ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ ಹೀಗಿದೆ 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮಂಗಳವಾರ ನಾಲ್ಕನೇ ಬಾರಿ ಏರಿಕೆ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದೇಶಾದ್ಯಂತ ಇಂದು ಏರಿಕೆಯಾಗಿದೆ.
Published on

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮಂಗಳವಾರ ನಾಲ್ಕನೇ ಬಾರಿ ಏರಿಕೆ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದೇಶಾದ್ಯಂತ ಇಂದು ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 25 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 27 ಪೈಸೆ ಹೆಚ್ಚಳವಾಗಿದೆ.

ಕಳೆದ ಜುಲೈ 17ರ ನಂತರ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಏರಿಕೆ ಕಂಡರೆ ಡೀಸೆಲ್ ಬೆಲೆ ಮೊನ್ನೆ ಸೆಪ್ಟೆಂಬರ್ 24ರ ನಂತರ ನಾಲ್ಕನೇ ಬಾರಿ ಏರಿಕೆಯಾಗಿದೆ. 

ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 101.39 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 89.57 ಪೈಸೆಯಷ್ಟಾಗಿದೆ.2018ರ ನಂತರ ತೈಲಗಳ ಬೆಲೆ ಇಷ್ಟೊಂದು ಏರಿಕೆಯಾಗುತ್ತಿರುವುದು ಇದೇ ಮೊದಲು.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (IOC), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೆಪ್ಟೆಂಬರ್ 24 ರಿಂದ ದಿನಂಪ್ರತಿ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ತೈಲ ದರಗಳು ಕಡಿಮೆಯಾದಾಗ, ದೆಹಲಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳು ಲೀಟರ್ ಗೆ 0.65 ಮತ್ತು 1 ರೂಪಾಯಿ 25 ಪೈಸೆಗೆ ಇಳಿಕೆಯಾಗಿವೆ. ಅದಕ್ಕೂ ಮುನ್ನ, ಮೇ 4 ರಿಂದ ಜುಲೈ 17 ರ ನಡುವೆ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ  11 ರೂಪಾಯಿ 44 ಪೈಸೆಗೆ ಹೆಚ್ಚಿಸಲಾಗಿತ್ತು. ಈ ಅವಧಿಯಲ್ಲಿ ಡೀಸೆಲ್ ದರ 9 ರೂಪಾಯಿ 14ಪೈಸೆಯಷ್ಟು ಏರಿಕೆಯಾಗಿತ್ತು. 

ಭಾರತವು ತನ್ನ ತೈಲ ಅಗತ್ಯಗಳ ಶೇಕಡಾ 85 ರಷ್ಟು ಪೂರೈಸಲು ಆಮದುಗಳ ಮೇಲೆ ಅವಲಂಬಿತವಾಗಿದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ: 
ಚೆನ್ನೈ: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 99.15 ರೂ. ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 94.17 ರೂ
ಕೋಲ್ಕತಾ: ಲೀಟರ್‌ಗೆ 101.87 ರೂ. ಲೀಟರ್‌ಗೆ 92.67 ರೂ
ಪುಣೆ: ಲೀಟರ್‌ಗೆ 107.02 ರೂ. ಡೀಸೆಲ್ ಬೆಲೆ - ಲೀಟರ್‌ಗೆ 95.30 ರೂ
ಬೆಂಗಳೂರು: ಲೀಟರ್‌ಗೆ 104.92 ರೂ. ಲೀಟರ್‌ಗೆ 95.06 ರೂ
ಹೈದರಾಬಾದ್: ಲೀಟರ್‌ಗೆ 105.48 ರೂ. ಲೀಟರ್‌ಗೆ 97.74 ರೂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com