ಭಾರತದ ಆರ್ಥಿಕ ಚಟುವಟಿಕೆ ಪಡೆದುಕೊಳ್ಳುತ್ತಿದೆ ವೇಗ; ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ: ಮೂಡೀಸ್

ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಪರಿಣಾಮವಾಗಿ ಭಾರತದ ಆರ್ಥಿಕ ಚಟುವಟಿಕೆ ವೇಗ ಪಡೆದುಕೊಳ್ಳುತ್ತಿದ್ದು ಮತ್ತಷ್ಟು ಸಕಾರಾತ್ಮಕ ಬೆಳವಣಿಗೆ ಭವಿಷ್ಯದಲ್ಲಿ ಸಾಧ್ಯವಿದೆ ಎಂದು ಮೂಡೀಸ್ ಹೇಳಿದೆ.
ಮೂಡೀಸ್
ಮೂಡೀಸ್

ನವದೆಹಲಿ: ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಪರಿಣಾಮವಾಗಿ ಭಾರತದ ಆರ್ಥಿಕ ಚಟುವಟಿಕೆ ವೇಗ ಪಡೆದುಕೊಳ್ಳುತ್ತಿದ್ದು ಮತ್ತಷ್ಟು ಸಕಾರಾತ್ಮಕ ಬೆಳವಣಿಗೆ ಭವಿಷ್ಯದಲ್ಲಿ ಸಾಧ್ಯವಿದೆ ಎಂದು ಮೂಡೀಸ್ ಹೇಳಿದೆ.

ಮೂಡೀಸ್ ಹೂಡಿಕೆ ಸೇವೆಗಳು ಮಂಗಳವಾರದಂದು ವರದಿ ಪ್ರಕಟಿಸಿದ್ದು, ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಿದ್ದು ವಿಶ್ವದಾದ್ಯಂತ ಹಲವು ಆರ್ಥಿಕತೆಗಳು ಪುನಃ ತೆರೆದುಕೊಳ್ಳುತ್ತಿರುವುದರಿಂದ ಮತ್ತಷ್ಟು ಏರಿಳಿತಗಳು ಉಂಟಾಗಲಿವೆ ಎಂದು ಹೇಳಿದೆ.

ಆಗಸ್ಟ್ ತಿಂಗಳ ಜಾಗತಿಕ ಮ್ಯಾಕ್ರೋ ಔಟ್ ಲುಕ್-2021-22 ಅಪ್ಡೇಟ್ ನ್ನು ಮೂಡೀಸ್ ಪ್ರಕಟಿಸಿದ್ದು, ಮೂಡೀಸ್ ಭಾರತದ ಬೆಳವಣಿಗೆ ಮುನ್ನೋಟವನ್ನು 2021 ರಲ್ಲಿ ಶೇ.9.6 ಹಾಗೂ 2022 ರಲ್ಲಿ ಶೇ.7 ರಷ್ಟಕ್ಕೆ ನಿಗದಿಪಡಿಸಿದೆ.

ರೇಟಿಂಗ್ ಏಜೆನ್ಸಿ ಆರ್ ಬಿಐ ಗೂ ಸಲಹೆ ನೀಡಿದ್ದು,  ತನ್ನ ನೀತಿಯನ್ನು ಬೆಳವಣಿಗೆ ಸುಧಾರಣೆ ಕಾಣುವವರೆಗೂ ಯಥಾ ಸ್ಥಿತಿ ಮುಂದುವರೆಸುವಂತೆ ಹೇಳಿದೆ.

"ಆರ್ ಬಿಐ ತನ್ನ ನೀತಿಯನ್ನು ಯಥಾಸ್ಥಿತಿ ಮುಂದುವರೆಸಲಿದೆ ಎಂಬ ನಿರೀಕ್ಷೆ ಇದೆ ಎಂದು ಮೂಡೀಸ್ ಹೇಳಿದೆ.

2020-21 ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.7.3 ಕ್ಕೆ ಕುಸಿತ ಕಂಡಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಪ್ರಾರಂಭದಲ್ಲಿ ಎರಡು ಅಂಕಿಗಳಲ್ಲಿರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕೋವಿಡ್-19 ನ 2 ನೇ ಅಲೆಯ ತೀವ್ರತೆಯ ಕಾರಣ ಹಲವೆಡೆ ಲಾಕ್ ಡೌನ್ ಮಾಡಿದ ಪರಿಣಾಮ ಅಂದಾಜಿನಲ್ಲಿ ಆರ್ಥಿಕ ಬೆಳವಣಿಗೆ ದರವನ್ನು ಕಡಿತಗೊಳಿಸಲಾಗಿತ್ತು.

ಮೂಡೀಸ್ ಜೂನ್ ನಲ್ಲಿ ಮಾರ್ಚ್ 2022 ರಲ್ಲಿ ಕೊನೆಯಾಗುವ ಆರ್ಥಿಕ ವರ್ಷದ ವೇಳೆಗೆ ಶೇ.9.3 ರಷ್ಟು ಬೆಳವಣಿಗೆಯನ್ನು ಅಂದಾಜಿಸಿತ್ತು.

ಇದೇ ವೇಳೆ ಮೂಡಿಸ್ ಜಿ-20 ಆರ್ಥಿಕತೆಗಳ ಅಂದಾಜನ್ನೂ ಮಂಡಿಸಿದ್ದು 2021 ರಲ್ಲಿ ಜಿ-20 ಆರ್ಥಿಕತೆಗಳು ಶೇ.6.2 ರಷ್ಟು ಬೆಳವಣಿಗೆ ಸಾಧಿಸಲಿವೆ ಎಂದು ವಿಶ್ಲೇಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com