದ್ದು ಬೆಳವಣಿಗೆ ದರವನ್ನು ಶೇ.9.5 ರಷ್ಟಕ್ಕೆ ಅಂತಾರಾಷ್ಟ್ರೀಯ ಸಂಸ್ಥೆ ನಿಗದಿಪಡಿಸಿದೆ.

ಈ ವರ್ಷ ಭಾರತಕ್ಕೆ ನಾವು ಆರ್ಥಿಕ ಮುನ್ನೋಟವನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ.  ಅಂದರೆ ಭಾರತ ಅತ್ಯಂತ ಸವಾಲಿನ ಎರಡನೇ ಅಲೆಯ ಕೋವಿಡ್-19 ನ್ನು ಸಮರ್ಥವಾಗಿ ನಿಭಾಯಿಸಿದೆ. ಪರಿಣಾಮ ಜುಲೈ ನಲ್ಲಿ ಕಡಿಮೆ ಪ್ರಕರಣಗಳು ದಾಖಲಾಗುವುದಕ್ಕೆ ಸಾಧ್ಯವಾಯಿತು. ಆದರೆ ನಮ್ಮ ಆರ್ಥಿಕ ಮುನ್ನೋಟದಲ್ಲಿ ಭಾರತದ ಮಟ್ಟಿಗೆ ಯಾವುದೇ ಬದಲಾವಣೆಗಳೂ ಇಲ್ಲ ಎಂದು ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟಿದ್ದಾರೆ. 

ವಿಶ್ವ ಆರ್ಥಿಕ ಮುನ್ನೋಟದಲ್ಲಿ ಭಾರತಕ್ಕೆ ಸಂಬಂಧಿಸಿದ ಮುನ್ನೋಟದಲ್ಲಿ ಏನೂ ಬದಲಾವಣೆ ಇಲ್ಲ. ಕಳೆದ ಬಾರಿಯಷ್ಟೇ ಇದೆ. 2021 ರಲ್ಲಿ ಶೇ.3 ರಷ್ಟು ಪಾಯಿಂಟ್ ಗಳಿವೆ ಹಾಗೂ ಏಪ್ರಿಲ್ ನ  ಶೇ.1.6 ರಷ್ಟು ಏಪ್ರಿಲ್ ನ ಪ್ರಕ್ಷೇಪಗಳಿಗಿಂತ ಪಾಯಿಂಟ್ ಗಳಷ್ಟು ಕುಸಿತವಿದೆ ಎಂದು ಐಎಂಎಫ್ ಹೇಳಿದೆ.

ಐಎಂಎಫ್ ಹಾಗೂ ವಿಶ್ವಬ್ಯಾಂಕ್ ನ ವಾರ್ಷಿಕ ಸಭೆಗೂ ಮುನ್ನ ಡಬ್ಲ್ಯುಇಒ (ವಿಶ್ವ ಆರ್ಥಿಕ ಮುನ್ನೋಟ) ದಲ್ಲಿ ಕೋವಿಡ್-19 ನಿಂದ ಶೇ.7.3 ರಷ್ಟು ಕುಸಿತ ಕಂಡಿದ್ದ ಭಾರತದ ಆರ್ಥಿಕತೆ 2021 ರಲ್ಲಿ ಶೇ.9.5 ರಷ್ಟು ಬೆಳೆಯಲಿದೆ ಹಾಗೂ 2022 ರಲ್ಲಿ ಶೇ.8.5 ರಷ್ಟಿರಲಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ಜಾಗತಿಕ ಮಟ್ಟದಲ್ಲಿ 2021 ನೇ ಸಾಲಿನಲ್ಲಿ ಶೇ.5.9 ರಷ್ಟು ಬೆಳವಣಿಗೆ ದಾಖಲಾಗಿದ್ದು, 2022 ರಲ್ಲಿ ಶೇ.4.9 ರಷ್ಟಿರಲಿದೆ. ಅಮೆರಿಕದ ಬೆಳವಣಿಗೆ ಈ ವರ್ಷ ಶೇ.6 ರಷ್ಟು ಹಾಗೂ ಮುಂದಿನ ವರ್ಷ ಶೇ.5.2 ರಷ್ಟು ಇರಲಿದೆ. ಇತ್ತ ಚೀನಾ ಈ ವರ್ಷ ಐಎಂಎಫ್ ಪ್ರಕಾರ ಶೇ.8 ರಷ್ಟು ಹಾಗೂ 2022 ರಲ್ಲಿ ಶೇ.5.6 ರಷ್ಟು ಬೆಳವಣಿಗೆ ಇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com